'ಮಹನಿಯರೆ, ಮಹಿಳೆಯರೆ' ಮತ್ತೆ ನಾಯಕನಾಗಿ ಬರ್ತಿದ್ದಾರೆ ರಿಷಬ್ ಶೆಟ್ಟಿ
Recommended Video
ಮಹನಿಯರೆ ಮತ್ತು ಮಹಿಳೆಯರೆ ದಯವಿಟ್ಟು ಗಮನಿಸಿ ಈ ಸ್ಟೋರಿನ. ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರಂತೆ. ಹೌದು, ರಿಷಬ್ ಶೆಟ್ಟಿ ಮತ್ತೆ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ 'ಮಹನಿಯರೆ, ಮಹಿಳೆಯರೆ' ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಬೆಲ್ ಬಾಟಂ ಚಿತ್ರದ ನಂತರ ರಿಷಬ್ ಗೆ ನಾಯಕ ಪಾತ್ರಕ್ಕೆ ಆಫರ್ಸ್ ಹೆಚ್ಚಾಗುತ್ತಿವೆ.
ರಿಷಬ್ ಈಗಾಗಲೆ ಸಾಕಷ್ಟು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ಇತ್ತೀಚಿಗಷ್ಟೆ ರುದ್ರಪ್ರಯಾಗ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಜೊತೆಗೆ ಕಥ ಸಂಗಮ ಚಿತ್ರದಲ್ಲು ಬಣ್ಣಹಚ್ಚಿದ್ದಾರೆ.
ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಿರ್ದೇಶಕ ರೋಹಿತ್ ಪದಕಿ ಸಾರಥ್ಯದ ಚಿತ್ರಕ್ಕೆ ರಿಷಬ್ ಶೆಟ್ಟಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ದಯವಿಟ್ಟು ಗಮನಿಸಿ ಚಿತ್ರ ನಿರ್ದೇಶನ ಮಾಡಿದ್ದ ರೋಹಿತ್ ಈಗ ಎರಡನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ತಯಾರಿ ಮಾಡಿಕೊಂಡಿದ್ದಾರೆ.

ರೋಹಿತ್ ಎರಡನೆ ಸಿನಿಮಾದಲ್ಲಿ ರಿಷಬ್ ನಾಯಕನಾಗಿ ಕಾಣಿಕೊಳ್ಳಲಿದ್ದಾರೆ. ಈಗಾಗಲೆ ಕಥೆ ಕೇಳಿರುವ ರಿಷಬ್ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಆದ್ರೆ ರಿಷಬ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಎಲ್ಲಾ ಕಮಿಟ್ ಮೆಂಟ್ಸ್ ಮುಗಿದ ಬಳಿಕ ರೋಹಿತ್ ನಿರ್ದೇಶನದಲ್ಲಿ ನಾಯಕನಾಗಿ ಮಿಂಚಲಿದ್ದಾರೆ.
ರಿಷಬ್ ಅಭಿನಯದ ಮೊದಲ ಸಿನಿಮಾ ಬೆಲ್ ಬಾಟಂ ಶತದಿನೋತ್ಸವವನ್ನು ಆಚರಿಸಿತ್ತು. ಚಿತ್ರದಲ್ಲಿ ರಿಷಬ್ ಡಿಟೆಕ್ಟಿವ್ ದಿವಾಕರನ ಪಾತ್ರದಲ್ಲಿ ಮಿಂಚಿದ್ದರು. ನಾಯಕನಾಗಿ ಅಭಿಮಾನಿಗಳ ಮನ ಸೆಳೆದಿದ್ದ ರಿಷಬ್ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.


Click it and Unblock the Notifications











