ಒಂದೆಡೆ ಅಪ್ಪನ ಸಾವು, ಮತ್ತೊಂದೆಡೆ ಕಾಮಿಡಿ ದೃಶ್ಯ: ವೃತ್ತಿಪರತೆ ಮೆರೆದ ಗಣೇಶ್

Recommended Video

ತಂದೆಯ ಸಾವಿನಲ್ಲೂ ವೃತ್ತಿಪರತೆ ಮೆರೆದ ಕನ್ನಡ ನಟ ಗಣೇಶ್ | FILMIBEAT KANNADA

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಗಿಮಿಕ್ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಗಣೇಶ್ ವೃತ್ತಿ ಜೀವನದಲ್ಲೆ ಮೊದಲ ಬಾರಿಗೆ ಹಾರರ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕಾಮಿಡಿ ಮಾಡುತ್ತ ಲವರ್ ಬಾಯ್ ಆಗಿ ಮಿಂಚುತ್ತಿದ್ದ ಗಣಿ ದಿಢೀರನೆ ಅಭಿಮಾನಿಗಳನ್ನು ಭಯ ಪಡಿಸಲು ಬರುತ್ತಿದ್ದಾರೆ.

ಅಂದ್ಹಾಗೆ ಇತ್ತೀಚಿಗಷ್ಟೆ ಗಿಮಿಕ್ ಚಿತ್ರತಂಡ ಮಾಧ್ಯಮ ಮುಂದೆ ಹಾಜರಾಗಿತ್ತು. ಈ ಸಮಯದಲ್ಲಿ ಗಣೇಶ್ ವೃತ್ತಿ ಪರತೆಯನ್ನು ಮೆರೆದ ವಿಚಾರವನ್ನು ಚಿತ್ರತಂಡ ಬಹಿರಂಗ ಪಡಿಸಿದ್ದಾರೆ.

ಗಿಮಿಕ್ ಚಿತ್ರದ ಚಿತ್ರೀಕರಣ ಸಮಯದಲ್ಲಿ ನಟ ಗಣೇಶ್ ತಂದೆ ತೀವ್ರ ಆನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತ ಗಣೇಶ್ ಚಿತ್ರೀಕಣದಲ್ಲಿ ಇದ್ದರು. ಅಷ್ಟೊತ್ತಿಗೆ ತಂದೆ ಇನ್ನಿಲ್ಲ ಎನ್ನುವ ಸುದ್ದಿ ಗಣೇಶ್ ಗೊತ್ತಾಗುತ್ತೆ.

ನೋವಿನಲ್ಲು ಚಿತ್ರೀಕರಣ

ನೋವಿನಲ್ಲು ಚಿತ್ರೀಕರಣ

ಮಧ್ಯಾಹ್ನದ ಅಷ್ಟೊತ್ತಿಗೆ ಅಪ್ಪ ಇನ್ನಿಲ್ಲ ಎನ್ನುವ ಅರಗಿಸಲಾಗದ ಸುದ್ದಿ ಗಣೇಶ್ ಗೆ ಗೊತ್ತಾದರು ಚಿತ್ರತಂಡಕ್ಕೆ ತೋರಿಸಿಕೊಳ್ಳದೆ, ಯಾವುದೆ ತೊಂದರೆ ಆಗಬಾರದು ಎಂದು ತಮ್ಮ ಪಾಲಿನ ಶೂಟಿಂಗ್ ಸಂಪೂರ್ಣವಾಗಿ ಮುಗಿಸಿ ಅಲ್ಲಿಂದ ಹೊರಟಿದ್ದಾರೆ. ಅಷ್ಟಕ್ಕು ಗಣೇಶ್ ಸುದ್ದಿ ತಿಳಿದ ತಕ್ಷಣ ಅಲ್ಲಿಂದ ಹೊರಡಬಹುದಿತ್ತು.

