ನಟನೆಗಿಳಿದ ನಿರ್ದೇಶಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ: ಫಸ್ಟ್ ಲುಕ್ ಬಿಡುಗಡೆ

ಸ್ಯಾಂಡಲ್ ವುಡ್ ನಿರ್ದೇಶಕ ಗುರು ದೇಶಪಾಂಡೆ ಸದ್ಯ ಪೆಂಟಗನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಐದು ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುತ್ತಿದ್ದು, ಐದು ವಿಭಿನ್ನ ಕಥೆಗಳು ಇರಲಿದೆ. ಪೆಂಟಗನ್ ಗುರು ದೇಶಪಾಂಡೆ ನಿರ್ಮಾಣದ ಜಿ ಸಿನಿಮಾಸ್ ಮೂಲಕ ಮೂಡಿಬರುತ್ತಿದೆ.

ವಿಶೇಷ ಎಂದರೆ ಈ ಚಿತ್ರದಲ್ಲಿ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ದೇಶಪಾಂಡೆ ಬಣ್ಣ ಹಚ್ಚಿದ್ದಾರೆ. ಪೆಂಟಗನ್ ಮೂಲಕ ಪ್ರೀತಿಕಾ ಮೊದಲ ಬಾರಿಗೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಪ್ರೀತಿಕಾ ನಟಿಸುತ್ತಿರುವ ಕಥೆಗೆ ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಕಿರಣ್ ಕುಮಾರ್ ಅವರಿಗೂ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.

ಇಂದು ಪ್ರೀತಿಕಾಗೆ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬಕ್ಕೆ ಪೆಂಟಗನ್ ತಂಡ ಮೊದಲ ಲುಕ್ ಬಿಡುಗಡೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದೆ. ಪ್ರೀತಿಕಾ ಲುಕ್ ಚಿತ್ರಪ್ರಿಯರ ಗಮನ ಸೆಳೆಯುತ್ತಿದೆ. ಅಂದಹಾಗೆ ತೆರೆಮೇಲೆ ಮಿಂಚಬೇಕು ಎನ್ನುವುದು ಪ್ರೀತಿಕಾ ಅವರ 15 ವರ್ಷದ ಕನಸು. ಇದೀಗ ಪೆಂಟಗನ್ ಮೂಲಕ ನನಸಾಗಿದೆ. ಪ್ರೀತಿಕಾ ಪತಿ ಗುರು ದೇಶಪಾಂಡೆ ಜೊತೆ ಜಿ ಸಿನಿಮಾಸ್ ನಲ್ಲಿ ಕೆಲಸ ಮಾಡುತ್ತಿದ್ದರು.

 Kannada Director Guru Deshpande wife Pritika Deshpande turns to Actor

ಚಿತ್ರದ ಕಥೆ ಮತ್ತು ಪಾತ್ರ ಈ ಸಿನಿಮಾದಲ್ಲಿ ನಟಿಸುವಂತೆ ಮಾಡಿದೆಯಂತೆ. ಅಂದಹಾಗೆ ಇದು 1980ರ ದಶಕದ ಕಥೆಯಾಗಿದ್ದು ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ. ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಖ್ಯಾತ ನಟ ರವಿಶಂಕರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನು ಪೆಂಟಗನ್ ಚಿತ್ರದ ಉಳಿದ ಕಥೆಗಳನ್ನು ನಿರ್ದೇಶಕ ರಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್ ಮತ್ತು ಗುರುದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸೆಪ್ಟಂಬರ್ ಅಥವಾ ಆಕ್ಟೋಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.

More from Filmibeat

English summary
Kannada Director Guru Deshpande wife Pritika Deshpande turns to Actor. Pritika Deshpande's forst look from Pentagon revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X