For Quick Alerts
  ALLOW NOTIFICATIONS  
  For Daily Alerts

  ಅಭಿಮಾನದ ಪ್ರತಿರೂಪ ಈ 'ನಾ ಅಭಿಮಾನಿ' ಹಾಡು

  |

  ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅದೇಷ್ಟೋ ಹಾಡುಗಳು ಬಂದಿದೆ. ಕನ್ನಡ ಚಿತ್ರರಂಗದ ಬಗ್ಗೆಯೂ ಅನೇಕ ಹಾಡುಗಳಿವೆ. ಕನ್ನಡ ನಟರ ಕುರಿತು ಹಾಡು ಬಂದಿದೆ. ಆಯಾ ಕಾಲಘಟ್ಟಕ್ಕೆ ಆ ಹಾಡುಗಳು ಜನ ಮನಸ್ಸು ಗೆದ್ದಿದೆ.

  ಇದೀಗ, ಕನ್ನಡ ಇಂಡಸ್ಟ್ರಿಯ ಕುರಿತು ಮತ್ತು ಕನ್ನಡ ನಟರ ಕುರಿತು ಹಾಡೊಂದು ಮೂಡಿಬಂದಿದ್ದು, ಯೂಟ್ಯೂಬ್ ನಲ್ಲಿ ಹೆಚ್ಚು ಸದ್ದು ಮಾಡ್ತಿದೆ.

  ಹೌದು, 'ಅವಲಕ್ಕಿ ಪವಲಕ್ಕಿ' ಚಿತ್ರದ 'ನಾ ಅಭಿಮಾನಿ' ಹಾಡು ರಿಲೀಸ್ ಆಗಿದ್ದು, ಕೇಳುಗರ ಗಮನ ಸೆಳೆಯುತ್ತಿದೆ. ಅಣ್ಣಾವ್ರಿಂದ ಹಿಡಿದು ವಿಷ್ಣು, ಅಂಬಿ, ಶಂಕರ್ ನಾಗ್, ಪುಟ್ಟಣ್ಣ, ಕಾಶಿನಾಥ್, ಶಿವಣ್ಣ, ದರ್ಶನ್, ಸುದೀಪ್ ಹೀಗೆ ಇಂದಿನ ಕಲಾವಿದರ ಹೆಸರುಗಳನ್ನ ಬಳಸಿ ಸಾಹಿತ್ಯ ರಚಿಸಲಾಗಿದೆ.

  ನಾನು ಕನ್ನಡ ಸಿನಿಮಾ ಅಭಿಮಾನಿ, ನಾನು ಕನ್ನಡದ ಅಭಿಮಾನಿ ಎಂದು ಇಡೀ ಇಂಡಸ್ಟ್ರಿಯನ್ನ ಐದು ನಿಮಿಷದಲ್ಲಿ ಕಣ್ಣಾಮುಂದೆ ತಂದಿದ್ದಾರೆ.

  ಅಜಯ್ ರಾವ್ ಆರ್ ವೇದಂತಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರಿ ಮತ್ತು ಜುಬಿನ್ ಪೌಲ್ ಹಾಡಿದ್ದಾರೆ. ಈ ಹಾಡಿಗೆ ಧ್ವನಿಯಾಗಿರುವ ಜುಬಿನ್ ಪೌಲ್ ಅವರೇ ಸಂಗೀತ ನಿರ್ದೇಶನವಿದೆ.

  ಇನ್ನುಳಿದಂತೆ 'ಅವಲಕ್ಕಿ ಪವಲಕ್ಕಿ' ಚಿತ್ರದ ದುರ್ಗ ಪ್ರಸಾದ್ ನಿರ್ದೇಶನ ಮಾಡಿದ್ದು, ರಂಜಿತಾ ಸುಬ್ರಮಣ್ಯ ನಿರ್ಮಿಸಿದ್ದಾರೆ. ದೀಪಕ್ ಪಟೇಲ್, ಸಮರ್ಥ್ ರಾಮಪುರ, ಭಾರದ್ವಜ್, ಶ್ರೇಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  English summary
  Watch Kannada da Cinemage Naa Abhimani Lyrical Video From the Movie Avalakki Pavalakki Starring: Deepak Patel, Samarth Ramapur Bharadwaj, Shreya & Others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X