''ಯಾಕೆ ಜೈಲಿನಲ್ಲಿ ದರ್ಶನ್ ಅಳುತ್ತಿರುವ ಫೋಟೋ ಸಿಗಲಿಲ್ವಾ'' - ನಂದಕಿಶೋರ್...!

By ಫಿಲ್ಮಿಬೀಟ್ ಡೆಸ್ಕ್

ಮನೆ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನು ಸಾಕಿದ ಪರಿಣಾಮದಿಂದ ಇವತ್ತು ದರ್ಶನ್ ಜೈಲಿನಲ್ಲಿದ್ದಾರೆ. ದರ್ಶನ್ ಅವರ ಈ ದಾರುಣ ಸ್ಥಿತಿಯನ್ನು ಕಂಡು ಚಿತ್ರರಂಗದ ಅನೇಕರು ಮರುಗಿದ್ದಾರೆ. ಸಹವಾಸ ದೋಷದಿಂದ ದರ್ಶನ್ ಹೀಗಾಗಿದ್ದಾರೆ ಎನ್ನುವ ಮಾತುಗಳನ್ನೂ ಕೂಡ ಹೇಳಿದ್ದಾರೆ.

ಆದರೂ, ದರ್ಶನ್‌ಗೆ ಜ್ಞಾನೋದಯವಾದಂತೆ ಇಲ್ಲ. ಆ ಯಾವ ಲಕ್ಷಣ ಕೂಡ ಕಾಣುತ್ತಿಲ್ಲ. ಯಾಕೆಂದರೆ.. ಯಾರೆಂದರೆ ಯಾರನ್ನೂ ಬಿಡದೆ ಕೈ ಮಾಡುವ, ಹೊಡೆಯುವ ಬಡೆಯುವ ಶೋಕಿಯನ್ನು ಅಂಟಿಸಿಕೊಂಡಿರುವ ದರ್ಶನ್, ಜೈಲಿನಲ್ಲಿ ಕ್ರಿಮಿನಲ್‌ಗಳ ಜೊತೆ ದೋಸ್ತಿ ಮಾಡಿಕೊಂಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕೊಲೆ, ಸುಲಿಗೆ, ಬೆದರಿಕೆ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾದ ವಿಲ್ಸನ್ ಗಾರ್ಡನ್ ನಾಗನ ಸಹವಾಸ ಮಾಡಿದ್ದಾರೆ. ಇವರ ಈ ಸ್ನೇಹಕ್ಕೆ ಕೈಗನ್ನಡಿ ಹಿಡಿಯುವಂತಹ ಫೋಟೋ ಕೂಡ ಪರಪ್ಪನ ಅಗ್ರಹಾರದಿಂದ ತೇಲಿಕೊಂಡು ಹೊರ ಬಂದಿದೆ. ವ್ಯಾಪಕವಾದ ಚರ್ಚೆಗೆ ಕಾರಣವೂ ಆಗಿದೆ.

kannada-director-nandakishore-calls-actor-darshans-viral-jail-photos-fake

ಆದರೆ, ಈ ಫೋಟೋ ನಕಲಿ. ಹೀಗೊಂದು ವಾದವನ್ನು ಕನ್ನಡ ಚಿತ್ರರಂಗದ ನಿರ್ದೇಶಕ ನಂದಕಿಶೋರ್ ಮಾಡಿದ್ದಾರೆ. ಹೌದು, ದರ್ಶನ್ ಅವರ ಅತ್ಯಾಪ್ತ ತರುಣ್ ಸುಧೀರ್ ಅವರ ಅಣ್ಣ ಕೂಡ ಆಗಿರುವ ನಂದಕಿಶೋರ್ ಇದು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವ ಕಾಲ. ಈ ಕಾಲದಲ್ಲಿ ಯಾವುದು ನಿಜಾ.. ಯಾವುದು ಸುಳ್ಳು ಎಂದು ಹೇಳುವುದು ಕಷ್ಟ ಎಂದಿದ್ದಾರೆ.

