ಹನಿಟ್ರ್ಯಾಪ್ ಮಾಡಿ ನಿರ್ಮಾಪಕ ಚಿಂಗಾರಿ ಮಹಾದೇವ್‌ಗೆ ಬ್ಲ್ಯಾಕ್‌ಮೇಲ್: ನಿರ್ದೇಶಕನ ವಿಚಾರಣೆ
ರಾಜಕೀಯ ಮತ್ತು ಸಿನಿಮಾರಂಗದಲ್ಲಿ ಹನಿಟ್ರ್ಯಾಪ್ ಎಂಬ ಪದ ಆಗ್ಗಾಗೆ ಕೇಳಿ ಬರುತ್ತಿತ್ತು. ವಿದೇಶಗಳಲ್ಲಿ ಕೇಳುತ್ತಿದ್ದ ಈ ಪದ ಈಗ ನಮ್ಮ ದೇಶದಲ್ಲೂ ಜನಸಾಮಾನ್ಯರಿಗೂ ಕಾಮನ್ ಎನ್ನುವಂತೆ ಆಗುತ್ತಿದೆ. ಈ ಪದ ಪದೇ ಪದೇ ಬಳಕೆಗೆ ಬರುತ್ತಿದೆ. ಚಿತ್ರರಂಗದಲ್ಲಿಯೂ ಇನ್ನೊಬ್ಬರಿಂದ ಹಣ ಕೀಳಲು ಇದನ್ನು ಮಾಡಲಾಗುತ್ತಿದೆ.
ಇತ್ತೀಚೆಗೆ ಹಣಕ್ಕಾಗಿ 'ಬಾರಬಾತ್' ನಿರ್ದೇಶಕ ರವೀಂದ್ರ ಎಂಬುವವರು ಚಿ೦ಗಾರಿ, ಶ್ರೀಕ೦ಠ, ಶಿಶಿರ ಸಿನಿಮಾಗಳ ನಿರ್ಮಾಪಕ ಚಿಂಗಾರಿ ಮಹಾದೇವ್‌ಗೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ. ಹಣಕ್ಕಾಗಿ ಯುವತಿಯರನ್ನು ಬಳಸಿ ನಿರ್ಮಾಪಕದಿಂದ ಹಣ ಕೀಳಲಾಗಿದೆ. ಇದೇ ಕಾರಣಕ್ಕೆ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬ್ಲ್ಯಾಕ್‌ಮೇಲ್ ಮಾಡಿ ಪೊಲೀಸರ ಅತಿಥಿಯಾದ ನಿರ್ದೇಶಕ
ಹನಿಟ್ರ್ಯಾಪ್ ಮಾಡಿ ಯುವತಿಯರ ಮೂಲಕ ನಿರ್ಮಾಪಕ ಚಿಂಗಾರಿ ಮಹಾದೇವ್ ಅವರಿಂದ ಹಣ ಕಿತ್ತ ಆರೋಪದಲ್ಲಿ ನಿರ್ದೇಶಕ ರವೀಂದ್ರ ಮೇಲೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ನಿರ್ದೇಶಕ ರವೀಂದ್ರರನ್ನು ಬಂಧಿಸಿದ್ದಾರೆ.
ಆರೋಪಿ ರವೀಂದ್ರ ಕೇವಲ ನಿರ್ಮಾಪಕ ಚಿಂಗಾರಿ ಮಹಾದೇವ್ ಅವರಿಗೆ ಮಾತ್ರವಲ್ಲದೆ, ಯುವತಿಯರ ಮುಖಾಂತರ ಹಲವು ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ತಿಳಿದು ಬಂದಿದೆ.
ಘಟನೆ ಬಗ್ಗೆ ನಿರ್ಮಾಪಕ ಮಹದೇವ್ ಪುತ್ರ ಮನು ಹೇಳಿದ್ದೇನು?
ಘಟನೆ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಿರ್ಮಾಪಕ ಮಹಾದೇವ್ ಪುತ್ರ ಮನು, 'ಕಳೆದ ತಿಂಗಳ ಅಕ್ಟೋಬರ್ 28 ಕಾವ್ಯ ಅನ್ನುವವರು ನಮ್ಮ ಅಪ್ಪನಿಗೆ ಕಾಲ್ ಮಾಡಿದ್ರು. ಹುಡುಗಿ ಕಾಲ್ ಮಾಡಿ ಅವಕಾಶ ಕೊಡಿಸ್ತೀನಿ ಅಂತ 50 ಸಾವಿರ ತೆಗೆದುಕೊಂಡು ನನಗೆ ಅವಕಾಶ ನೀಡಿಲ್ಲ. ನನಗೆ ಹಣ ವಾಪಸ್ ಕೊಡಿ ಅಂತ ಕೇಳಿದ್ದಾರೆ. ನಾನು ಯಾರ ಬಳಿಯೂ ಹಣ ತೆಗೆದುಕೊಂಡಿಕ್ಕ ಅಂತ ಹೇಳಿ ನಮ್ಮ ತಂದೆ ಕಾಲ್ ಕಟ್ ಮಾಡಿದ್ದಾರೆ' ಎಂದಿದ್ದಾರೆ.
ಈ ವಿಷಯದ ಬಗ್ಗೆ ನನಗೆ ನನ್ನ ತಮದೆ ತಿಳಿಸಿದರು. ನಾನು ಆ ನಂಬರ್ ಟ್ರೇಸ್ ಮಾಡಿದಾಗ ಅದು ರವೀಂದ್ರ ಆಫೀಸ್‌ನಲ್ಲಿ ಕೆಲಸ ಮಾಡುವ ಮೌನೇಶ್ ಎಂಬುವವರದ್ದು. ಈ ಬಗ್ಗೆ ನಾನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದೆ. ಪೊಲೀಸರು ತನಿಖೆ ಮಾಡಿಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











