twitter
    For Quick Alerts
    ALLOW NOTIFICATIONS  
    For Daily Alerts

    ಅಬ್ಬಾ.! ಎಂತಹಾ ಗಟ್ಟಿಗಿತ್ತಿ ಈ ದೀದಿ, ಈ ದಿಗ್ವಿಜಯ ಬಣ್ಣಿಸಲು ಮಾತೇ ಇಲ್ಲ: ಕವಿರಾಜ್

    |

    ಭಾರಿ ಕುತೂಹಲ ಮೂಡಿಸಿದ್ದ 5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆಲುವಿನ ನಗೆ ಬೀರಿದೆ. ಮತ್ತೆ ಅಧಿಕಾರದ ಗದ್ದುಗೆ ಏರಿರುವ ದೀದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

    ಕರ್ನಾಟಕದ ಸಿನಿಸೆಲೆಬ್ರಿಟಿಗಳು ಸಹ ದೀದಿ ಗೆಲುವಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಕನ್ನಡ ಗೀತರಚನೆಕಾರ ಮತ್ತು ನಿರ್ದೇಶಕ ಕವಿರಾಜ್ ಪ್ರತಿಕ್ರಿಯೆ ನೀಡಿ, ' ಅಬ್ಬಾ. ಎಂತಹಾ ಗಟ್ಟಿಗಿತ್ತಿ ಈ ದೀದಿ. ದೈತ್ಯ ಜೋಡಿಯ ಅಧಿಕಾರದ ಮದ , ದೇಶ ಆಳುವ ಪಕ್ಷದ ಹಣ ಬಲ, ಚುನಾವಣೆ ಗೆಲ್ಲಲು ಎಂತಹಾ ಹಂತಕ್ಕೂ ಇಳಿಯುವ ಮನಸ್ಥಿತಿ.'

     Kannada Director Mansore and Kaviraj reaction to Mamata Banerjee victory

    'ಧರ್ಮದ ಹೆಸರಲ್ಲಿ ದ್ವೇಷದ ದಾಳ, ತನ್ನ ಸೇನಾನಿಗಳನ್ನೆ ಲಪಟಾಯಿಸಿ ತನ್ನೆದುರೇ ನಿಲ್ಲಿಸಿದ ರಾಜಕೀಯ ಕುತಂತ್ರಗಾರಿಕೆ, ಎಂಟು ಸುತ್ತುಗಳ ಚೈತನ್ಯ ಉಡುಗಿಸುವ ಚುನಾವಣಾ ವೇಳಾಪಟ್ಟಿ, ಕಾಲಿಗೆ ಗಾಯ, ವ್ಹೀಲ್ ಚೇರ್ ಅಲ್ಲೇ ಕುಳಿತು ಪ್ರಚಾರ ನಡೆಸಬೇಕಾದ ಅಸಹಾಯಕತೆ. ಇಷ್ಟೆಲ್ಲಾ ಪ್ರತಿಕೂಲ ವಿಚಾರಗಳ ನಡುವೆಯು ಅಕ್ಷರಶಃ ಏಕಾಂಗಿಯಾಗಿ ಹೋರಾಡಿ ಸಾಧಿಸಿದ ದಿಗ್ವಿಜಯ ಬಣ್ಣಿಸಲು ಮಾತೇ ಇಲ್ಲ. ಶರಣೋ ಶರಣು..'ಎಂದು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

     Kannada Director Mansore and Kaviraj reaction to Mamata Banerjee victory

    Recommended Video

    ಚಾಮರಾಜಪೇಟೆಯ ಸ್ಮಶಾನದ ಭೀಕರ ದೃಶ್ಯವನ್ನು ತೋರಿಸಿದ ಜಿಮ್ ರವಿ | Filmibeat Kannada

    ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಮಂಸೋರೆ, 'ಪ.ಬಂಗಾಳದ ಗೆಲುವು ಕೇವಲ ಒಂದು ಪಕ್ಷದ ಗೆಲುವಲ್ಲಾ. ಪಕ್ಷ, ಸಿದ್ಧಾಂತಗಳ ಆಚೆಗೆ 'ಪುರುಷ ಮನಸ್ಥಿತಿಯ' ವಿರುದ್ಧದ ಗೆಲುವು. ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ, ಹೆಣ್ಣನ್ನು (ಅದರಲ್ಲೂ ರಾಜ್ಯದ ಮುಖ್ಯಮಂತ್ರಿಯನ್ನು) ಸಾರ್ವಜನಿಕ ವೇದಿಕೆಯಲ್ಲಿ ಲೇವಡಿ ಮಾಡುವಂತಹ 'ಸನಾತನ ಪುರುಷ ಮನಸ್ಥಿತಿ'ಯ ವಿರುದ್ಧದ ಗೆಲುವು ಖಂಡಿತವಾಗಿಯೂ ಚರಿತ್ರೆಯಲ್ಲಿ ದಾಖಲಾಗಬೇಕಾದ ವಿಷಯ. ಬಂಗಾಳದ ರಾಜ್ಯ ದೇವತೆ 'ಕಾಳಿಮಾತೆ' ದೇಶದೆಲ್ಲೆಡೆ ಇರುವ ಪುರುಷರ ಒಳಗಿರುವ 'ತಾನು ಗಂಡಸು ಎಂಬ ಅಹಮ್ಮಿನ' ರಾಕ್ಷಸನನ್ನು ಬಲಿ ತೆಗೆದುಕೊಳ್ಳುವಂತಾಗಲಿ.' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    English summary
    Kannada Director Mansore and Kaviraj reaction to Mamata Banerjee victory.
    Sunday, May 2, 2021, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X