twitter
    For Quick Alerts
    ALLOW NOTIFICATIONS  
    For Daily Alerts

    ನಂದಕಿಶೋರ್ ಅಡ್ಡಾದಿಡ್ಡಿ ನಿರ್ದೇಶಕ ಅಲ್ಲ, ಶರಣ್

    By Rajendra
    |
    <ul id="pagination-digg"><li class="next"><a href="/news/victory-sharan-interview-will-rule-the-roost-076816.html">Next »</a></li></ul>

    ಹಾಸ್ಯನಟ ಶರಣ್ ಅಭಿನಯದ 'V' ಸಿಂಬಲ್ ಚಿತ್ರ ಇದೇ ಶುಕ್ರವಾರ (ಆ.23) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದ ವಿಶೇಷಗಳ ಬಗ್ಗೆ ಶರಣ್ ಹೃದಯ ತುಂಬಿ ಒನ್ಇಂಡಿಯಾ ಕನ್ನಡ ಜೊತೆ ಮಾತನಾಡಿದರು. ಬಹುಪಾಲು ಚಿತ್ರಗಳಲ್ಲಿ ಒದೆ ತಿಂದು ಪ್ರೇಕ್ಷಕರನ್ನು ನಗಿಸುವ ಪಾತ್ರಗಳನ್ನು ಪೋಷಿಸಿರುವ ಶರಣ್ ಇದೇ ಮೊದಲ ಬಾರಿ ಈ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ ಆನಂದಿಸಿ.

    1. ಈ ಬಾರಿ ಸಿಂಬಲ್ ನಲ್ಲೇ ಚಿತ್ರ ಮಾಡಿದ್ದೀರಾ? ಏನಿದರ ವಿಶೇಷ?
    ಈ ಚಿತ್ರ ಬರೀ ಸಿಂಬಲ್ ಮಾತ್ರವಲ್ಲ. ಒಂದಷ್ಟು ವಿಚಾರಗಳು ಇನ್ನೊಂದಿಷ್ಟು ಅರ್ಥಗಳನ್ನು ಒಳಗೊಂಡಿರುವಂತಹ ಚಿತ್ರ. ಈ ಚಿತ್ರಕ್ಕೆ ವಿಕ್ಟರಿ ಎಂದು ಜನರೇ ನಾಮಕರಣ ಮಾಡಿದ್ದಾರೆ. 'V' ಎಂಬ ಸಿಂಬಲ್ ನ್ನು ಜನರೇ ವಿಕ್ಟರಿ ಎಂದು ಕರೆಯುತ್ತಿರುವುದೂ ಸಮುಚಿತವಾಗಿದೆ.

    2. ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರು ಕೇವಲ ಕಾಮಿಡಿ ಅಷ್ಟೇ ಬಯಸುತ್ತಿದ್ದಾರೆಯೇ?
    ಶರಣ್ ಈ ಬಿಲ್ಡಿಂಗ್ ನಿಂದ ಇನ್ನೊಂದು ಬಿಲ್ಡಿಂಗ್ ಗೆ ಜಿಗಿಯುತ್ತಾನೋ ಅಥವಾ ಇಪ್ಪತ್ತು ಟಾಟಾ ಸುಮೋ ಬ್ಲ್ಯಾಸ್ಟ್ ಮಾಡುತ್ತಾನೆ ಎಂಬ ನಿರೀಕ್ಷೆ ಇಟ್ಟುಕೊಂಡು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿರಲ್ಲ. ಎರಡು ಎರಡುವರೆ ಗಂಟೆಗಳ ಕಾಲ ನಗಬಹುದು ರೀ ಎಂದುಕೊಂಡೋ ಶರಣ್ ಚಿತ್ರಕ್ಕೆ ಬಂದಿರುತ್ತಾರೆ. ಆ ರೀತಿಯ ಪ್ರೇಕ್ಷಕ ವರ್ಗಕ್ಕೆ ಖಂಡಿತ ನಿರಾಶೆಯಾಗಲ್ಲ. ಅವರನ್ನು ಟಾರ್ಗೆಟ್ ಮಾಡಿದ್ದೀವಿ. ಈ ಚಿತ್ರದ ಮೇಲೆ ಏನು ನಿರೀಕ್ಷೆ ಇಟ್ಟುಕೊಂಡು ಬಂದಿರುತ್ತಾರೋ ಅದೇ ನಮ್ಮ ಟಾರ್ಗೆಟ್.