ಹೌದು, ದರ್ಶನ್ ವೈರಲ್ ಫೋಟೋಗಳ ಬಗ್ಗೆ ಮಾತನಾಡಿರುವ ನಂದಕಿಶೋರ್, ಹರಿದಾಡುತ್ತಿರುವ ಫೋಟೋಗಳು ನಕಲಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ದರ್ಶನ್ ಅವರು ಇರುವಂತಹ ಜಾಗ ಎಂಥಹದ್ದು ಅಲ್ಲಿ ಸಾಧು-ಸಂತರು ಇರುತ್ತಾರಾ ಎಂದು ಪ್ರಶ್ನೆ ಮಾಡಿರುವ ನಂದಕಿಶೋರ್, ಅಷ್ಟೊಂದು ಸೆಕ್ಯುರಿಟಿ ಇರುವ ಸ್ಥಳದಲ್ಲಿ ಯಾರೋ ಇಬ್ಬರು ಕುಳಿತುಕೊಂಡು, ಏನೋ ಮಾಡುತ್ತಾರೆ ಅನ್ನುವುದು ಸರಿ ಅಲ್ಲ ಎಂದಿದ್ದಾರೆ.

kannada-director-nandakishore-calls-actor-darshans-viral-jail-photos-fake

ಇನ್ನೂ ಮನೆಯಿಂದ ಅವರು ದೂರ ಇದ್ದಾರೆ. ತಮ್ಮ ಮಗನಿಂದ ದೂರ ಇದ್ದಾರೆ. ಅವರು ಎಷ್ಟು ನೋವು ಅನುಭವಿಸುತ್ತಿರಬಹುದು, ಸಾವಿರಾರು ಕೋಟ್ಯಂತರ ಜನ ಅವರಿಗೆ ಆಶೀರ್ವಾದ ಮಾಡುತ್ತಿರುವಾಗ ಅವರ ಮನದಲ್ಲಿ ಯಾವ ಭಾವನೆ ಬರುತ್ತಿರಬಹುದು ಎಂದು ಪ್ರಶ್ನೆಯನ್ನೂ ಕೂಡ ಮಾಡಿರುವ ನಂದಕಿಶೋರ್, ಸರ್ಕಾರದಿಂದ ಅವರಿಗೆ ಬೆಡ್ ವ್ಯವಸ್ಥೆ ಮಾಡದಿರಬಹುದು, ಊಟ ನೀಡದೇ ಇರಬಹುದು, ಹೀಗಾಗಿ ಅವರು ಏನು ತಿನ್ನುತ್ತಿದ್ದಾರೆ, ಏನು ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಯಾರೋ ಇಬ್ಬರು ಕುಳಿತುಕೊಂಡ ತಕ್ಷಣಕ್ಕೆ ಅವರಿಗೆ ರಾಜಾತಿಥ್ಯ ಕೊಟ್ಟಿದ್ದಾರೆ ಅನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಈ ಫೋಟೋಗಳನ್ನು ತೆಗೆದವರಿಗೆ ಅವರು ಆಳುತ್ತಿರುವ ಪೋಟೋ ತೆಗೆಯಲು ಸಾಧ್ಯವಾಗಿಲಿಲ್ವಾ ? ಅವರು ಬೇಜಾರಲ್ಲಿ ಇರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ ಎಂದು ಪ್ರಶ್ನೆಯನ್ನು ಕೂಡ ನಂದಕಿಶೋರ್ ಕೇಳಿದ್ಧಾರೆ.

ಮುಂದುವರೆದು ಮಾತನಾಡಿರುವ ನಂದಕಿಶೋರ್, ಇವತ್ತು ತಂತ್ರಜ್ಞಾನ ಮುಂದುವರೆದಿದೆ. ಅದರಲ್ಲಿಯೂ AI ಟೆಕ್ನಾಲಜಿ ಬಂದ ಮೇಲೆ ನಕಲಿ ಫೋಟೋಗಳ ಹಾವಳಿ ಹೆಚ್ಚಾಗಿದೆ. ಮಾರ್ಫಿಂಗ್ ಫೋಟೋ ಬರ್ತಿದೆ ಎಂದಿರುವ ನಂದಕಿಶೋರ್, ನಮ್ಮ ಜೊತೆ ಇಲ್ಲದೆ ಇರುವ ನಾಯಕರ ಫೋಟೋವನ್ನು ಕೂಡ ನಾವು ಸಿನಿಮಾಗಳಲ್ಲಿ ಈಗ ಹಾಕಬಹುದು ಎಂದಿದ್ದಾರೆ. ಈ ಟೆಕ್ನಾಲಜಿಯಿಂದ ಏನು ಬೇಕಾದರೂ ಮಾಡಬಹುದು ಎಂದಿರುವ ನಂದಕಿಶೋರ್, ನನ್ನ ಪ್ರಕಾರ ಇದು ಫೇಕ್ ಫೋಟೋ ವ್ಯೆಯಕ್ತಿಕವಾಗಿ ನಾನು ಇದನ್ನು ನಂಬುವುದಿಲ್ಲ ಎಂದಿದ್ದಾರೆ. ಈ ಮೂಲಕ ದರ್ಶನ್‌ಗೆ ಜೈ ಅಂದಿದ್ದಾರೆ ನಂದಕಿಶೋರ್.

More from Filmibeat

Read more about: darshan sandalwood jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X