ಹೇಗಿರುತ್ತೆ ಸುದೀಪ್ - ಅನೂಪ್ ಜೋಡಿಯ ಸಿನಿಮಾ?
Recommended Video

ನಟ ಸುದೀಪ್ ಈಗ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಾಲಿಗೆ ಈಗ ಮತ್ತೊಂದು ಹೊಸ ಸಿನಿಮಾ ಸೇರಿಕೊಂಡಿದೆ. ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಈಗ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ.
'ರಂಗಿತರಂಗ' ಸಿನಿಮಾದ ನಂತರ 'ರಾಜರಥ' ಸಿನಿಮಾ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಈಗ ತಮ್ಮ ಮೂರನೇ ಸಿನಿಮಾಗೆ ಸಜ್ಜಾಗಿದ್ದಾರೆ. ಎರಡು ಚಿತ್ರಗಳಲ್ಲಿ ತಮ್ಮ ಸಹೋದರನಿಗೆ ಆಕ್ಷನ್ ಕಟ್ ಹೇಳಿದ್ದ ಅವರು ಈ ಬಾರಿ ಕಿಚ್ಚ ಸುದೀಪ್ ಅವರಿಗೆ ಡೈರೆಕ್ಷನ್ ಮಾಡಲು ಹೊರಟಿದ್ದಾರೆ.
ಸುದೀಪ್ ತಮ್ಮ ಈ ಸಿನಿಮಾದ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಚಿತ್ರದ ಕೆಲವು ವಿವರಗಳನ್ನು ಅನೂಪ್ ಭಂಡಾರಿ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ. ಮುಂದೆ ಓದಿ..
ಸುದೀಪ್ - ಅನೂಪ್ ಟ್ವೀಟ್
ನಟ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಶನ್ ನಲ್ಲಿ ಈಗ ಸಿನಿಮಾ ಬರುತ್ತಿದ್ದು, ಈ ಬಗ್ಗೆ ಟ್ವಿಟ್ಟರ್ ಖಾತೆಗಳಲ್ಲಿ ಸುದೀಪ್ ಹಾಗೂ ಅನೂಪ್ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಹೊಸ ಸಿನಿಮಾದ ವಿಷಯವನ್ನು ಅಭಿಮಾನಿಗಳಿಗೆ ಸುದೀಪ್ ತಲುಪಿಸಿದ್ದಾರೆ.

18 ವರ್ಷದ ಹಿಂದಿನ ಕಥೆ
ಈ ಸಿನಿಮಾದ ಕೆಲ ವಿವರಗಳನ್ನು ನಿರ್ದೇಶಕ ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಇದೊಂದು ಆಕ್ಷನ್ ಆಡ್ವೆಂಚರ್ ಸಿನಿಮಾವಾಗಿದ್ದು, 18 ವರ್ಷದ ಹಿಂದೆ ಈ ಕಥೆಯನ್ನು ಬರೆದಿದ್ದರಂತೆ. ಸದ್ಯಕ್ಕೆ ಅನೂಪ್ ಸ್ಕ್ರೀಪ್ಟ್ ವರ್ಕ್ ನಲ್ಲಿ ಬ್ಯುಸಿ ಇದ್ದಾರಂತೆ. ಸುದೀಪ್ ಅವರಿಗೂ ಕಥೆ ಬಹಳ ಇಷ್ಟ ಆಗಿದೆಯಂತೆ.

2010 ರಲ್ಲಿ ಆದ ಭೇಟಿ
2010 ರಲ್ಲಿ ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಸುದೀಪ್ ರನ್ನು ಅನೂಪ್ ಭೇಟಿ ಮಾಡಿದ್ದರಂತೆ. ಈ ವೇಳೆ ನಿಮ್ಮ ಜೊತೆಗೆ ಸಿನಿಮಾ ಮಾಡುವ ಆಸೆ ಎಂದಾಗ ಒಳ್ಳೆಯ ಕಥೆ ಇದ್ದರೆ ತನ್ನಿ ಅಂತ ಸುದೀಪ್ ಹೇಳಿದ್ದರಂತೆ. ಆ ಕಾಲ ಕೂಡಿ ಬಂದಿದ್ದು, ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

ಸುದೀಪ್ ನಿರ್ಮಾಣ
ಮತ್ತೊಂದು ಸಂಗತಿ ಅಂದರೆ, ಸುದೀಪ್ ಅವರೇ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. 'SuPriYanvi production' ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. Su ಸುದೀಪ್ PriYa ಪ್ರಿಯಾ nvi ಸಾನ್ವಿ ಹೀಗೆ ತಮ್ಮ ಹೆಸರಿನ ಜೊತೆಗೆ ಪತ್ನಿ ಹಾಗೂ ಮಗಳ ಹೆಸರನ್ನು ಸೇರಿಸಿ ತಮ್ಮ ನಿರ್ಮಾಣ ಸಂಸ್ಥೆಗೆ ಹೆಸರಿಟ್ಟಿದ್ದಾರೆ.

ಇನ್ನು ಯಾವುದು ನಿರ್ಧಾರ ಆಗಿಲ್ಲ
'ರಾಜರಥ' ಚಿತ್ರದ ಮೇಕಿಂಗ್ ನೋಡಿ ಇಷ್ಟ ಪಟ್ಟ ಸುದೀಪ್ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರಂತೆ. ಸದ್ಯಕ್ಕೆ ಕಥೆಯ ಕೆಲಸಗಳು ನಡೆಯುತ್ತಿದ್ದು, ಸಿನಿಮಾದ ಮುಹೂರ್ತ ಯಾವಾಗ ಎನ್ನುವುದು ಇನ್ನು ನಿರ್ಧಾರ ಆಗಿಲ್ಲ. ಕಲಾವಿದ, ತಂತ್ರಜ್ಞರ ಆಯ್ಕೆ ಕೂಡ ಇನ್ನು ಬಾಕಿ ಇದೆ. ಚಿತ್ರದ ಟೈಟಲ್ ಪೋಸ್ಟರ್ ಗುರುವಾರ ಸಂಜೆ ಆರು ಗಂಟೆಗೆ ಹೊರಬರಲಿದೆ.


Click it and Unblock the Notifications











