ಭಾರತ ಚಿತ್ರರಂಗದಲ್ಲೇ ಅತಿ ದೊಡ್ಡ ಬಟೆಜ್ ನ ಚಿತ್ರ ಮಾಡಲು ಪ್ರೇಮ್ ಪ್ಲಾನ್!

ಇಡೀ ಕರ್ನಾಟಕದ ಸಿನಿಮಾಭಿಮಾನಿಗಳು ಈಗ ಕಾಯುತ್ತಿರುವುದು ಒಂದೇ ಒಂದು ಸಿನಿಮಾಗೆ. ಅದು ಒನ್ ಅಂಡ್ ಒನ್ಲಿ 'ದಿ ವಿಲನ್'. ಈ ಚಿತ್ರ ಇದೇ ತಿಂಗಳ 18 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಿಡುಗಡೆಗೆ ಮೊದಲೇ ಪ್ರೇಮ್ ಅವರ ಮತ್ತೊಂದು ಸಿನಿಮಾದ ಕೆಲ ವಿವರಗಳು ರಿವೀಲ್ ಆಗಿವೆ.

ನಿರ್ದೇಶಕ ಪ್ರೇಮ್ ಯೋಚನೆ ಯಾವಾಗಲೂ ಬಹಳ ದೊಡ್ಡದಿರುತ್ತದೆ. ಬೇರೆ ಭಾಷೆಗಳಿಂತ ನಾವೆಲ್ಲೂ ಕಡಿಮೆ ಇಲ್ಲ ಎನ್ನುವ ಪ್ರೇಮ್ ಈಗ ಒಂದು ಮಹಾ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 'ಬಾಹುಬಲಿ', '2.0', 'ಥಕ್ಸ್ ಆಫ್ ಹಿಂದೂಸ್ತಾನ್' ಚಿತ್ರಗಳಿಂತ ದೊಡ್ಡ ಬಜೆಟ್ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡಲು ಹೊರಟಿದ್ದಾರೆ.

ಅಂದಹಾಗೆ, ಪ್ರೇಮ್ ಅದರ ಮುಂದಿನ ಸಿನಿಮಾದ ಬಗ್ಗೆ ಅವರೇ ಇತ್ತೀಚಿಗಷ್ಟೆ 'ದಿ ವಿಲನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅವರ ಸಂಪೂರ್ಣ ಮುಂದಿದೆ ಓದಿ...

ಅತಿ ದೊಡ್ಡ ಬಜೆಟ್ ನ ಸಿನಿಮಾ

ಅತಿ ದೊಡ್ಡ ಬಜೆಟ್ ನ ಸಿನಿಮಾ

ನಿರ್ದೇಶಕ ಪ್ರೇಮ್ ಈಗ 'ದಿ ವಿಲನ್' ಚಿತ್ರ ಬಿಡುಗಡೆ ಮಾಡುವ ಕೆಲಸದಲ್ಲಿ ಇದ್ದಾರೆ. ಈ ಸಿನಿಮಾ ಕನ್ನಡದ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಿದೆ. ಆದರೆ, ಈ ಸಿನಿಮಾದ ನಂತರ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಬಜೆಟ್ ಚಿತ್ರವನ್ನ ಮಾಡುವ ಆಲೋಚನೆ ಪ್ರೇಮ್ ಅವರದ್ದಾಗಿದೆ.

ತನ್ವಿ ಫಿಲ್ಮ್ ನಲ್ಲಿ ನಿರ್ಮಾಣ

ತನ್ವಿ ಫಿಲ್ಮ್ ನಲ್ಲಿ ನಿರ್ಮಾಣ

ಪ್ರೇಮ್ ಅವರ ಈ ದೊಡ್ಡ ಚಿತ್ರಕ್ಕೆ ಹೆಗಲು ನೀಡುತ್ತಿರುವುದು ನಿರ್ಮಾಪಕ ಸಿ ಆರ್ ಮನೋಹರ್. ಈಗಾಗಲೇ 'ದಿ ವಿಲನ್' ಚಿತ್ರಕ್ಕೆ ಬಂಡವಾಳ ಹಾಕಿರುವ ಸಿ ಆರ್ ಮನೋಹರ್ ಅದರ ನಂತರ ಪ್ರೇಮ್ ಜೊತೆ ಸೇರಿ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ತನ್ವಿ ಫಿಲ್ಮ್ಸ್‌ ಬ್ಯಾನರ್ ನಲ್ಲಿ ಬರುವ ಚಿತ್ರ ಇಡೀ ಇಂಡಿಯಾದಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾವಾಗಿರಲಿದೆಯಂತೆ.

ಆರು ಜನ ಹೀರೋಗಳು

ಆರು ಜನ ಹೀರೋಗಳು

ಈ ಸಿನಿಮಾದಲ್ಲಿ ಆರು ಸೂಪರ್ ಸ್ಟಾರ್ ಗಳ ಸಮಾಗಮ ಆಗಲಿದೆಯಂತೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯ ಒಬ್ಬೊಬ್ಬ ನಟರು ಇಲ್ಲಿ ಇರಲಿದ್ದಾರಂತೆ. ಈ ಪೈಕಿ 50 ಕೋಟಿ ಸಂಭಾವನೆ ಇರುವ ನಟರು ಚಿತ್ರದ ಭಾಗ ಆಗಲಿದ್ದಾಂತೆ.

ಅಕ್ಟೋಬರ್ 18ಕ್ಕೆ ಅನೌನ್ಸ್

ಅಕ್ಟೋಬರ್ 18ಕ್ಕೆ ಅನೌನ್ಸ್

'ದಿ ವಿಲನ್' ಸಿನಿಮಾ ಅಕ್ಟೋಬರ್ 18ಕ್ಕೆ ರಿಲೀಸ್ ಆಗಲಿದ್ದು, ಅದೇ ದಿನ ಈ ಹೊಸ ಚಿತ್ರದ ಕೆಲ ವಿಚಾರಗಳನ್ನ ಪ್ರೇಮ್ ತಿಳಿಸಲಿದ್ದಾರಂತೆ. ಈಗಾಗಲೇ ಚಿತ್ರದ ಕಥೆಯನ್ನ ಮೂರು ನಟರು ಒಪ್ಪಿದ್ದು, ಇನ್ನುಳಿದ ನಟರಿಗೆ ಸಂಪರ್ಕ ಮಾಡುತ್ತಿದ್ದಾರಂತೆ.

ರಕ್ಷಿತಾ ತಮ್ಮನಿಗೆ ಒಂದು ಸಿನಿಮಾ

ರಕ್ಷಿತಾ ತಮ್ಮನಿಗೆ ಒಂದು ಸಿನಿಮಾ

ಈ ಸಿನಿಮಾಗೆ ಮುಂಚೆ ನಟಿ, ಪತ್ನಿ ರಕ್ಷಿತಾ ಅವರ ಸಹೋದರನ ಸಿನಿಮಾಗೆ ಪ್ರೇಮ್ ಚಾಲನೆ ನೀಡಲಿದ್ದಾರಂತೆ. ಈ ಸಿನಿಮಾ ಪ್ರೇಮ್ ಬ್ಯಾನರ್ ನಲ್ಲಿಯೇ ನಿರ್ಮಾಣ ಆಗಲಿದ್ದು, ಅಭಿಷೇಕ್ ತಮ್ಮ ಬಾವನ ಡೈರೆಕ್ಷನ್ ಮೂಲಕ ಲಾಂಚ್ ಆಗಲಿದ್ದಾರಂತೆ.

More from Filmibeat

English summary
Kannada director Prem planning to do a highest budget indian movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X