ನಟಿ ಮುಂದೆ 'ಬೇಡ್ ಶೇರಿಂಗ್' ಬೇಡಿಕೆ; ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದರೇ ದರ್ಶನ್, ಅಪ್ಪು ಸಿನಿಮಾಗಳ ನಿರ್ದೇಶಕ ಮಾದೇಶ?

By ಫಿಲ್ಮಿಬೀಟ್ ಡೆಸ್ಕ್

ಇತ್ತೀಚೆಗೆ ಯಾವುದೇ ಚಿತ್ರರಂಗಕ್ಕೆ ಹೋದರೂ ಕಾಸ್ಟಿಂಗ್ ಕೌಚ್ ಬಗ್ಗೆನೇ ಚರ್ಚೆ. ಕನ್ನಡದಲ್ಲೂ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಧ್ವನಿ ಎದ್ದೇಳುತ್ತಲೇ ಇದೆ. ಈಗ ಮತ್ತೊಂದು ಪ್ರಕರಣ ಹೊರ ಬಂದಿದೆ. ದರ್ಶನ್ ನಟಿಸಿದ 'ಗಜ', 'ಬೃಂದಾವನ', ಪುನೀತ್ ರಾಜ್‌ಕುಮಾರ್ ನಟಿಸಿದ 'ರಾಮ್', 'ಪವರ್' ಅಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಾದೇಶ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ.

ಪವರ್ ಟಿವಿ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ನಿರ್ದೇಶಕ ಮಾದೇಶ ಅವರು ಕಮಿಂಟ್‌ಮೆಂಟ್ ಬಗ್ಗೆ ಮಾತಾಡಿದ್ದಾರೆ. ಇದರೊಂದಿಗೆ 'ಬೆಡ್‌ ಶೇರಿಂಗ್' ಬಗ್ಗೆನೂ ಬೇಡಿಕೆ ಇಟ್ಟಿದ್ದಾರೆಂದು ವರದಿಯಾಗಿದೆ. ಈ ರಹಸ್ಯ ಕಾರ್ಯಾಚರಣೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸಿದೆ. ನಟಿಯೊಂದಿಗೆ ನಿರ್ದೇಶಕ ಮಾದೇಶ ನಡೆಸಿದ ಮಾತುಕತೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರುವಾಗಿದೆ.

Kannada director Madesh caught in a sting operation over the casting couch issue

ಕನ್ನಡ ಚಿತ್ರರಂಗ ಪಾತಾಳದ ಕಡೆ ಮುಖ ಮಾಡುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಮಾದೇಶ ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಕನ್ನಡ ಚಿತ್ರರಂಗ ಮತ್ತಷ್ಟು ಅವಮಾನಗಳನ್ನು ಎದುರಿಸುವಂತಾಗಿದೆ. ಹಾಗಿದ್ದರೆ, ಪವರ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಮಾದೇಶ ಏನೆಲ್ಲಾ ಮಾತಾಡಿದ್ದಾರೆ? ನಟಿ ನಿರ್ದೇಶಕರ ಬಗ್ಗೆ ಮಾಡಿದ ಆರೋಪಗಳೇನು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ನಿರ್ದೇಶಕ ಮಾದೇಶ ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಆಕ್ಷನ್ ಕಟ್ ಹೇಳಿದ್ದ ಮೂರು ಸಿನಿಮಾಗಳು ಸೂಪರ್‌ ಹಿಟ್ ಆಗಿತ್ತು. 'ರಾಮ್', 'ಹುಡುಗರು' ಹಾಗೂ 'ಪವರ್' ಅಂತಹ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹಾಗೇ ದರ್ಶನ್‌ಗೂ 'ಗಜ', 'ಬೃಂದಾವನ'ದಂತಹ ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರ್ದೇಶಕ ಮಾದೇಶ ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಮೂಲಗಳ ಪ್ರಕಾರ ಈಗ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

Kannada director Madesh caught in a sting operation over the casting couch issue

ಈ ಹೊಸ ಸಿನಿಮಾಗೆ ತಾರೆಯರ ಹುಡುಕಾಟ ನಡೆಸುತ್ತಿದ್ದರು ಎಂದು ಚಿತ್ರರಂಗದ ಕೆಲವು ಮೂಲಗಳು ಮಾಹಿತಿ ಹೊರ ಹಾಕಿವೆ. ಆದ್ರೀಗ ಪವರ್ ಟಿವಿಯ ಸ್ಟಿಂಗ್ ಆಪರೇಷನ್‌ನಲ್ಲಿ ನಟಿಯೊಬ್ಬರ ಜೊತೆ 'ಬೆಡ್‌ ಶೇರಿಂಗ್‌' ಬಗ್ಗೆ ಮಾತಾಡಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಸದ್ಯ ಈ ಸ್ಟಿಂಗ್ ಆಪರೇಷನ್ ಕನ್ನಡ ಚಿತ್ರರಂಗದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹೊಟೇಲ್ ಒಂದರಲ್ಲಿ ನಟಿಯೊಂದಿಗೆ ನಿರ್ದೇಶಕ ಮಾದೇಶ ಆಡಿದ ಮಾತುಗಳು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿವೆ.

