ಬಾಲಿವುಡ್ ಗೆ ಕಾಲಿಟ್ಟ ಗಿರೀಶ್ ಕಾಸರವಳ್ಳಿ ಪುತ್ರ: ಸ್ಟಾರ್ ನಾಯಕಿಯ ಜೊತೆ ಸಿನಿಮಾ

ಕನ್ನಡದ ಪ್ರಸಿದ್ಧ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪುತ್ರ ಅಪೂರ್ವ ಕಾಸರವಳ್ಳಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಕನ್ನಡದಲ್ಲಿ 'ನಿರುತ್ತರ' ಎನ್ನುವ ಸಿನಿಮಾ ಮಾಡಿದ್ದ ಅಪೂರ್ವ ಕಾಸರವಳ್ಳಿ ಬಳಿಕ ಯಾವುದೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿರಲಿಲ್ಲ. ಇದೀಗ ಎರಡನೇ ಸಿನಿಮಾ ನಿರ್ದೇಶನಕ್ಕೆ ತಯಾರಾಗಿದ್ದು, ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.

Recommended Video

Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

ಈಗಾಗಲೆ ಸ್ಕ್ರಿಪ್ಕ್ ಕೆಲಸ ಮುಗಿಸಿರುವ ಅಪೂರ್ವ ಕಾಸರವಳ್ಳಿ ಚಿತ್ರಕ್ಕೆ 'ವಿಂಟರ್ ಬ್ರಿಡ್ಜ್' ಎಂದು ಹೆಸರಿಟ್ಟಿದ್ದಾರಂತೆ. ಈ ಸಿನಿಮಾ 1962ರಲ್ಲಿ ನಡೆದ ಇಂಡೋ-ಚೀನಾ ಯುದ್ಧದ ಹಿನ್ನಲೆಯಲ್ಲಿ ಮೂಡಿಬರುವ ಪ್ರೇಮ ಕಥೆಯಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ಕನ್ನಡ ನಟ ಆರ್ಯನ್ ಸಂತೋಷ್ ಕಾಣಿಸಿಕೊಳ್ಳುತ್ತಿದ್ದಾರೆ.

ಆರ್ಯನ್ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆರ್ಯನ್ ಗೆ ಜೋಡಿಯಾಗಿ ಬಾಲಿವುಡ್ ಖ್ಯಾತ ನಟಿ ಅದಿತಿ ರಾವ್ ಹೈದರಿ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಪಾತ್ರಕ್ಕೆ ಅದಿತಿ ಸಂಪೂರ್ಣವಾಗಿ ಹೊಂದಿಕೆಯಾಗುತ್ತಾರೆ ಎನ್ನುವ ಕಾರಣಕ್ಕೆ ಅದಿತಿಯನ್ನು ಕರೆತರುವ ಪ್ರಯತ್ನ ನಡೆಸುತ್ತಿದ್ದಂತೆ.

Kannada Director Apoorva Kasaravalli To Make Debut In Hindi Film

ಈಗಾಗಲೇ ಅದಿತಿ ಜೊತೆ ಮೊದಲ ಸುತ್ತಿನ ಮಾತುಕತೆ ನಡೆದಿದೆಯಂತೆ. ಶೀಘ್ರದಲ್ಲೇ ಅದಿತಿಗೆ ಕಥೆಯನ್ನು ವಿವರಸಲಿದ್ದಾರೆ ನಿರ್ದೇಶಕರು. ಮತ್ತೊಂದು ವಿಶೇಷ ಅಂದರೆ ಇದೇ ತಿಂಗಳು 28ರಂದು ಸಿನಿಮಾದ ಪ್ರಿ-ಲಾಂಚ್ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ.

ಈ ಸಿನಿಮಾವನ್ನು ಹಿಮಾಚಲ ಪ್ರದೇಶ, ಉತ್ತರಾಖಂಡ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಸಿನಿಮಾತಂಡ ಡಿಸೆಂಬರ್ ನಲ್ಲಿ ಅಥವ ಮುಂದಿನ ವರ್ಷ ಜನವರಿಯಲ್ಲಿ ಶೂಟಿಂಗ್ ಪ್ರಾರಂಭಿಸಲು ಪ್ಲಾನ್ ಮಾಡಿಕೊಂಡಿದೆ.

More from Filmibeat

English summary
Apoorva Kasaravalli to make debut in Hindi film. He is Offers lead role to Aditi Rao Hydari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X