For Quick Alerts
  ALLOW NOTIFICATIONS  
  For Daily Alerts

  ಎರಡನೇ ಚುಂಬನಕ್ಕೆ ಸಜ್ಜಾಗುತ್ತಿದ್ದಾರೆ ಶ್ರೀಲೀಲಾ ಮತ್ತು ವಿರಾಟ್

  |

  ನಿರ್ದೇಶಕ ಎ.ಪಿ ಅರ್ಜುನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಕಿಸ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ತಿಂಗಳು 27ಕ್ಕೆ ತೆರೆಗೆ ಬಂದಿರುವ ಕಿಸ್ ಉತ್ತಮ ಪ್ರದರ್ಶನ ಕಾಣುತ್ತಿದೆ. ಯೂತ್ ಓರಿಯೆಂಟೆಡ್ ಸಿನಿಮಾ ಕಿಸ್ ಗೆ ಯುವಕರು ಫಿದಾ ಆಗಿದ್ದಾರೆ. ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ಈ ವಾರದಿಂದ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿದೆಯಂತೆ.

  ವಿಶೇಷ ಅಂದ್ರೆ ಕಿಸ್ ಚಿತ್ರದ ಸೀಕ್ವೆಲ್ ಗೆ ತಯಾರಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೊದಲ ಭಾಗಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆ ಹಿನ್ನಲೆ ಪಾರ್ಟ್-2 ಮಾಡುವ ಪ್ಲಾನ್ ಮಾಡಿದ್ದಾರಂತೆ ನಿರ್ದೇಶಕ ಎ.ಪಿ ಅರ್ಜುನ್. ಅಂದ್ಹಾಗೆ ಮೊದಲ ಭಾಗದಲ್ಲಿ ನಟಿ ಶ್ರೀಲೀಲಾ ಮತ್ತು ವಿರಾಟ್ ಕಾಣಿಸಿಕೊಂಡಿದ್ದರು. ಇಬ್ಬರಿಗೂ ಇದು ಮೊದಲ ಚುಂಬನವಾಗಿತ್ತು.

  ಬೇರೆ ಭಾಷೆಯಲ್ಲಿ ಸಾಧನೆ ಮಾಡಲಿ, ಮೊದಲ ಆದ್ಯತೆ ಕನ್ನಡಕ್ಕೆ ಕೊಡಲಿ - ಯಶ್ಬೇರೆ ಭಾಷೆಯಲ್ಲಿ ಸಾಧನೆ ಮಾಡಲಿ, ಮೊದಲ ಆದ್ಯತೆ ಕನ್ನಡಕ್ಕೆ ಕೊಡಲಿ - ಯಶ್

  ಕಿಸ್ ಪಾರ್ಟ್-2ನಲ್ಲಿಯೂ ಇವರೆ ಮುಂದುವರೆಯುವ ಸಾಧ್ಯತೆ ಇದೆ. ಮೊದಲ ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವುದರಿಂದ ವಿರಾಟ್ ಮತ್ತು ಶ್ರೀಲೀಲಾ ಫ್ರೆಶ್ ಜೋಡಿ ಎರಡನೆ ಭಾಗದಲ್ಲೂ ಮುಂದುವರೆಯುವ ಸಾಧ್ಯತೆ ಇದೆ. ಇನ್ನು ಮೊದಲ ಭಾಗಕ್ಕಿಂತ ಎರಡನೆ ಭಾಗದಲ್ಲಿ ಕಥೆ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆಯಂತೆ.

  ಕಿಸ್ ಚಿತ್ರದ ಸಂಗೀತ ಕೂಡ ಸೂಪರ್ ಹಿಟ್ ಆಗಿತ್ತು. ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆ ಕಿಸ್ ಗೆ ಇತ್ತು. ಪಾರ್ಟ್-2ನಲ್ಲಿಯೂ ಹರಿಕೃಷ್ಣ ಸಂಗೀತ ಇರುತ್ತಾ ಎನ್ನುವುದು ಗೊತ್ತಾಗಬೇಕಿದೆ. ಆದ್ರೆ ಸದ್ಯ ಕಿಸ್ ಸಕ್ಸಸ್ ನ ಖುಷಿಯಲ್ಲಿರುವ ಎ.ಪಿ ಅರ್ಜುನ್ ತಂಡ, ಅದೆ ಖುಷಿಯಲ್ಲಿ ಎರಡನೇ ಭಾಗಕ್ಕೆ ತಯಾರಿ ಮಾಡುಕೊಳ್ಳುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ಆದ್ರೆ ಸಧ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.

  English summary
  Kannada Director A P Arjun is planning for Kiss Part-2. Kiss part-1 released in September 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X