ಈ ವಿಡಿಯೋದಲ್ಲಿ ಮೊದಲು ನಿರ್ಮಾಪಕರೊಂದಿಗೆ (ಪವರ್‌ ಟಿವಿ ಸಿಬ್ಬಂದಿ) "ಎಲ್ಲದಕ್ಕೂ ಹೊಂದಾಣಿಯಾಗಬೇಕು. ಎಲ್ಲಾ ಆಪ್ಷನ್‌ಗೂ ರೆಡಿಯಿರಬೇಕು ಅಂತವರನ್ನೇ ಹುಡುಕುತ್ತೇನೆ ಎಂದೂ ಹೇಳಿದ್ದಾರೆ. ಹಾಗೇ ಮುಂದುವರೆದು, ನಟಿಯ ಎಂಟ್ರಿ ಆಗುತ್ತೆ. ಆಗ ನಿರ್ಮಾಪಕ (ಪವರ್‌ ಟಿವಿ ಸಿಬ್ಬಂದಿ) ನಟಿಯೊಂದಿಗೆ ಮಾತಾಡುವುದಕ್ಕೆ ಶುರು ಮಾಡಿತ್ತಾರೆ. ಆಗ ನಟಿ ನಿರ್ದೇಶಕರು ಬೆಡ್ ಶೇರಿಂಗ್ ಮಾಡ್ಬೇಕು ಅಂತ ಹೇಳಿದ್ದರು. ನನಗೂ ಅದೇನು ಅಂತ ಅರ್ಥ ಆಗಿಲ್ಲ. ನೀವೇ ಹೇಳಿ ಎನ್ನುತ್ತಾರೆ. ಆಗ ನಟಿ ಅವರು ಏನು ಕಮಿಟ್ಮೆಂಟ್ ಹೇಳಿದರೋ ನೀವೇ ಹೇಳಿಬಿಡಿ. ನನಗೆ ಅವರು ಕಮಿಟ್ಮೆಂಟ್‌ ಅಂತ ಹೇಳಿದರು. ನನಗೆ ಏನೂ ಅರ್ಥ ಆಗಿಲ್ಲ. ನಾನು ಕಮಿಟ್‌ಮೆಂಟ್‌ ಎಲ್ಲಾ ಮಾಡುವುದಿಲ್ಲ ಎಂದು ಹೇಳಿದೆ. ಇಂತಹದ್ದೇ ಒಂದಿಷ್ಟು ಆಫರ್ ಬಂತು ನಾನು ಬಿಟ್ಟೆ ಎಂದು ನಟಿ ಹೇಳುತ್ತಾರೆ.

ಹಾಗೇ ಮೊದಲು ಕಮಿಟ್‌ಮೆಂಟ್ ಅಂದಾಗ ಹಣದ ವಿಚಾರಕ್ಕೆ ಅಂದುಕೊಂಡೆ. ಆಮೇಲೆ ಬೆಡ್ ಶೇರಿಂಗ್ ಅಂತ ಬಿಡಿಸಿ ಹೇಳಿದ್ದರು. ಆಗ ನನಗೆ ಅರ್ಥ ಆಯ್ತು ಎಂದು ನಟಿ ಮತ್ತೆ ಹೇಳುತ್ತಾರೆ. ಒಂದಿಷ್ಟು ಹೊತ್ತು ಮಾತುಕತೆ ನಡೆಸಿದ ಬಳಿಕ ನಿರ್ದೇಶಕ ವಾಪಾಸ್ ಬರುತ್ತಾರೆ. ಆಗ ಮಾದೇಶ, ನಾನು ಇದೂವರೆಗೂ ಅವರ ಸಹವಾಸಕ್ಕೆ ಹೋಗಿಲ್ಲ ಎಂದು ಹೇಳುತ್ತಾರೆ. ಇಂಡಸ್ಟ್ರಿಯಲ್ಲಿ ಒಂದು ಡಾಟ್ ಇಲ್ಲ ಎನ್ನುತ್ತಾರೆ. ಆಗ ನಟಿ ನೀವು ಬೆಡ್ ಶೇರಿಂಗ್ ಅಂತ ಕೇಳಿದ್ಯಾಕೆ? ಎಂದು ಪ್ರಶ್ನೆ ಮಾಡುತ್ತಾರೆ. ಆಗ ನಿರ್ದೇಶಕರು ಪ್ರಡ್ಯೂಸರ್ ಹೇಳುತ್ತಾರೆ ಅಂತ ಕೇಳಿದ್ದು, ಸಿನಿಮಾ ಶೂಟಿಂಗ್‌ನಲ್ಲಿ ನೀವು ನೀಡಿದ್ದೀರಲ್ಲ. ನನಗೆ ಈ ಸಹವಾಸವೇ ಬೇಡ ಎಂದು ಹೇಳುತ್ತಾರೆ. ಒಟ್ನಲ್ಲಿ ಮಾದೇಶ ನಟಿಯೊಬ್ಬರ ಮುಂದೆ ಬೇಡ ಶೇರಿಂಗ್ ಮಾತಾಡಿದ್ದು, ಸದ್ಯ ನಿರ್ದೇಶಕ ಮಾದೇಶ ವಿರುದ್ಧ ಟೀಕೆಗಳು ಶುರುವಾಗಿವೆ. ಆದರೆ, ಇನ್ನೂ ನಿರ್ದೇಶಕ ಮಾದೇಶ ಈ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

Disclaimer: ಇದು ಪವರ್ ಟಿವಿ ರಹಸ್ಯ ಕಾರ್ಯಚರಣೆಯನ್ನು ಬಿತ್ತರಿಸಿದನ್ನು ಆಧರಿಸಿ ವರದಿ ಮಾಡಲಾಗಿದೆ. ಫಿಲ್ಮಿಬೀಟ್ ನೇರವಾಗಿ ವರದಿಯನ್ನು ಮಾಡಿರುವುದಿಲ್ಲ. ಈ ಆರೋಪದ ಬಗ್ಗೆ ನಿರ್ದೇಶಕ ಮಾದೇಶ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಬೇಕಿದೆ.

More from Filmibeat

English summary
Kannada director Madesh caught in a sting operation over the casting couch issue;
Read more about: madesh controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X