twitter
    For Quick Alerts
    ALLOW NOTIFICATIONS  
    For Daily Alerts

    ಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ಹೆಸರು ದುರ್ಬಳಕೆ ಆಗಿದೆ: ನಿರ್ದೇಶಕಿ ರೂಪ ಅಯ್ಯರ್ ಆರೋಪ

    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 77 ವರ್ಷಗಳ ಇತಿಹಾಸವಿದೆ. ಕನ್ನಡ ಚಿತ್ರರಂಗ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇದೂವರೆಗೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಹೀಗಿರುವಾಗ ಕಾಂಗ್ರೆಸ್ ಪಕ್ಷ ಕರೆದ ಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ಬೆಂಬಲ ಸೂಚಿಸಿದೆ. ವಾಣಿಜ್ಯ ಮಂಡಳಿಯ ಈ ನಿರ್ಧಾರದ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.

    ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ ನಿರ್ಧಾರದ ಬಗ್ಗೆ ಸದಸ್ಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ನಿರ್ದೇಶಕಿ ರೂಪ ಅಯ್ಯರ್ ವಿರೋಧ ವ್ಯಕ್ತಪಡಿಸಿದ್ದು, ಒಂದು ಪಕ್ಷವನ್ನು ಓಲೈಸುವ ಕಾರಣಕ್ಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ರಾಜಕೀಯಕ್ಕೆ ಕಾಲಿಡಬಾರದು, ಒಂದು ಪಕ್ಷವನ್ನು ಓಲೈಸಿ ಪತ್ರಿಕಾಗೋಷ್ಟಿ ಮಾಡಿದ್ದು, ಮೈಕ್ ಕೊಟ್ಟು ಜಾಗಕೊಟ್ಟಿದ್ದು ತಪ್ಪು ಅಂತ ಫಿಲಮ್ ಗಂಭೀರ್ ಆರೋಪ ಮಾಡಿದ್ದಾರೆ.

    ರಾಜಕೀಯಕ್ಕೆ ಕಾಲಿಡಬಾರದು ವಾಣಿಜ್ಯ ಮಂಡಳಿ

    ರಾಜಕೀಯಕ್ಕೆ ಕಾಲಿಡಬಾರದು ವಾಣಿಜ್ಯ ಮಂಡಳಿ

    ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಯಾವ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲವೆಂದು ಫಿಲ್ಮ್ ಚೇಂಬರ್ ಹೇಳಿಕೆ ನೀಡಿದ್ದರೂ, ಇದು ಕ್ರಾಂಗ್ರೆಸ್ ಪಕ್ಷ ಕರೆದ ಹೋರಾಟವೆಂದು ನಿರ್ದೇಶಕಿ ರೂಪ ಅಯ್ಯರ್ ಆರೋಪ ಮಾಡಿದ್ದಾರೆ. ಚಲನ ಚಿತ್ರ ವಾಣಿಜ್ಯ ಮಂಡಳಿ ರಾಜಕೀಯಕ್ಕೆ ಇಳಿಯಬಾರದು ಎಂದು ಕಿಡಿಕಾರಿದ್ದಾರೆ. "ಚಿತ್ರರಂಗದ ವಾಣಿಜ್ಯ ಮಂಡಳಿ ರಾಜಕೀಯಕ್ಕೆ ಕಾಲಿಡಬಾರದು. ಒಂದು ಪಕ್ಷವನ್ನು ಓಲೈಸಲು ಒಂದು ಪಕ್ಷ ಮಾಡಿದಂತಹ ಪತ್ರಿಕಾಗೋಷ್ಟಿ, ಅಧಿಕೃತವಾದ ಘೋಷಣೆ, ಅವರಿಗೆ ಮೈಕ್ ಕೊಟ್ಟು, ಜಾಗಕೊಟ್ಟು ಮಾಡಿದ್ದು ತಪ್ಪು ಅಂತ ನಾನು ಖಂಡಿಸುತ್ತೇನೆ. ವಾಣಿಜ್ಯ ಮಂಡಳಿಯ ಅನೇಕ ಸದಸ್ಯರು ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಫಿಲ್ಮ್ ಚೇಂಬರ್ ಯಾವುದೇ ಪದಾಧಿಕಾರಗಳಿಗೂ ಇಷ್ಟ ಆಗಿಲ್ಲ. ಒಳಗಡೆ ಇರುವ ಯಾರಿಗೋ ಟಿಕೆಟ್ ಸಿಗಬೇಕು ಅನ್ನುವ ಕಾರಣಕ್ಕಾಗಿ, ಇನ್ನೊಂದು ವೈಯುಕ್ತಿಕ ನಿಲುವನ್ನು ಇಟ್ಟುಕೊಂಡು ವಾಣಿಜ್ಯ ಮಂಡಳಿಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ನಾನೇ ಯಾವುದೋ ಇನ್ನೊಂದು ಪಕ್ಷವನ್ನು ಇಷ್ಟ ಪಡುತ್ತೇನೆ ಎಂದ ಕಾರಣಕ್ಕೆ ನಾನು ಫಿಲ್ಮ್ ಚೇಂಬರ್ ವೇದಿಕೆಯನ್ನು ದುರುಪಯೋಗ ಮಾಡಿಕೊಂಡಿಲ್ಲ." ಎಂದಿದ್ದಾರೆ.

