ನಿರ್ದೇಶಕ, '90' ಖ್ಯಾತಿಯ ಲಕ್ಕಿ ಶಂಕರ್ ಸಂದರ್ಶನ

<ul id="pagination-digg"><li class="next"><a href="/news/lucky-shankar-interview-90-movie-fame-068691.html">Next »</a></li></ul>

Lucky Shankar
ಕನ್ನಡ ಚಿತ್ರರಂಗದ ಉದಯೋನ್ಮುಖ ನಿರ್ದೇಶಕರಲ್ಲಿ 'ಲಕ್ಕಿ ಶಂಕರ್' ಹೆಸರು ಚಿರಪರಿಚಿತ. ಭವಿಷ್ಯದ ಭರವಸೆಯ ನಿರ್ದೇಶಕರ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಲಕ್ಕಿ ಶಂಕರ್, 'ಜಮಾನಾ' ಹಾಗೂ '90' ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾದವರು. ಆದರೆ ಸ್ಯಾಂಡಲ್ ವುಡ್ ಹೆಬ್ಬಾಗಿಲು ಎನಿಸಿಕೊಂಡಿರುವ ಗಾಂಧಿನಗರದಲ್ಲಿ ಅವರು ನಿರ್ದೇಶಕರು ಎನಿಸಿಕೊಂಡ ಚಿತ್ರ, '2004' ರಲ್ಲಿ ಬಿಡುಗಡೆಯಾದ ಹಾರರ್ ಅಂಡ್ ಥ್ರಿಲ್ಲರ್ ಬೇಸ್ಡ್ ಚಿತ್ರ 'ಗಾಂಧಿ ನಗರ'.

ಸದ್ಯ ಅವರ ನಿರ್ದೇಶನದ ಬಹುನಿರೀಕ್ಷೆ ಮೂಡಿಸಿರುವ 'ದೇವ್ರಾಣೆ' ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅದೆಲ್ಲಕ್ಕಿಂತಲೂ ಮಿಗಿಲಾಗಿ ಅವರು ಮಾನವೀಯ ಹಾಗೂ ದೂರದೃಷ್ಟಿ ನೆಲೆಯಲ್ಲಿ 'ಶಿವಶಂಕರ್ ಫಿಲಂ ಫ್ಯಾಕ್ಟರಿ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆ ಮೂಲಕ, ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಹಾಗೂ ಬರಲಿರುವ ಸಿನಿಮಾ ಆಸಕ್ತರು, ಸಿನಿಮಾಕರ್ಮಿಗಳು ಹಾಗೂ ತಂತ್ರಜ್ಞರಿಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಇತ್ತೀಚಿಗಂತೂ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುತಾರಾಗಣದ 'ದೇವ್ರಾಣೆ' ಚಿತ್ರ ಭಾರೀ ಸುದ್ದಿಯಲ್ಲಿದೆ. ಲಕ್ಕಿ ಶಂಕರ್ ಅವರನ್ನು ಕಾಲ ಕೈಹಿಡಿದು ಯಶಸ್ಸು ನೀಡಿದರೆ ಹೆಸರಿಗೆ ಸರಿಯಾಗಿ ಸ್ಯಾಂಡಲ್ ವುಡ್ ಉದ್ಯಮಕ್ಕೆ 'ಲಕ್ಕಿ' ಶಂಕರ್ ಆಗಬಲ್ಲ ಸಾಮರ್ಥ್ಯ ಇವರಿಗಿದೆ. ಇಂಥ ಸಿನಿಮಾಪ್ರಿಯ ಹಾಗೂ ದೂರದೃಷ್ಟಿಯ ನಿರ್ದೇಶಕ ಲಕ್ಕಿ ಶಂಕರ್ ಅವರು 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...

*ನಿಮ್ಮ ಹುಟ್ಟೂರು, ಕೌಟುಂಬಿಕ ಹಿನ್ನೆಲೆ ಬಗ್ಗೆ ಹೇಳಿ...

ಹುಟ್ಟಿದ್ದು, ಓದಿದ್ದು ಎಲ್ಲಾ ಬೆಂಗಳರು, ರಾಜಾಜಿನಗರದಲ್ಲಿ. 'ಡಿ ಫಾರ್ಮಸಿ' ಓದಿದ್ದೇನೆ. ನಮ್ಮ ಕುಟುಂಬದ್ದು ಬೇಕರಿ ಬಿಸಿನೆಸ್. ನಮ್ಮ ಕುಟುಂಬದಲ್ಲಿ ಬಣ್ಣದ ನಂಟು ಇರಲಿಲ್ಲ. ಆದರೆ ನನ್ನ ಸ್ನೇಹಿತ ಹಾಗೂ ಅವರಪ್ಪ ಆ ಕಾಲದಲ್ಲೇ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳ ನಿರ್ಮಾಣ ಹಾಗೂ ನಟನೆಯಲ್ಲಿ ಸಕ್ರಿಯರಾಗಿದ್ದರು. ನಾನೂ ಅವರೊಟ್ಟಿಗೆ ಹೋಗಿ ಶೂಟಿಂಗ್ ನೋಡಿ ಪುಳಕ ಹಾಗೂ ಅಚ್ಚರಿ ಅನುಭವಿಸುತ್ತಿದ್ದೆ. ಸಿನಿಮಾ ಆಸಕ್ತಿಯದ್ದ ನನ್ನಲ್ಲಿ ಆ ಮೂಲಕ ಇನ್ನೂ ಹೆಚ್ಚು ಒಲವು ಮೂಡಲು ಅದು ಕಾರಣವಾಯ್ತು. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/lucky-shankar-interview-90-movie-fame-068691.html">Next »</a></li></ul>

More from Filmibeat

English summary
Kannada Director Lucky Shankar, 90 Fame directed upcoming movie 'Devrane' is in exclusive News recently. This 'Jamana' director talked about his movies and carrier in this Interview. Read this Interview for more about the director Lucky Shankar... &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X