»   » ಹುಟ್ಟುಹಬ್ಬ ಸಂಭ್ರಮದ ವೇಳೆ 'ಪೋಲಿ'ಯಾದ ಪ್ರೇಮ್

ಹುಟ್ಟುಹಬ್ಬ ಸಂಭ್ರಮದ ವೇಳೆ 'ಪೋಲಿ'ಯಾದ ಪ್ರೇಮ್

Posted By:
Subscribe to Filmibeat Kannada
Prem Rakshita
ಪ್ಲೀಸ್ 'ಎಕ್ಸ್ ಕ್ಯೂಸ್ ಮಿ', ಕನ್ನಡದ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಸದ್ಯದಲ್ಲೇ 'ಪೋಲಿ'ಯಾಗಲಿದ್ದಾರೆ. ನಟಿ ರಕ್ಷಿತಾರನ್ನು ಸಾಕಷ್ಟು ಹಿಂದೆಯೇ ಮದುವೆಯಾಗಿ 'ಸೂರ್ಯ' ಎಂಬ ಗಂಡುಮಗುವಿನ ತಂದೆಯಾಗಿರುವ ಪ್ರೇಮ್, ಇನ್ಮುಂದೆ ಪೋಲಿಯಾಗುವುದು ಯಾಕೆ ಎಂಬ ನಿಮ್ಮ ಪ್ರಶ್ನೆಗೆ ತಕ್ಕ ಸಿದ್ಧ ಉತ್ತರವಿದೆ. ಹೌದು, ನಿಜವಾಗಿಯೂ ಪ್ರೇಮ್ ಪೋಲಿಯಾಗಲಿದ್ದಾರೆ. ಆದರೆ ಅದು ಸಿನಿಮಾದಲ್ಲಿ, ನಿಜಜೀವನದಲ್ಲಿ ಅಲ್ಲ!

ನಿರ್ದೇಶಕ ಪ್ರೇಮ್ ಇಂದು (22 ಅಕ್ಟೋಬರ್ 2012) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ 'ಪೋಲಿ' ಚಿತ್ರದಲ್ಲಿ ನಟಿಸಲಿರುವ ಸುದ್ದಿಯನ್ನೂ ಜಗಜ್ಜಾಹೀರು ಮಾಡಿದ್ದಾರೆ. ಪ್ರೇಮ್ ನಟನೆಯ 'ಪ್ರೇಮ್ ಅಡ್ಡ' ಚಿತ್ರವು ಸದ್ಯದಲ್ಲೇ ಬಿಡುಗಡೆ ಆಗಲಿದ್ದು ಬಳಿಕ ಈ ಪೋಲಿ ಚಿತ್ರದ ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಪ್ರೇಮ್ ಶಿಷ್ಯ, ಈ ಮೊದಲು 'ಗುಬ್ಬಿ' ಚಿತ್ರ ನಿರ್ದೇಶಿಸಿದ್ದ ವಿಜಯ್ ನಿರ್ದೇಶಿಸಲಿದ್ದಾರೆ.

ಇತ್ತೀಚಿಗೆ 'ಪ್ರೇಮ್ ಅಡ್ಡ' ಚಿತ್ರದ 'ಮೇಲುಕೋಟೆ...' ಎಂದು ಪ್ರಾರಂಭವಾಗುವ 'ಪೋಲಿ ಸಾಂಗ್' ಸುದ್ದಿಗೂ ಈ ಚಿತ್ರದ ಟೈಟಲ್ ಗೂ ಕಾಕತಾಳೀಯ ಸಂಬಂಭ ಏರ್ಪಟ್ಟಿದೆ. 'ಪ್ರೇಮ್ ಅಡ್ಡ' ಚಿತ್ರದಲ್ಲಿರುವ ಮೇಲುಕೋಟೆ ಸಾಂಗ್ ನಲ್ಲಿ ಅಲ್ಲಿನ ಹುಡುಗಿಯ ಬಗ್ಗೆ ಮಳವಳ್ಳಿ ಸಾಯಿಕೃಷ್ಣ ಬರೆದ ಹಾಡು ಪಕ್ಕಾ ಪೋಲಿ ಗೀತೆ ಎನ್ನಿಸಿದೆ. ಬರೆದವರು ಮಳವಳ್ಳಿ ಸಾಯಿಕೃಷ್ಟ ಆಗಿದ್ದರೂ ಆ ಹಾಡಿನ ಹಿಂದೆ ಸ್ವತಃ ಪ್ರೇಮ್ ಕೈವಾಡ ಇದೆ ಎಂಬುದು ಎಲ್ಲರ ಅನಿಸಿಕೆ. ಹೀಗಿರುವಾಗಲೇ ಪ್ರೇಮ್ ನಟನೆಯ 'ಪೋಲಿ' ಚಿತ್ರ ಘೋಷಣೆಯಾಗಿದ್ದು ಮಾತ್ರ ಕಾಕತಾಳೀಯವೇ ಸರಿ!

