ಖ್ಯಾತ ಬರಹಗಾರ ನಿರ್ದೇಶಕ ನಂಜುಂಡ ನಿಧನ
ಕನ್ನಡದ ಖ್ಯಾತ ಬರಹಗಾರ, ನಿರ್ದೇಶಕ ನಂಜುಂಡ ಕೃಷ್ಣ ಅವರು ಮಂಗಳವಾರ ನಿಧನರಾಗಿದ್ದಾರೆ. 52 ವರ್ಷದ ನಂಜುಂಡ ಅವರು ಡಯಾಬಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಎರಡು ವಾರದ ಹಿಂದೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಇವರು ಪತ್ನಿ ಮತ್ತು ಪತ್ರಿಯನ್ನ ಬಿಟ್ಟು ಅಗಲಿದ್ದಾರೆ.
ಪ್ರಕಾಶ್ ರೈ ನಾಯಕನಾಗಿ ನಟಿಸಿದ್ದ 'ಮನಸಲೂ ನೀನೆ ಕನಸಲೂ ನೀನೆ' ಹಾಗೂ ರಾಜೇಶ್ ಕೃಷ್ಣನ್ ನಾಯಕನಾಗಿ ಕಾಣಿಸಿಕೊಂಡಿದ್ದ 'ಮೆಲೋಡಿ' ಚಿತ್ರಗಳನ್ನ ನಂಜುಂಡ ಅವರು ನಿರ್ದೇಶನ ಮಾಡಿದ್ದರು.

ನಿರ್ದೇಶನಕ್ಕಿಂತ ಹೆಚ್ಚು ಚಿತ್ರಕಥೆ ಮತ್ತು ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದರು. ಅನೇಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತೆ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ನಂಜುಂಡ, ಕೆ ವಿ ರಾಜು ಅವರ ಶಿಷ್ಯ. ಪತ್ರಕರ್ತರಾಗಿಯೂ ಕೆಲಸ ಮಾಡಿದ್ದ ಅವರು ಬದುಕಿಗೆ ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ಕ್ಷೇತ್ರವನ್ನು. ಬಡ ಟೈಲರ್ ಒಬ್ಬನ ಮಗನಾಗಿದ್ದ ನಂಜುಂಡ ಬಹಳ ಕಷ್ಟಪಟ್ಟು ಬಂದವರು.


Click it and Unblock the Notifications