    ಕಾಮಿಡಿ ಜೊತೆಗೆ ಒಂದು ಕಥೆ ಬೇಕು. ಕಥೆ ಜೊತೆಗೆ ಚೆನ್ನಾಗಿರುವಂತಹ ಒಂದು ಮೆಸೇಜ್ ಹೇಳಬೇಕಾಗುತ್ತದೆ. ಇದೆಲ್ಲದರ ಮಿಶ್ರಣದ ಕಥೆಯೇ ಈ ಚಿತ್ರ. ಈ ಚಿತ್ರದಲ್ಲಿ ಒಂದು ತುಂಬಾ ಸ್ಟ್ರಾಂಗ್ ಕಥೆ ಇದೆ. ಕೊನೆಯಲ್ಲಿ ಒಂದು ಸಣ್ಣ ನೀತಿಪಾಠವನ್ನೂ ಇಟ್ಟಿದ್ದೇವೆ. ಅದರ ಜೊತೆಗೆ ಒಂದು ಸಣ್ಣ ಮೆಸೇಜ್ ಇದೆ. ಇದೆಲ್ಲದರ ಲೇಪನ ಕಾಮಿಡಿಯಾಗಿರುತ್ತದೆ. ಒಂದು ಉತ್ತಮವಾದ ಕಥೆಯನ್ನು ನಗಿಸುತ್ತಾ ಹೇಳುವ ಪ್ರಯತ್ನವನ್ನು ಮಾಡಿದ್ದೇವೆ. ಇಲ್ಲಿ ನಗಿಸಲು ಕಥೆ ಹೇಳುತ್ತಿಲ್ಲ. ನಗಿಸುತ್ತಾ ಕಥೆ ಹೇಳುತ್ತೇವೆ.

    ಶರಣ್ ಕಾಮಿಡಿಯನ್ ನಿಜ. ಚಿತ್ರದಲ್ಲಿ ಹಾಸ್ಯ ಇರುತ್ತದೆ ಎಂದು ಪ್ರೇಕ್ಷಕರು ನಂಬಿಕೊಂಡು ಬಂದಿರುತ್ತಾರೆ. ಅದು ಸತ್ಯ. ಅದರ ಜೊತೆಗೆ ಬೇರೆ ಏನೋ ಹೇಳಲು ಹೊರಟಿದ್ದೇವೆ. ಒಂದಷ್ಟು ಮಿಶ್ರ ಭಾವನೆಗಳನ್ನು ಒಳಗೊಂಡಂತಹ ಚಿತ್ರವಿದು. ಈ ಚಿತ್ರದಲ್ಲಿ ಕಾಮಿಡಿ ಜೊತೆಗೆ ಸೆಂಟಿಮೆಂಟ್ ಇರುತ್ತದೆ. ಶರಣ್ ಗೆ ತಕ್ಕಂತೆ ಆಕ್ಷನ್ ಇದೆ, ಸಸ್ಪೆನ್ಸ್ ಇದೆ. ಫಸ್ಟ್ ಟೈಮ್ ನಾನು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

    ಚಿತ್ರದಲ್ಲಿ ಮೆಸೇಜ್ ಇದೆ, ನೀತಿ ಪಾಠ ಇದೆ. ಹಾಗಂತ ಇದು ನೀತಿಪಾಠ ಹೇಳುವ ಸಿನಿಮಾ ಅಲ್ಲ. ಒಂದು ಕಥೆಗೆ ಒಂದು ನೀತಿಪಾಠ ಬೇಕಲ್ಲ. ಸಂಬಂಧಗಳು, ಸತ್ಯ, ಒಳ್ಳೆತನ ಕೆಟ್ಟತನದ ಮೇಲೆ ಒಂದು ನೀತಿಪಾಠವಿದೆ. ಕಾಮಿಡಿಗೆ ಒತ್ತು ನೀಡಿದ್ದೇವೆ. ಯಾಕೆಂದರೆ ಅದು ಶರಣ್ ಚಿತ್ರ. ಪ್ರೇಕ್ಷಕ ಕಾಮಿಡಿಯನ್ನು ನಿರೀಕ್ಷಿಸಿ ಚಿತ್ರಮಂದಿರಕ್ಕೆ ಬಂದಿರುತ್ತಾನೆ.

