ಬಾಲಿವುಡ್ ಗೆ ಕಾಲಿಟ್ಟ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ

Recommended Video

ರಿಷಬ್ ಶೆಟ್ಟಿ ಗುಟ್ಟಾಗಿಟ್ಟಿದ್ದ ವಿಷಯ ರಟ್ಟಾಗಿದೆ | FILMIBEAT KANNADA

ಕನ್ನಡ ಚಿತ್ರರಂಗದಲ್ಲಿ ಖ್ಯಾತಿಗೊಳಿಸುತ್ತಿದ್ದಂತೆ ಬೇಡಿಕೆ ಹೆಚ್ಚಿಸಿಕೊಂಡು ಪರಭಾಷೆಯಲ್ಲಿ ಮಿಂಚುತ್ತಿರುವ ಅನೇಕ ನಟಿಮಣಿಯರಿದ್ದಾರೆ. ಕನ್ನಡದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಬೇರೆ ಬೇರೆ ಚಿತ್ರರಂಗದಲ್ಲಿ ಹೆಸರು ಮಾಡಿ ಅಲ್ಲಿಯೆ ನೆಲೆಯೂರಿದ್ದಾರೆ. ಇತ್ತೀಚಿಗೆ ಕನ್ನಡದ ಅನೇಕ ನಟಿಯರು ಬೇರೆ ಬೇರೆ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೀಗ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ರಿಷಬ್ ಸೈಲೆಂಟ್ ಆಗಿ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ.

ರಿಷಬ್ ಇದುವರೆಗೂ ರಿವೀಲ್ ಮಾಡದೆ ಗುಟ್ಟಾಗಿ ಇಟ್ಟಿದ್ದ ಬಾಲಿವುಡ್ ಸಿನಿಮಾ ವಿಚಾರ ಈಗ ರಟ್ಟಾಗಿದೆ. ಅಂದ್ಹಾಗೆ ರಿಷಬ್ ಬಾಲಿವುಡ್ ಗೆ ಕಾಲಿಟ್ಟಿರುವುದು ನಿರ್ದೇಶಕನಾಗಿ ಅಲ್ಲ. ಈ ಹಿಂದೆ ರಿಷಬ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಆದರೆ ಈ ಬಾರಿ ರಿಷಬ್ ಬಾಲಿವುಡ್ ಗೆ ಕಾಲಿಟ್ಟಿದ್ದು ನಟನಾಗಿ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್ ಬಾಲಿವುಡ್ ಸಿನಿಮಾ ಬಗ್ಗೆ ರಿವೀಲ್ ಮಾಡಿದ್ದಾರೆ. ಚಿತ್ರದ ಬಗ್ಗೆ ಹೆಚ್ಚು ಬಿಟ್ಟುಕೊಡದ ರಿಷಬ್, "ಈಗಾಗಲೆ ಸಿನಿಮಾವೊಂದು ಶೂಟಿಂಗ್ ಆಗಿದೆ. ಆದರೆ ಈ ಬಗ್ಗೆ ಈಗಲೆ ಹೇಳುವುದಿಲ್ಲ. ಈ ಬಗ್ಗೆ ನಿರ್ದೇಶಕರು ಹೇಳುತ್ತಾರೆ. ಆದರೆ ಈ ಸಿನಿಮಾ ಕನ್ನಡ ಮತ್ತು ಹಿಂದಿ ಎರಡರಲ್ಲೂ ಬರುತ್ತಿದೆ, ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಮೊದಲ ಬಾರಿಗೆ ಮಾತನಾಡುತ್ತಿದ್ದೀನಿ" ಎಂದು ಹೇಳಿದ್ದಾರೆ.

Kannada Director Come Actor Rishab Shetty Entered To Bollywood

ಅಂದ್ಮೇಲೆ ರಿಷಬ್ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ ಆ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಯಾವಾಗ ರಿವೀಲ್ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ. ಒಂದೆಡೆ ನಟನೆ ಮತ್ತು ಇನ್ನೊಂದೆಡೆ ನಿರ್ದೇಶನ ಇದರ ಜೊತೆಗೆ ಬಾಲಿವುಡ್ ಸಿನಿಮಾ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ರಿಷಬ್.

ರಿಷಬ್ ಸದ್ಯ 'ಕಥಾ ಸಂಗಮ' ಸಿನಿಮಾ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ 'ರುದ್ರಪ್ರಯಾಗ' ಸಿನಿಮಾ ಕೂಡ ಚಿತ್ರೀಕರಣವಾಗುತ್ತಿದೆ. 'ಬೆಲ್ ಬಾಟಂ' ಸೀಕ್ವಲ್ ಗೆ ಸಿದ್ಧತೆ ನಡೆಯುತ್ತಿದೆ. ಇನ್ನು ಸಾಕಷ್ಟು ಸಿನಿಮಾಗಳು ರಿಷಬ್ ಬಳಿ ಇವೆ. ಇದೆಲ್ಲದರ ನಡುವೆ ರಿಷಬ್ ಸೈಲೆಂಟ್ ಆಗಿ ಬಾಲಿವುಡ್ ಸಿನಿಮಾವನ್ನು ಮುಗಿಸಿದ್ದಾರೆ. ಆದರೆ ಯಾವ ಸಿನಿಮಾ? ನಿರ್ದೇಶಕ ಯಾರು? ಎನ್ನುವುದು ಸಧ್ಯದಲ್ಲೇ ಬಹಿರಂಗವಾಗಲಿದೆ.

More from Filmibeat

English summary
Kannada director come actor Rishab Shetty entered to bollywood. Rishab Shetty refused to reveal much information about his Bollywood movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X