twitter
    For Quick Alerts
    ALLOW NOTIFICATIONS  
    For Daily Alerts

    ಪೈರಸಿ ವಿರುದ್ಧ ಧ್ವನಿ ಎತ್ತಿದ 'ರಂಗಿತರಂಗ' ನಿರ್ದೇಶಕ

    |

    Recommended Video

    ಪೈರಸಿ ವಿರುದ್ಧ ಧ್ವನಿ ಎತ್ತಿದ 'ರಂಗಿತರಂಗ' ನಿರ್ದೇಶಕ | Anup Bhandari

    ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆಗೋದೆ ತಡ, ಕಿರಾತಕರು ಪೈರಸಿ ಮಾಡಿ ವೈರಲ್ ಮಾಡಿ ಬಿಡುತ್ತಾರೆ. ಸದ್ಯ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕೂಡ ಪೈರಸಿ ಸಮಸ್ಯೆಯನ್ನು ಎದುರಿಸುತ್ತಿದೆ. ರಿಲೀಸ್ ಆದ ದಿನವೆ ಪೈಲ್ವಾನ್ ಪೈರಸಿ ಕಾಟಕ್ಕೆ ಸುತ್ತಾಗಿದೆ.

    ಕೇವಲ ಪೈಲ್ವಾನ್ ಮಾತ್ರವಲ್ಲದೆ ಇತ್ತೀಚಿಗೆ ರಿಲೀಸ್ ಆದ ಸಾಕಷ್ಟು ಚಿತ್ರಗಳು ಇದೆ ಸಮಸ್ಯೆಯನ್ನು ಎದುರಿಸಿವೆ. ಈ ಬಗ್ಗೆ ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿರ್ದೇಶಕ ಅನೂಪ್

    "ನಾಮಗೆಲ್ಲರಿಗೂ ಸಿನಿಮಾವನ್ನು ಹೊಗಳುವ ಹಕ್ಕು ಇದೆ. ಹಾಗು ವಿಮರ್ಷೆ ಮಾಡುವ ಹಕ್ಕು ಇದೆ. ಆದ್ರೆ ಪೈರಸಿಯನ್ನು ಪ್ರಮೋಟ್ ಮಾಡಿ ಸಿನಿಮಾವನ್ನು ಕೊಲ್ಲುವ ಹಕ್ಕು ನಮಗಿಲ್ಲ. ಇದನ್ನು ಈಗಲೆ ನಿಲ್ಲಿಸದಿದ್ದರೆ, ಭವಿಷ್ಯದಲ್ಲಿ ಕನ್ನಡದ ಚಿತ್ರಗಳ ಗುಣಮಟ್ಟವನ್ನು ಟೀಕಿಸುವ ಹಕ್ಕನ್ನು ನಾವು ಕಳೆದುಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ.

    Kannada director Anup Bhandari Raised Voice Against Piracy

    ಆರೋಪದಿಂದ ದರ್ಶನ್ ಫ್ಯಾನ್ಸ್ ಆಕ್ರೋಶ : ಕಿಚ್ಚನಿಗೆ ಡಿ ಬಾಸ್ ಹುಡುಗರ ಪ್ರಶ್ನೆ!ಆರೋಪದಿಂದ ದರ್ಶನ್ ಫ್ಯಾನ್ಸ್ ಆಕ್ರೋಶ : ಕಿಚ್ಚನಿಗೆ ಡಿ ಬಾಸ್ ಹುಡುಗರ ಪ್ರಶ್ನೆ!

    ಅನೂಪ್ ಟ್ವೀಟ್ ಗೆ ಸುದೀಪ್ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಆದ್ರೆ ಮತ್ತೊಂದೆಡೆ ದರ್ಶನ್ ಅಭಿಮಾನಿಗಳು ಆಕ್ರೋಶ ಗೊಂಡಿದ್ದಾರೆ. ಈ ಮೊದಲು ಜಯಮಾನ ಮತ್ತು ಕುರುಕ್ಷೇತ್ರ ಚಿತ್ರಗಳು ಪೈರಸಿ ಆಗಿತ್ತು. ಆದ್ರೆ ಆಗ ಈ ಬಗ್ಗೆ ಮಾತನಾಡಿಲ್ಲ. ಈಗ್ಯಾಕೆ ಮಾತನಾಡುತ್ತೀರಿ ಎಂದು ಕೆಲವು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇನ್ನು ಪೈರಸಿ ವಿಚಾರವಾಗಿ ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಪೈಲ್ವಾನ್ ಪೈರಸಿ ಆಗುತ್ತಿದ್ದಂತೆ ಸುದೀಪ್ ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಪೈರಸಿ ಮಾಡಿ ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದನೆ ಇದ್ರು, ಯಾರೆ ಮಾಡಿದ್ರು ನಷ್ಟ ಆಗುತ್ತಿರುವುದು ಮಾತ್ರ ಕನ್ನಡ ಚಿತ್ರರಂಗಕ್ಕೆ.

    English summary
    Kannada director Anup Bhandari raised voice against piracy. If we don’t stop now, we will lose the right to criticize the quality of future Kannada films said Anup Bhandari.
    Monday, September 16, 2019, 13:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X