ಆರ್ ಜನ ಹೀರೋಗಳ ಸಿನಿಮಾ ಬಗ್ಗೆ ಬಾಯ್ಬಿಟ್ರು ಪ್ರೇಮ್!

Recommended Video

ಆರ್ ಜನ ಹೀರೋಗಳ ಸಿನಿಮಾ ಬಗ್ಗೆ ಬಾಯ್ಬಿಟ್ರು ಪ್ರೇಮ್! | FILMIBEAT KANNADA

'ದಿ ವಿಲನ್' ಬಿಡುಗಡೆಗೆ ಮುಂಚೆ ಪ್ರೇಮ್ ಹೇಳಿದ ಒಂದೇ ಒಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಆರು ಜನ ಹೀರೋಗಳನ್ನು ಸೇರಿಸಿ ಒಂದು ದೊಡ್ಡ ಸಿನಿಮಾ ಮಾಡುತ್ತೇನೆ, ಆ ಚಿತ್ರ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಬಜೆಟ್ ಸಿನಿಮಾ ಆಗಲಿದೆ ಎಂದು ಪ್ರೇಮ್ ಹೇಳಿದ್ದರು.

ಪ್ರೇಮ್ ಈ ಹೇಳಿಕೆ ನೀಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪ್ರೇಮ್ ಅವರ ಆರು ಜನ ಹೀರೋಗಳ ಸಿನಿಮಾದ ಬಗ್ಗೆ ಬಹಳ ಚರ್ಚೆ ಆಗುತ್ತಿತ್ತು. ಇದೇ ವಿಷಯ ಟ್ರೋಲ್ ಪೇಜ್ ಗಳಿಗೆ ದೊಡ್ಡ ಆಹಾರ ಕೂಡ ಆಗಿತ್ತು.

ಇವೆಲ್ಲದರ ನಂತರ, ಇದೀಗ ಪ್ರೇಮ್ ತಮ್ಮ ಆರು ಜನ ಹೀರೋಗಳ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ದಿ ವಿಲನ್' ಸಿನಿಮಾ ಇದೇ ಭಾನುವಾರ ಕಿರುತೆರೆಯಲ್ಲಿ ಪ್ರಸಾರ ಆಗಲಿದ್ದು, ಈ ವಿಶೇಷವಾಗಿ ಜೀ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಅವರು ಲೈವ್ ಬಂದಿದ್ದರು. ಈ ವೇಳೆ ತಮ್ಮ ಕನಸಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದರು. ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಮುಂದೆ ಓದಿ...

ಆರು ಜನ ಹೀರೋಗಳ ಸಿನಿಮಾ ಮಾಡುತ್ತೇನೆ

ಆರು ಜನ ಹೀರೋಗಳ ಸಿನಿಮಾ ಮಾಡುತ್ತೇನೆ

ಆರು ಜನ ಹೀರೋಗಳ ಸಿನಿಮಾ ಬಗ್ಗೆ ಮಾತನಾಡಿದ ಪ್ರೇಮ್ ಎಲ್ಲರೂ ಆರು ಜನ ಹೀರೋಗಳ ಸಿನಿಮಾ ಯಾವಾಗ ಮಾಡುತ್ತೀರಿ ಅಂತ ಕೇಳುತ್ತಿದ್ದಾರೆ. ಆ ಸಿನಿಮಾವನ್ನು ಮಾಡಿಯೇ ಮಾಡುತ್ತೇನೆ. ಅದು ನನ್ನ ಕನಸಿನ ಸಿನಿಮಾ. ಕನಸು ಕಾಣುವಾಗ ದೊಡ್ಡದಾಗಿ ಕಾಣಬೇಕು. ಬಳಿಕ ಅದನ್ನು ಸಾಧಿಸಬೇಕು. ಅದೇ ರೀತಿ ನಾನು ಈ ಸಿನಿಮಾವನ್ನು ಮಾಡುತ್ತೇನೆ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಇದು 'ಕಲಿ' ಸಿನಿಮಾ

