ಚಿರತೆಯನ್ನು ದತ್ತು ಪಡೆದ ಹಾಸ್ಯ ನಟ ಚಿಕ್ಕಣ್ಣ
ನಟ ಚಿಕ್ಕಣ್ಣ ತೆರೆ ಮೇಲೆ ಬಂದರೇ ಸಾಕು ಸಿನಿಮಾ ನೋಡುವ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಾರೆ. ಸದ್ಯ, ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ ಅಂದರೆ ಅದು ಚಿಕ್ಕಣ್ಣ.
ಸಿನಿಮಾದಲ್ಲಿ ಕಾಮಿಡಿ ಮಾಡುವುದು ಮಾತ್ರವಲ್ಲದೆ ಸಿನಿಮಾ ಆಚೆಗಿನ ತಮ್ಮ ಕೆಲಸದಿಂದ ಇದೀಗ ಚಿಕ್ಕಣ್ಣ ಮೆಚ್ಚುಗೆ ಪಡೆದಿದ್ದಾರೆ. ಚಿಕ್ಕಣ್ಣ ಮೈಸೂರು ಮೃಗಾಲಯದಲ್ಲಿ ಚಿರತೆಯನ್ನು ದತ್ತು ಪಡೆದಿದ್ದಾರೆ.
35 ಸಾವಿರ ಹಣ ನೀಡಿ ಒಂದು ವರ್ಷದ ಅವಧಿಗೆ ಚಿರತೆಯನ್ನು ಚಿಕ್ಕಣ್ಣ ದತ್ತು ಪಡೆದಿದ್ದಾರೆ. ತಾವು ದತ್ತು ತೆಗೆದುಕೊಂಡ ಚಿರತೆಗೆ ಭೈರ ಎಂದು ನಾಮಕರಣ ಮಾಡಿದ್ದಾರೆ.

ಚಿಕ್ಕಣ್ಣ ಮಾತ್ರವಲ್ಲದೆ ಅವರ ಜೊತೆಗಿನ ಹಲವು ಸ್ನೇಹಿತರು ಪ್ರಾಣಿಗಳ ದತ್ತು ಸ್ವೀಕಾರ ಪಡೆದಿದ್ದಾರೆ. ಚಿಕ್ಕಣ್ಣ ಸ್ನೇಹಿತರಾದ ಸಿದ್ದೇಗೌಡ, ಮೋಹನ್ ಕುಮಾರ್, ತಿಮ್ಮಯ್ಯ, ಸೋಮು ಕೆಲ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ನಟ ಚಿಕ್ಕಣ್ಣ ಹಾಗೂ ಅವರ ಸ್ನೇಹಿತರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಈ ಹಿಂದೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸೃಜನ್ ಲೋಕೇಶ್ ಸಹ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದರು.
ಇತ್ತೀಚಿಗಷ್ಟೆ 'ನಟ ಸಾರ್ವಭೌಮ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಚಿಕ್ಕಣ್ಣ ಅದರ ನಂತರ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