    3. ನಂದಕಿಶೋರ್ ಚೊಚ್ಚಲ ನಿರ್ದೇಶನದ ಚಿತ್ರ, ಹೇಗಿತ್ತು ಅವರ ಜೊತೆಗಿನ ಕೆಲಸ?
    ಖಂಡಿತ ನಿಜ. ಇದು ನಂದಕಿಶೋರ್ ನ ಮೊದಲ ಸಿನಿಮಾ. ನನಗೆ ನೂರನೇ ಸಿನಿಮಾ ಆಗಿರಬಹುದು. ಅವನ ಹತ್ತಿರ ಕಲಿಯುವಂತಹದ್ದು ಬಹಳ ಇದೆ. ಅಡ್ಡಾದಿಡ್ಡಿ ಬಂದು ಡೈರೆಕ್ಟರ್ ಆದವನಲ್ಲ ನಂದಕಿಶೋರ್. ಒಂದು ಪರಿಪೂರ್ಣವಾದ ಹೋಂ ವರ್ಕ್ ಮಾಡಿಕೊಂಡು ಬಂದಂತಹವನು. ಸಿನಿಮಾಗಾಗಿ ರಾತ್ರಿ ಹಗಲು ಆಸೆಪಟ್ಟವನು. ಕನಸು ಕಟ್ಟಿದವನು ಅದಕ್ಕಾಗಿ ಪ್ರಯತ್ನಿಸಿ ಶ್ರಮಿಸಿದ್ದಾನೆ.

    ಒಂದಷ್ಟು ಚಿತ್ರಗಳಿಗೆ ಸಹಾಯಕನಾಗಿ ಕೆಲಸಮಾಡಿ. ತನ್ನದೇ ಆದಂತಹ ಒಂದಷ್ಟು ಆಯಾಮಗಳನ್ನು ಆವರಿಸಿಕೊಂಡಿದ್ದಾನೆ. ಹೊಸ ಕನಸು, ಹೊಸ ಆಲೋಚನೆ, ಹೊಸ ಕ್ರಿಯೇಟಿವಿಟಿ, ಹೊಸ ಕಲರ್ ಅವನಲ್ಲಿದೆ. ಹಾಗಾಗಿ ತಾಜಾತನ, ಹೊಸ ಅನುಭವ ನನಗೂ ಸಿಕ್ಕಿತು. ಒಂದಷ್ಟು ಹೊಸ ವಿಚಾರಗಳನ್ನು ನಾನೂ ಅವನ ಬಳಿ ಕಲಿತುಕೊಂಡಿದ್ದೇನೆ.

    ಇದು ಅವರ ಮೊದಲ ಚಿತ್ರ ಎಂದು ಬಾಯಿಮಾತಿನಲ್ಲಿ ಹೇಳಬಹುದಷ್ಟೇ. ಆದರೆ ಚಿತ್ರ ನೋಡಿದರೆ ಇದು ಅವರ ಮೊದಲ ಸಿನಿಮಾ ಅನ್ನಿಸುವುದಿಲ್ಲ. ಎಲ್ಲೂ ಒಂದೇ ಒಂದು ಸಣ್ಣ ಅನುಮಾನವೂ ಇರಲಿಲ್ಲ. ಸಿನಿಮಾಗೂ ಮುಂಚೆಯೇ ಸಾಕಷ್ಟು ಸಲ ಈ ಚಿತ್ರವನ್ನು ಕಥೆಯಲ್ಲೇ ನೋಡಿದವನು. ಅವರೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ನನಗೆ ಸಂತಸ ತಂದಿದೆ.

    <ul id="pagination-digg"><li class="next"><a href="/news/victory-sharan-interview-will-rule-the-roost-076816.html">Next »</a></li></ul>

    English summary
    Read an interview with Kannada comedy Star Sharan. "I am still the Sharan who entertained with my comic timing. I am not a hero smashing cars and jumping from building to building. I am a hero who can make people laugh". The film Victory stars actor Sharan and actress Asmita Sood in lead roles. This is the second movie in which actor Sharan will be seen playing the lead role.
    Thursday, August 22, 2013, 19:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X