ಆಶಿಕಾ ನಂತರ ಮತ್ತೊಬ್ಬ ನಾಯಕಿಯನ್ನು ಲಾಂಚ್ ಮಾಡಿದ ಮಹೇಶ್ ಬಾಬು
'ಅರಸು', 'ಆಕಾಶ್', 'ಮೆರವಣಿಗೆ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಸ್ಯಾಂಡಲ್ ವುಡ್ ನಾಯಕಿಯರ ಪಾಲಿಗೆ ಲಕ್ಕಿ ನಿರ್ದೇಶಕರು. ಯಾಕೆಂದರೆ, ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಬಹುತೇಕ ನಾಯಕಿಯರನ್ನು ಪರಿಚಯಿಸಿದ್ದೇ ನಿರ್ದೇಶಕ ಮಹೇಶ್ ಬಾಬು.
ಐಂದ್ರಿತಾ ರೇ, ಕೃತಿ ಕರಬಂಧ, ಆಶಿಕಾ ರಂಗನಾಥ್, ಲತಾ ಹೆಗಡೆ ಸೇರಿದಂತೆ ಅನೇಕ ನಟಿಮಣಿರಯನ್ನು ಚಂದನವನಕ್ಕೆ ಪರಿಚಯಸಿದವರು. ಅಲ್ಲದೆ, ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಕೂಡ ಮೊದಲ ಸಿನಿಮಾ ಮಾಡಿದ್ದ ಮಹೇಶ್ ಬಾಬು ನಿರ್ದೇಶನದಲ್ಲಿ.
ಮತ್ತೊಂದು ವಿಶೇಷ ಅಂದರೆ, ಕನ್ನಡ ಚಿತ್ರರಂಗದಲ್ಲಿ ಧೂಳ್ ಎಬ್ಬಿಸಿದ ರಮ್ಯಾ ಮತ್ತು ರಕ್ಷಿತಾ ಅವರಿಗೂ ನಟನೆಯ ಪಾಠ ಮಾಡಿದ್ದರು ಮಹೇಶ್ ಬಾಬು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಹೇಶ್ ರಮ್ಯಾ ಮತ್ತು ರಕ್ಷಿತಾ ಅವರಿಗೂ ನಟನೆ ಬಗ್ಗೆ ಹೇಳಿಕೊಟ್ಟಿದ್ದಾರೆ. ಇಂತಹ ನಿರ್ದೇಶಕ ಇದೀಗ ಮತ್ತೋರ್ವ ಹೊಸ ಪ್ರತಿಭೆಯನ್ನು ಸ್ಯಾಂಡಲ್ ವುಡ್ ಗೆ ಕರೆತಂದಿದ್ದಾರೆ.

ಹೌದು, ಮಹೇಶ್ ಬಾಬು ನಿರ್ದೇಶಿಸುತ್ತಿರುವ ಇನ್ನು ಹೆಸರಿಡದ ಸಿನಿಮಾಗೆ ಬೆಂಗಳೂರು ಮೂಲಕ ಕೃತಿಕಾ ಶ್ರೀನಿವಾಸ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಮಹೇಶ್ ಗರಡಿಯಲ್ಲಿ ಪಳಗಿದ ಮತ್ತೋರ್ವ ನಾಯಕಿ ಚಂದನವಕ್ಕೆ ಕಾಲಿಟ್ಟಿದ್ದಾರೆ. ಮುದ್ದು ಮುದ್ದಾಗಿರೊ ಕೃತಿಕಾ ಭರತನಾಟ್ಯ ಕಲಾವಿದೆ.
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ 'ಅಪ್ಪಾಜಿ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಆಮಿನಿ ಅಣ್ಣನ ಮಗಳೆ ಕೃತಿಕಾ . ಸದ್ಯ ಪದವಿ ಮುಗಿಸಿರುವ ಕೃತಿಕಾ ಈಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮತ್ತೋರ್ವ ಹೊಸ ಹೀರೋಯಿನ್ ಅನ್ನು ಮಹೇಶ್ ಬಾಬು ಲಾಂಚ್ ಮಾಡುತ್ತಿದ್ದಾರೆ.


Click it and Unblock the Notifications