ಇದು 'ಕಲಿ' ಸಿನಿಮಾ

ಪ್ರೇಮ್ ಆರು ಜನ ಹೀರೋಗಳ ಸಿನಿಮಾ ಎಂದಿದ್ದು 'ಕಲಿ' ಚಿತ್ರದ ಬಗ್ಗೆಯಂತೆ. 'ಕಲಿ' ಸಿನಿಮಾದಲ್ಲಿಯೇ ಆರು ಜನ ದೊಡ್ಡ ಸ್ಟಾರ್ ಗಳು ಇರಲಿದ್ದಾರಂತೆ. ಈ ಸಿನಿಮಾ 'ದಿ ವಿಲನ್' ಸಿನಿಮಾಗೆ ಮುಂಚೆ ಮಾಡಬೇಕಿತ್ತು, ಆದರೆ, ಸ್ಟಾರ್ ಗಳ ಡೇಟ್ ಸಮಸ್ಯೆಯಿಂದ ಮುಂದಕ್ಕೆ ಹೋಯ್ತು ಎಂದು ಪ್ರೇಮ್ ತಿಳಿಸಿದ್ದಾರೆ.

'ಕಲಿ' ಲೇಟ್ ಆಗಿದ್ದಕ್ಕೆ 'ದಿ ವಿಲನ್' ಆರಂಭ

'ಕಲಿ' ಲೇಟ್ ಆಗಿದ್ದಕ್ಕೆ 'ದಿ ವಿಲನ್' ಆರಂಭ

'ಕಲಿ' ಸಿನಿಮಾ ಲೇಟ್ ಆಗುತ್ತದೆ ಎನ್ನುವ ಕಾರಣಕ್ಕೆ ಕನ್ನಡದ ಇಬ್ಬರು ನಟರನ್ನು ಇಟ್ಟುಕೊಂಡು 'ದಿ ವಿಲನ್' ಸಿನಿಮಾವನ್ನು ಆರಂಭ ಮಾಡಿದ್ದರಂತೆ. ಮುಂದೆ 'ಕಲಿ' ಸಿನಿಮಾ ಕೂಡ ಪ್ರೇಮ್ ಹಾಗೂ ಸಿ ಆರ್ ಮನೋಹರ್ ಅವರ ಕಾಂಬಿನೇಶನ್ ನಲ್ಲಿ ಬರಲಿದೆಯಂತೆ.

ರಜನಿ, ಕಮಲ್ ಭೇಟಿ

ರಜನಿ, ಕಮಲ್ ಭೇಟಿ

ದಕ್ಷಿಣ ಭಾರತದ ಬಿಗ್ ಸ್ಟಾರ್ ಗಳು 'ಕಲಿ' ಚಿತ್ರದಲ್ಲಿ ಇರಲಿದ್ದು, ಈ ಚಿತ್ರದ ಬಗ್ಗೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಜೊತೆಗೆ ಮಾತುಕತೆ ಸಹ ನಡೆಸಿದ್ದಾರಂತೆ. ಮಹಾಭಾರತದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡುತ್ತಿದ್ದು, ಎರಡು ಪಾತ್ರಗಳ ಸುತ್ತ ಆರು ಪಾತ್ರಗಳು ಸುತ್ತುತ್ತದೆಯಂತೆ. ಆ ಪಾತ್ರಗಳಲ್ಲಿ ಆರು ಜನ ದೊಡ್ಡ ನಟರು ನಟಿಸಲಿದ್ದಾರೆ ಎಂದಿದ್ದಾರೆ ಪ್ರೇಮ್.

2020 ಕ್ಕೆ ಶುರು ಆಗಬಹುದು

'ಕಲಿ' ಸಿನಿಮಾದ ಪ್ಲಾನಿಂಗ್ ಸದ್ಯ ನಡೆಯುತ್ತಿದೆಯಂತೆ. ತುಂಬ ಪಾತ್ರಗಳು ಈ ಚಿತ್ರದಲ್ಲಿ ಬರಲಿದ್ದು, ಎಲ್ಲ ನಟರನ್ನು ಸೇರಿಸುವುದು ದೊಡ್ಡ ಚಾಲೆಂಜ್ ಆಗಿದೆಯಂತೆ. ಸದ್ಯಕ್ಕೆ, ಪತ್ನಿ ರಕ್ಷಿತ ಸಹೋದರನನ್ನು ಲಾಂಚ್ ಮಾಡುವ ತಯಾರಿ ನಡೆಯುತ್ತಿದ್ದು, ಆ ಚಿತ್ರದ ಬಳಿಕ ಅಂದರೆ, 2020ರ ವೇಳೆಗೆ 'ಕಲಿ' ಪ್ರಾರಂಭ ಆಗಬಹುದಂತೆ.

More from Filmibeat

English summary
Kannada director Prem spoke about his dream project Kali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X