Pawan Wadeyar: 'ಬಾಲಿವುಡ್'ಗೆ ಹೊರಟ ಡೈರೆಕ್ಟರ್ ಪವನ್ ಒಡೆಯರ್!

ಕನ್ನಡ ಚಿತ್ರರಂಗದ ನಿರ್ದೇಶಕ ಪವನ್ ಒಡೆಯರ್ ಈಗ ಬಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ಕೆಲವು ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ ಪವನ್ ಒಡೆಯರ್, ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೊದಲ ಬಾಲಿವುಡ್‌ ಚಿತ್ರವನ್ನು ಪವನ್ ಒಪ್ಪಿಕೊಂಡಿದ್ದು, ಚಿತ್ರದ ಬಗ್ಗೆ ಮಾಹಿತಿ ಹೊರ ಬಂದಿದೆ.

'ಗೋವಿಂದಾಯ ನಮಃ', 'ರಣವಿಕ್ರಮ', 'ಗೂಗ್ಲಿ', 'ನಟಸಾರ್ವಭೌಮ', ಸೇರಿದಂತೆ ಹಲವು ಚಿತ್ರಗಳನ್ನು ಪವನ್ ಒಡೆಯರ್ ಕನ್ನಡದಲ್ಲಿ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ 'ಗೂಗ್ಲಿ' ಡೈರೆಕ್ಟರ್ ಈಗ ಡೈರೆಕ್ಟ್ ಆಗಿ ಬಾಲಿವುಡ್‌ಗೆ ಲ್ಯಾಂಡ್ ಆಗಿದ್ದಾರೆ.

'ನೋಟರಿ' ಚಿತ್ರಕ್ಕೆ ಪವನ್ ಸಾರಥಿ!

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ 'ನೋಟರಿ' ಎಂದು ಟೈಟಲ್ ಇಡಲಾಗಿದೆ. ಇದೊಂದು ಕಾಮಿಡಿ ಡ್ರಾಮಾ ಸಿನಿಮಾವಾಗಿದೆ. ಬೆಂಗಾಳಿಯ ಖ್ಯಾತ ಕಲಾವಿದ, ನಿರ್ದೇಶಕ ಪರಂಬ್ರತ ಚಟ್ಟೋಪಾಧ್ಯಾ ಚಿತ್ರದ ನಾಯಕ ನಟ.

Kannada Director Pawan Wadeyar To Make Bollywood Debut

ಪರಂಬ್ರತ ಚಟ್ಟೋಪಾಧ್ಯಾ, ವಿದ್ಯಾ ಬಾಲನ್, ಅನುಷ್ಕಾ ಶರ್ಮಾ ಹಾಗೂ ರವೀನಾ ಟಂಡನ್ ಜೊತೆ ನಟಿಸಿದ್ದಾರೆ. ಕಹಾನಿ, ಪರಿ ಹಾಗೂ ನೆಟ್ ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿರುವ ಸೂಪರ್ ಹಿಟ್ ಶೋ ಅರಣ್ಯಕಾದಲ್ಲಿ ನಟಿಸಿದ್ದಾರೆ.

'ನೋಟರಿ' ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಸಹ ಹೊತ್ತಿದ್ದಾರೆ. ಗುಪ್ತ್, ಮೋಹರಾ, ಶೇರ್‌ಷಾ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ ಕಾಶ್ ಎಂಟರ್‌ಟೈನ್ಮೆಂಟ್ ಜೊತೆಗೂಡಿ ಪವನ್ ಒಡೆಯರ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್‌ನಡಿ ನೋಟರಿ ಚಿತ್ರಕ್ಕೆ ಹಣ ಹಾಕಿದ್ದಾರೆ.

Kannada Director Pawan Wadeyar To Make Bollywood Debut

ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ ಅಥವಾ ಛತ್ತೀಸ್‌ಗಡಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದು, ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್‌ಡೇಟ್‌ಗಳನ್ನು ನೀಡಲಿದೆ ಚಿತ್ರತಂಡ.

ಸದ್ಯ ಪವನ್ ಒಡೆಯರ್ 'ರೆಮೋ' ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದು, ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಪ್ರದರ್ಶನ ಕಂಡು 12 ಪ್ರಶಸ್ತಿಗೆ ಗೆದ್ದುಕೊಂಡಿರುವ 'ಡೊಳ್ಳು' ಸಿನಿಮಾವನ್ನು ಬಿಗ್ ಸ್ಕ್ರೀನ್‌ಗೆ ತರಲಿದ್ದಾರೆ.

More from Filmibeat

English summary
Kannada Director Pawan Wadeyar To Make Bollywood Debut, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X