    ಇದು ಕರ್ನಾಟಕದ ಹೋರಾಟ ಹೇಗಾಗುತ್ತೆ?

    ಇದು ಕರ್ನಾಟಕದ ಹೋರಾಟ ಹೇಗಾಗುತ್ತೆ?

    "ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಅವರೇ ಹೇಳಿದ್ದಾರೆ. ಈ ಪಾದಾಯಾತ್ರೆಯ ರೂವಾರಿಗಳು ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರು ಅಂತ. ಹಾಗಿದ್ದ ಮೇಲೆ ಇದು ಕರ್ನಾಟಕದ ಹೋರಾಟ ಹೇಗೆ ಆಗುತ್ತೆ? ಇದೊಂದು ಪಕ್ಷದ ಹೋರಾಟ ಆಗುತ್ತೆ ರಾಜಕೀಯವಾಗಿ. ಹಾಗಾಗಿ ನಾವು ಆಯ್ಕೆ ಮಾಡಿ ಕೂರಿಸಿರುವ ಚುನಾಯಿತ ಪ್ರತಿನಿಧಿಗಳು ಇದಕ್ಕೆ ಉತ್ತರ ಕೊಡಲೇ ಬೇಕು. ನಮಗೆ ಎಲ್ಲಾ ಸರ್ಕಾರಗಳೂ ಬೇಕಾಗುತ್ತೆ. ಸಬ್ಸಿಡಿ ಸೇರಿದಂತೆ ಏನೇ ನೆರವು ಬೇಕು ಅಂದರೂ, ಅಂದಿನ ಸರ್ಕಾರದ ಮೊರೆ ಹೋಗಲೇ ಬೇಕು. ಹೀಗಾಗಿ ಒಂದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ತಪ್ಪು." ಎಂದು ರೂಪ ಅಯ್ಯರ್ ಆರೋಪಿಸಿದ್ದಾರೆ.

    ಚಿತ್ರರಂಗದೊಳಗೆ ನೂರಾರು ಸಮಸ್ಯೆಗಳಿವೆ

    ಚಿತ್ರರಂಗದೊಳಗೆ ನೂರಾರು ಸಮಸ್ಯೆಗಳಿವೆ

    ಸರ್ಕಾರದ ಸಹಮತ ತೆಗೆದುಕೊಂಡು ಮೇಕೆದಾಟು ಪಾದಯಾತ್ರೆ ಮಾಡಬಹುದು. ಸರ್ಕಾರದ ಸಹಮತವೇ ಇಲ್ಲದೆ. ಕೊರೊನಾ ಸಮಯದಲ್ಲಿ ಆರೋಗ್ಯಕ್ಕೂ ರಕ್ಷಣೆ ಇಲ್ಲದೆ ನಿಯಮ ಉಲ್ಲಂಘನೆ ಮಾಡುವುದು ಎಷ್ಟು ಸರಿ? ಕನ್ನಡ ನಾಡು, ನುಡಿ, ಜಲದ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಆದರೆ, ