ಹೊಸ ಗೆಟಪ್‌ನಲ್ಲಿ ಬಂದ್ರಲ್ಲ ಹಾಸ್ಯನಟ ಮಿತ್ರ; ಫೋಟೊಗಳು ವೈರಲ್

ಕನ್ನಡ ಚಿತ್ರರಂಗದ ಹಾಸ್ಯನಟ ಮಿತ್ರ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯಿಂದ ಮೋಡಿ ಮಾಡಿದ ಶಿನು ಜಾರ್ಜ್ ಕನ್ನಡಿಗರಿಗೆ ಮಾತ್ರ ಮಿತ್ರ ಎಂದೇ ಚಿರಪರಿಚಿತ.

2003ರಲ್ಲಿ ಶಿವಣ್ಣ ನಟನೆಯ 'ಶ್ರೀರಾಮ್' ಚಿತ್ರದ ಮೂಲಕ ಮಿತ್ರ ಚಿತ್ರರಂಗಕ್ಕೆ ಬಂದವರು. 'ಪಾಪ ಪಾಂಡು' ಹಾಗೂ 'ಸಿಲ್ಲಿ ಲಲ್ಲಿ' ಧಾರಾವಾಹಿಗಳಲ್ಲಿ ತಮ್ಮ ಹಾಸ್ಯದಿಂದ ಮನೆಮನೆ ತಲುಪಿದ್ದರು. ಯೋಗರಾಜ್ ಭಟ್‌ರ 'ಮನಸಾರೆ' ಚಿತ್ರದಲ್ಲಿ ಬಟ್ಟೆ ಬ್ಯಾಡ ಅನ್ನೊ ಕ್ಯಾರೆಕ್ಟರ್, 'ಪಂಚರಂಗಿ' ಸಿನಿಮಾದ ಜ್ಯೋತಿಷಿ ಪಾತ್ರ ಹಿಂಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೇ ಬೆಳೆಯುತ್ತದೆ. ಈಗಾಗಲೇ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಿತ್ರ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Kannada comedian mithra looks super fit in new look for Karavali

2018ರಲ್ಲಿ 'ರಾಗಾ' ಎನ್ನುವ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಇದು ಒಂದು ವಿಭಿನ್ನ ಪ್ರಯತ್ನವಾಗಿತ್ತು. ಚಿತ್ರದಲ್ಲಿ ಕಣ್ಣು ಕಾಣದ ಇಬ್ಬರು ವಿಶೇಷ ಚೇತನರ ಪ್ರೇಮಕಥೆ ಚಿತ್ರದಲ್ಲಿತ್ತು. 'ರಾಗಾ' ಸಿನಿಮಾ ಬಿಡುಗಡೆ ಹೊತ್ತಿನಲ್ಲೇ 'ಬಾಹುಬಲಿ' ಸಿನಿಮಾ ತೆರೆಗೆ ಬಂದಿತ್ತು. ಹಾಗಾಗಿ ಸರಿಯಾಗಿ ಥಿಯೇಟರ್‌ಗಳು ಸಿಗದೇ ಮಿತ್ರ ಕೈಸುಟ್ಟುಕೊಳ್ಳುವಂತಾಗಿತ್ತು. ಸಿನಿಮಾ ಬಿಟ್ಟು ಉದ್ಯಮ ಕ್ಷೇತ್ರದಲ್ಲಿ ಕೂಡ ಮಿತ್ರ ಗುರ್ತಿಸಿಕೊಂಡಿದ್ದಾರೆ.

