ಅಂಬಿ ಬಳಿಕ ಅಭಿ ಜೊತೆ ಸಿನಿಮಾ ಮಾಡ್ತಾರೆ ಗುರುದತ್ ಗಾಣಿಗ
ರೆಬಲ್ ಸ್ಡಾರ್ ಅಂಬರೀಶ್ ಅವರ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ' ಈ ಸಿನಿಮಾವನ್ನು ನಿರ್ದೇಶಕ ಮಾಡಿದ್ದು ಗುರುದತ್ ಗಾಣಿಗ.
ಗುರುದತ್ ಗಾಣಿಗ ಕನ್ನಡ ಕಿರಿಯ ನಿರ್ದೇಶಕರ ಪೈಕಿ ಒಬ್ಬರು. ಸಣ್ಣ ವಯಸ್ಸಿನಲ್ಲಿಯೇ ಅಂಬರೀಶ್, ಸುದೀಪ್, ಸುಹಾಸಿನಿ ರಂತಹ ದೊಡ್ಡ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ ಖ್ಯಾತಿ ಅವರದ್ದು.

ಮೊದಲ ಸಿನಿಮಾದ ನಂತರ ಈಗ ಗುರುದತ್ ಗಾಣಿಗ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ವಿಶೇಷ ಅಂದರೆ, ಈ ಬಾರಿ ಅಭಿಷೇಕ್ ಅಂಬರೀಶ್ ಗಾಗಿ ಗುರು ಸಿನಿಮಾ ಮಾಡಲು ಹೊರಟಿದ್ದಾರೆ. ತಂದೆಯ ನಂತರ ಮಗನ ಚಿತ್ರಕ್ಕಾಗಿ ತಯಾರಿಯನ್ನು ಗುರುದತ್ ಮಾಡಿಕೊಳ್ಳುತ್ತಿದ್ದು, ಸದ್ಯ ಕತೆಯ ಚರ್ಚೆಗಳು ನಡೆಯುತ್ತಿದೆ.

ಗುರುದತ್ ರಿಂದ ಮಗನಿಗೆ ಒಂದು ಸಿನಿಮಾ ಮಾಡಿಸಬೇಕು ಎನ್ನುವುದು ಅಂಬರೀಶ್ ಅವರ ಆಸೆ ಕೂಡ ಆಗಿತ್ತು. ಆ ಆಸೆ ಈಗ ಈಡೇರುವ ಸಮಯ ಬಂದಿದೆ. ಸಿನಿಮಾ ಮಾಡುವುದು ಪಕ್ಕಾ ಆಗಿದ್ದು, ಯಾವಾಗ ಈ ಸಿನಿಮಾ ಲಾಂಚ್ ಆಗುತ್ತದೆ, ನಿರ್ಮಾಪಕರು ಯಾರು ಹೀಗೆ ಅನೇಕ ವಿಷಯಗಳು ಸದ್ಯದಲ್ಲಿಯೇ ತಿಳಿಯಲಿವೆ.
English summary
Ater 'Ambi Ning Vayassaytho' kannada director Gurudatha Ganiga planning for a new movie with Ambareesh son Abhishek Ambareesh.


Click it and Unblock the Notifications