»   » ಕನ್ನಡದ ಹಿರಿಯ ನಟ-ನಿರ್ದೇಶಕ ಶಾಂತಾರಾಮ್ ನಿಧನ

ಕನ್ನಡದ ಹಿರಿಯ ನಟ-ನಿರ್ದೇಶಕ ಶಾಂತಾರಾಮ್ ನಿಧನ

Posted By:
Subscribe to Filmibeat Kannada

'ಕಲಿಯುಗದ ಕರ್ಣ' ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ್ದ 'ಕರ್ಣನ ಸಂಪತ್ತು' ಎಂಬ ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ್ದ 68 ವಯಸ್ಸಿನ ನಟ ಕಮ್ ನಿರ್ದೇಶಕ ಶಾಂತಾರಾಮ್ ಅವರು ಭಾನುವಾರ (ಮೇ 29) ದಂದು ನಿಧನ ಹೊಂದಿದ್ದಾರೆ.

ಕಳೆದ ಐದಾರು ದಿನಗಳಿಂದ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಕಮ್ ನಿರ್ದೇಶಕ ಶಾಂತಾರಾಮ್ ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮಧ್ಯಾಹ್ನ ಅಸುನೀಗಿದ್ದಾರೆ, ಎಂದು ಶಾಂತಾರಾಮ್ ಅವರ ಸಹೋದರ ಕೆ.ಆರ್ ಮುರಳಿಕೃಷ್ಣ ಅವರು ತಿಳಿಸಿದ್ದಾರೆ.[ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು]

Kannada Director-Actor K R Shantharam no more

ಕೆ.ಬಾಲಚಂದರ್ ಅವರ 'ತಪ್ಪಿದ ತಾಳ' ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ 'ಮರುತ್ತಕಾಲೈ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1984ರಲ್ಲಿ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಮರಳಿ ಗೂಡಿಗೆ' ಸಿನಿಮಾಗೆ ಕೆ.ಆರ್ ಶಾಂತಾರಾಮ್ ಅವರು ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದರು.

Kannada Director-Actor K R Shantharam no more

'ಬಾಳ ನೌಕೆ', 'ಹೃದಯ ಸಾಮ್ರಾಜ್ಯ' 'ಪ್ರೇಮ ತಪಸ್ವಿ', ಅಂಬರೀಶ್ ಅವರ 'ಕರ್ಣನ ಸಂಪತ್ತು' ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 'ಹೂವು ಹಣ್ಣು' ಮತ್ತು 'ಮಹಾಕ್ಷತ್ರಿಯ' ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ. ಇವರು ಪತ್ನಿ ಶೈಲಾ ಶಾಂತಾರಾಮ್ ಅವರನ್ನು ಅಗಲಿದ್ದಾರೆ.

English summary
Kannada Director-Actor K R Shantharam who had directed more than 40 movie has expired Yesterday (May 29th) at Columbia Asia Hospital. He was aged 68 years. Shantharam had directed movies like Balanauke, Hrudayasamrajya, Karnana Sampathu starring Ambareesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada