ಖ್ಯಾತ ಹಾಸ್ಯನಟ ಮೈಕಲ್ ಮಧು ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಮೈಕಲ್ ಮಧು ಇಂದು ನಿಧನರಾಗಿದ್ದಾರೆ. ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಅವರು ನಿಧರಾಗಿದ್ದಾರೆ.

ಮೈಕಲ್ ಮಧು ಅವರು ಇಂದು ಮಧ್ಯಾಹ್ನ ಮನೆಯಲ್ಲಿ ಕುಸಿದು ಬಿದ್ದರು. ಅವರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.

 Kannada Comedy Actor Michel Madhu Passed Away

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಮೈಕಲ್ ಮಧು ಅವರು ತಮ್ಮ ವಿಶಿಷ್ಟ ಶೈಲಿಯ ಹಾಸ್ಯಾಭಿನಯಕ್ಕೆ ಖ್ಯಾತರಾಗಿದ್ದರು.

ಹಲವು ಸಿನಿಮಾಗಳಲ್ಲಿ ಪಾತ್ರವಹಿಸಿದ್ದ ಮಧು

ಹಲವು ಸಿನಿಮಾಗಳಲ್ಲಿ ಪಾತ್ರವಹಿಸಿದ್ದ ಮಧು

ಮೈಕಲ್ ಮಧು ಅವರು ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಎಕೆ 47, ಎ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಕಾಶಿನಾಥ್ ಸಿನಿಮಾಗಳು ಹೆಸರು ತಂದಿದ್ದವು

ಕಾಶಿನಾಥ್ ಸಿನಿಮಾಗಳು ಹೆಸರು ತಂದಿದ್ದವು

ಕಾಶಿನಾಥ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೈಕಲ್ ಮಧು. 85 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಶಿನಾಥ್ ನಿಧನರಾದಾಗ ಆಸ್ಪತ್ರೆಗೆ ಬಂದಿದ್ದ ಅವರು ಅತೀವ ದುಃಖ ವ್ಯಕ್ತಪಡಿಸಿದ್ದರು.

ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ

ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ

ಮೈಕಲ್ ಮಧು ಅವರಿಗೆ ಹೆಂಡತಿ, ಇಬ್ಬರು ಮಕ್ಕಳಿದ್ದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮಧು ಅವರ ಅಂತ್ಯಸಂಸ್ಕಾರ ನಾಳೆ ನಡೆಯುವ ಸಾಧ್ಯತೆ ಇದೆ.

ನೃತ್ಯಗಾರರಾಗುವ ಕನಸು ಕಂಡಿದ್ದರು

ನೃತ್ಯಗಾರರಾಗುವ ಕನಸು ಕಂಡಿದ್ದರು

ಮೈಕಲ್ ಮಧು ಅವರಿಗೆ ನೃತ್ಯ ನಿರ್ದೇಶಕ ಆಗಬೇಕೆಂಬ ಆಸೆ ಇತ್ತು, ಅವರು ಉತ್ತಮ ಡಾನ್ಸರ್ ಸಹ ಆಗಿದ್ದರು. ಹಾಗಾಗಿಯೇ ಅವರ ಹೆಸರಿನ ಮುಂದೆ ಮೈಕಲ್ ಎಂದು ಸೇರಿಸಿಕೊಂಡಿತ್ತು. ಆದರೆ ನೃತ್ಯಗಾರರಾಗಿ ಅವಕಾಶ ಸಿಗದ ಕಾರಣ ನಟರಾಗಿ ಮುಂದುವರೆದರು.

More from Filmibeat

English summary
Famous Kannada comedy actor Michel Madhu passed away on May 13.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X