ಬಂಗಲೆಯ ಅನುಮತಿ ಅವತ್ತೆ ಕೊನೆದಿನ

ಬಂಗಲೆಯ ಅನುಮತಿ ಅವತ್ತೆ ಕೊನೆದಿನ

ಅವತ್ತೆ ಚಿತ್ರೀಕರಣ ಸಂಪೂರ್ಣ ಮುಗಿಸಲು ಕಾರಣ ಅಂದು ಚಿತ್ರೀಕರಣ ಒಂದು ಬಂಗಲೆಯಲ್ಲಿ ನಡೆಯುತ್ತಿತ್ತಂತೆ. ಆ ಬಂಗಲೆಯಲ್ಲಿ ಚಿತ್ರೀಕರಣ ಮಾಡಲು ಅಂದೇ ಕೊನೆಯ ದಿನ. ಎಲ್ಲಾ ಕಲಾವಿದರು ಅವತ್ತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಹಾಗಾಗಿ ಚಿತ್ರೀಕರಣ ಸ್ಥಗಿತ ಗೊಳಿಸಿದ್ರೆ ತೊಂದರೆ ಆಗುತ್ತೆ ಎಂದು ಅಪ್ಪ ನಿಧನರಾದ ಸುದ್ದಿಯನ್ನು ಯಾರಿಗೂ ಹೇಳದೆ ಶೂಟಿಂಗ್ ಮುಗಿಸಿದ್ರಂತೆ.

ಕಾಮಿಡಿ ದೃಶ್ಯದ ಚಿತ್ರೀಕರಣ

ಕಾಮಿಡಿ ದೃಶ್ಯದ ಚಿತ್ರೀಕರಣ

ನೋವಿನ ಸಂಗತಿ ಅಂದ್ರೆ ಅವತ್ತು ಗಣೇಶ್ ಅಭಿನಯಿಸಿದ್ದು ಕಾಮಿಡಿ ದೃಶ್ಯದಲ್ಲಿ. ತಂದೆಯ ಸಾವಿನ ನೋವನ್ನು ಬಚ್ಚಿಟ್ಟುಕೊಂಡು ಕಾಮಿಡಿ ದೃಶ್ಯದಲ್ಲಿ ನಟಿಸಿದ್ದಾರೆ. ಗಣೇಶ್ ವೃತ್ತಿ ಪರತೆಯನ್ನು ನಿರ್ದೇಶಕ ನಾಗಣ್ಣ ಮಾಧ್ಯಮ ಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಈ ವಿಚಾರವನ್ನು ಗಣೇಶ್ ಎಲ್ಲಿಯೋ ಹೇಳಿಕೊಂಡಿರಲ್ಲಿ.

ಕಲಾವಿದನ ಕಷ್ಟ ಅವತ್ತು ಗೊತ್ತಾಯಿತು

ಕಲಾವಿದನ ಕಷ್ಟ ಅವತ್ತು ಗೊತ್ತಾಯಿತು

ಅವತ್ತು ಒಬ್ಬ ಕಲಾವಿದನ ನಿಜವಾದ ಕಷ್ಟ ಎಏನು ಎನ್ನುವುದು ಗೊತ್ತಾಯಿತು ಎಂದು ಗಣೇಶ್ ಹೇಳಿದ್ದಾರೆ. ದುಃಖದ ನಡುವೆಯೂ ಅವತ್ತು ಕಾಮಿಡಿ ದೃಶ್ಯದಲ್ಲಿ ನಟಿಸುವ ಅನಿವಾರ್ಯತೆ ಇತ್ತು. ಕಲಾವಿದನ ಮನಸ್ಸು ಅಪ್ ಸೆಟ್ ಆದ್ರೆ ನಟಿಸಲು ಸಾಧ್ಯವಿಲ್ಲ. ಎಷ್ಟು ಕಷ್ಟವಾಗುತ್ತೆ ಎನ್ನುವುದು ಅವತ್ತು ಗೊತ್ತಾಯಿತು ಎಂದು ಗಣೇಶ್ ಹೇಳಿದ್ದಾರೆ.

More from Filmibeat

English summary
Kannada director Naganna reveals golden star ganesh Professionalism. Ganesh starrer first horror film Gimmick set be released on August 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X