ಇನ್ನು ಈ 'ಪೋಲಿ' ಶೀರ್ಷಿಕೆಗೂ ಭಾರಿ ಹಿನ್ನೆಲೆಯಿದೆ. ಈ ಮೊದಲು ಪ್ರೇಮ್ ನಿರ್ದೇಶನ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ ಚಿತ್ರಕ್ಕೆ 'ಪೋಲಿ' ಎಂದೇ ಹೆಸರಿಟ್ಟಿದ್ದರು ಪ್ರೇಮ್. ಆದರೆ ಪಾರ್ವತಮ್ಮ ರಾಜ್ ಕುಮಾರ್ "ಪ್ರೇಕ್ಷಕ ವಲಯದಲ್ಲಿ ಅಪ್ಪುಗೆ ಸಾಕಷ್ಟು ಒಳ್ಳೆ ಹೆಸರಿರುವುದರಿಂದ 'ಪೋಲಿ' ಎಂಬ ಹೆಸರು ಅಪ್ಪು ಚಿತ್ರಕ್ಕೆ ಸೂಕ್ತವಲ್ಲ" ಎಂದು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನು 'ರಾಜ್' ಎಂದು ಬದಲಾಯಿಸಲಾಗಿತ್ತು.

ಈಗ ಆ ಹೆಸರನ್ನು ಅವರದೇ ನಟನೆಯ ಚಿತ್ರಕ್ಕೆ ಇಟ್ಟಿರುವುದು ಕಾಕತಾಳೀಯವೇ ಅಥವಾ ಪ್ರೇಮ್ ಕೈವಾಡವೇ ಎಂಬುದನ್ನು ವಿಜಯ್ ಮಾತ್ರ ಹೇಳಬಲ್ಲರು! ಅದೇನೆ ಇರಲಿ, ಪೋಲಿಯಾಗಿ ಪುನೀತ್ ಬದಲು ಪ್ರೇಮ್ ಬರುತ್ತಿರುವುದು ಬದಲಾವಣೆ ಅಷ್ಟೇ ಎನ್ನಬಹುದಾದರೂ ಈ ಚಿತ್ರವನ್ನು ಪ್ರೇಮ್ ಶಿಷ್ಯನೇ ಆಗಿರುವ ವಿಜಯ್ ನಿರ್ದೇಶಿಸಲಿರುವುದರಿಂದ 'ಪೋಲಿ' ಬಗ್ಗೆ ಬೇರೆಯದೇ ನಿರೀಕ್ಷೆ ಹುಟ್ಟಿಕೊಂಡಿದೆ ಎನ್ನಬಹುದು. ಮುಂದಿನದನ್ನು ಕಾದು ನೋಡಬೇಕಷ್ಟೇ... (ಒನ್ ಇಂಡಿಯಾ ಕನ್ನಡ)

English summary
Kannada Director Prem to act a new movie 'Poli' in the Direction of 'Gubbi' fame Vijay. This movie to starts immediately after the release of Prem acted movie 'Prem Adda'. Toady, on 22nd October 2012 Prem is celebrating his Birthday. 
 
Please Wait while comments are loading...