ಕೇರಳ ಮೂಲದ ಮಿತ್ರ ಕನ್ನಡದವರೇ ಆಗಿ ಹೋಗಿದ್ದಾರೆ. ಬಡ ಕುಟುಂಬದಿಂದ ಬಂದ ಬಳಿಕ ದೊಡ್ಡ ಬಾಣಸಿಗರಾಗಿ ಗುರ್ತಿಸಿಕೊಂಡರು. ಸ್ಟಾರ್‌ ಹೋಟೆಲ್‌ಗಳಲ್ಲಿ ವೆರೈಟಿ ವೆರೈಟಿ ಅಡುಗೆ ಮಾಡುವ ಪ್ರವೀಣರು. ಸಾವಿರಾರು ಕಚಗುಳಿ ಇಡೋ ಕಾಮಿಡಿ ಶೋಗಳನ್ನ ನಡೆಸಿಕೊಟ್ಟಿದ್ದಾರೆ. ಈಗಲ್ಲೂ ಅವಕಾಶ ಬಂದಾಗೆಲ್ಲ ಜನರನ್ನು ನಗಿಸುವ ಕಾಯಕ ಮಾಡುತ್ತಾರೆ. ವೆಡಿಂಗ್ ಪ್ಲಾನ್‌ಗಳನ್ನೂ ಕೂಡ ಸಖತ್ ಕ್ರಿಯೆಟಿವ್ ಆಗಿ ಪ್ಲಾನ್ ಮಾಡ್ತಾರೆ ಜಾಣೇಶ.

ಇತ್ತೀಚೆಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ 'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ಮಾತು ಬಾರದ ವಿಶೇಷ ಚೇತನ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಿತ್ರ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಒಂದು ವಿಶೇಷ ಗೆಟಪ್‌ನಲ್ಲಿ ಮಿತ್ರ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಎಂದೂ ಕೂಡ ಗಡ್ಡ ಮೀಸೆ ಬಿಡದ ಮಿತ್ರ 'ಕರಾವಳಿ' ಚಿತ್ರದ ಪಾತ್ರಕ್ಕಾಗಿ ಫಸ್ಟ್ ಟೈಮ್ ವೈಟ್ ಗಡ್ಡ- ಮೀಸೆ ಬಿಟ್ಟು ಪಾತ್ರಕ್ಕೆ ಎರಡು ತಿಂಗಳು ಜಿಮ್‌ನಲ್ಲಿ ಕಸರತ್ತು ನಡೆಸಿದ್ದಾರೆ. 95 ಕೆಜಿ ತೂಕ ಇದ್ದವರು 25 ಕೆಜಿ ತೂಕ ಇಳಿಸಿ 60ವರ್ಷ ವಯಸಾದ ವ್ಯಕ್ತಿಯ ಪಾತ್ರವನ್ನ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಮತ್ತೊಂದು ಶೇಡ್‌ಗಾಗಿ ಮತ್ತೆ 15 ಕೆಜಿ ತೂಕ ಇಳಿಸಿ ಕ್ಯಾಮರಾ ಮುಂದೆ ನಿಲ್ಲಲಿದ್ದಾರೆ. ಸದ್ಯ ಮಿತ್ರ ಹೊಸ ಲುಕ್ ಫೋಟೊಗಳು ವೈರಲ್ ಆಗ್ತಿದೆ.

Kannada comedian mithra looks super fit in new look for Karavali

ಪ್ರದೀಪ್ ನಿರ್ದೇಶನದ ಕೋಮಲ್ ಕುಮಾರ್ ಮತ್ತು ಸಹನಾಮೂರ್ತಿ ನಿರ್ಮಾಣದ 'ಯಲ್ಲಾಕುನ್ನಿ' ಚಿತ್ರದ ವಿಶೇಷ ಪಾತ್ರದಲ್ಲಿ ಕೂಡ ಮಿತ್ರ ನಟಿಸುತ್ತಿದ್ದಾರೆ. ಸುಗಂಧ ರಾಜ ಎನ್ನುವ ಕಾಮಿಡಿ ಕಮ್ ವಿಲನ್ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾರೆ. ಮುಂದೆ ಮಗದಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವ ಉತ್ಸಾಹದಲ್ಲಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹಾಸ್ಯನಟನಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

More from Filmibeat

English summary
Mithra As comedy Villain In Prajwal devaraj's Karavali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X