For Quick Alerts
  ALLOW NOTIFICATIONS  
  For Daily Alerts

  ಹಾಸ್ಯದ ಹೊನಲುಬೆಳಕು 'ಹೆಂಡತಿ ಪ್ರಾಣ ಹಿಂಡುತಿ'

  By Rajendra
  |

  ಸಂಸಾರದ ಗುಟ್ಟು ವ್ಯಾಧಿಗೆ ರಟ್ಟು ಎಂಬ ಮಾತಿದೆ. ಈಗ ಸಂಸಾರದ ಹಲವಾರು ಗುಟ್ಟುಗಳೇ ಬಹಳಷ್ಟು ಮನರಂಜನಾ ಕಾರ್ಯಕ್ರಮಗಳ ಸರಕು. ಗಂಡ ಹೆಂಡತಿಯರ ಸಂಸಾರದಲ್ಲಿ ನಡೆಯುವಂಥ ಅನೇಕ ಸ್ವಾರಸ್ಯಕರ ವಿಷಯಗಳನ್ನು ಸಂಗ್ರಹಿಸಿರುವ ನಿರ್ದೇಶಕ ಅವಿನಾಶ್ ಭಾರದ್ವಾಜ್ ಅದನ್ನೇ ಸ್ಕ್ರಿಪ್ಟ್ ಮಾಡಿಕೊಂಡು ಬೆಳ್ಳಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

  ಕಳೆದ 20 ವರ್ಷಗಳಿಂದಲೂ ಸಹ ನಿರ್ದೇಶಕರಾಗಿ ಹಿರಿ-ಕಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿರುವ ಅವಿನಾಶ್ ಭಾರದ್ವಾಜ್ 'ಹೆಂಡತಿ ಪ್ರಾಣ ಹಿಂಡುತಿ' ಎಂಬ ಈ ಚಿತ್ರಕ್ಕೆ ಏಪ್ರಿಲ್ ಮೊದಲವಾರದಿಂದ ಬೆಂಗಳೂರು, ಸಕಲೇಶಪುರದ ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದಾರೆ. [ನಿರ್ದೇಶನಕ್ಕೆ ಸಿದ್ಧರಾಗಿರುವ ಮನದೀಪ್ ರಾಯ್]

  ದುಡಿಮೆ ಇಲ್ಲದ ಗಂಡನನ್ನು ಹೆಂಡತಿ ಯಾವ ರೀತಿ ನೋಡುತ್ತಾಳೆ ಎಂಬುದನ್ನು ಹಾಸ್ಯಮಯವಾಗಿ ನಿರ್ದೇಶಕರು ಹೇಳ ಹೊರಟಿದ್ದಾರೆ. ಅವಿನಾಶ್ ಭಾರದ್ವಾಜ್ ನಿರ್ಮಾಣದ ಜೊತೆ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ಎಲ್.ಎನ್.ಗೂಚಿ ಸಂಗೀತ, ಭರತ್ ಭೂಷಣ್ ಸಂಭಾಷಣೆ, ಡಾ.ಎಂ.ಆರ್.ಎಸ್. ಐಯ್ಯಂಗಾರ್ ಕಥೆ ಮತ್ತು ಸಾಹಿತ್ಯ, ಅವಿನಾಶ್ ಚಿತ್ರಕಥೆ ಇದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  ಮನ್ ದೀಪ್ ರಾಯ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಕಪಿಲ್ ನೃತ್ಯ ನಿರ್ದೇಶನವಿದೆ. ಭರತ್ ಭೂಷಣ್, ನಚಿಕೇತ್, ಓಂ ಪ್ರಕಾಶ್, ರೇಖಾದಾಸ್, ಮನದೀಪ್ ರಾಯ್, ಶಂಕನಾದ ಅರವಿಂದ್, ಎಂ.ಆರ್.ಎಸ್.ಐಯ್ಯಂಗಾರ್ ಪ್ರಸನ್ನ, ರ್ಯಾಂಬೋ ವೀರೇಶ್ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  One more delicious comdey film is all set to launch in Sandalwood titled as 'Hendati Prana Hinduti'. Avinash Bharadwaj directed movie will launch in April first week. Rekha Das, Om Prakash, Mandeep Rai, Shakanada Aravind are in cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X