'ಇಟಲಿ ಫಿಲ್ಮ್ ಫೆಸ್ಟಿವಲ್'ನಲ್ಲಿ ಅಂತಿಮ ಹಂತಕ್ಕೆ ಆಯ್ಕೆ ಆದ ಕನ್ನಡ ನಿರ್ದೇಶಕ ಲೋಹಿತ್
'ಮಮ್ಮಿ' ಹಾಗೂ 'ದೇವಕಿ' ಈ ಎರಡೇ ಎರಡು ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಸಾಬೀತು ಮಾಡಿರುವ ನಿರ್ದೇಶಕ ಲೋಹಿತ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇಟಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಒನಿರೋಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಲೋಹಿತ್ ಅಂತಿಮ ಹಂತಕ್ಕೆ ಬಂದಿದ್ದಾರೆ. ವಿಶೇಷ ಅಂದರೆ, ಈ ಚಿತ್ರೋತ್ಸವದಲ್ಲಿ ಆಯ್ಕೆ ಆದ ಭಾರತದ ಏಕೈಕ ನಿರ್ದೇಶಕ ಇವರಾಗಿದ್ದಾರೆ.

ಒನಿರೋಸ್ ಪಟ್ಟಿಯಲ್ಲಿ ದೇಶ ವಿದೇಶದ ಬೇರೆ ಬೇರೆ ನಿರ್ದೇಶಕರ ಜೊತೆಗೆ ಲೋಹಿತ್ ಜಾಗ ಪಡೆದು, ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾರೆ. ಈ ಯುವ ನಿರ್ದೇಶಕ ಇಟಲಿಯಲ್ಲಿ ಕನ್ನಡ ಬಾವುಟ ಹಾರಿಸಿದ್ದಾರೆ. ಇಂತಹ ಚಿತ್ರೋತ್ಸವದಲ್ಲಿ ಎಂಟ್ರಿ ತೆಗೆದುಕೊಳ್ಳುವುದು ದೊಡ್ಡ ವಿಷಯ. ಹೀಗಿರುವಾಗ, ಸಾಕಷ್ಟು ಸ್ಪರ್ಧೆಯ ನಡುವೆ ಲೋಹಿತ್ ಫೈನಲಿಸ್ಟ್ ಆಗಿದ್ದಾರೆ.
ಇನ್ನು ವಿಷಯ ಏನೆಂದ್ರೆ, ಅಂತಿಮ ಹಂತಕ್ಕೆ ಬಂದ ಎಲ್ಲ ನಿರ್ದೇಶಕರುಗಳನ್ನು ವಿಜೇತರ ರೀತಿಯೇ ಪರಿಗಣನೆ ಮಾಡಲಾಗುತ್ತದೆ. ಹೀಗಾಗಿ, ಫೈನಲಿಸ್ಟ್ ಆಗಿರುವ ಲೋಹಿತ್ ಫಿಲ್ಮ್ ಫೆಸ್ಟಿವಲ್ ಗೆದ್ದ ರೀತಿಯೇ ಆಗಿದೆ.

ಇದರೊಂದಿಗೆ, 'ರಾಕ್ಷಸನ್' ತಮಿಳು ಸಿನಿಮಾ ಬೆಸ್ಟ್ ಥ್ರಿಲ್ಲರ್ ಆಕ್ಷನ್ ಚಿತ್ರಗಳ ಸಾಲಿನಲ್ಲಿ ಇದೆ. ಇಂಡಿಯನ್ ಅಮೇರಿಕಾನ್ ದಿವ್ಯನ್ಸ್ ಶರ್ಮಾ ಅತ್ಯುತ್ತಮ ನಟ ವಿಭಾಗದಲ್ಲಿ ಇದ್ದಾರೆ.


Click it and Unblock the Notifications











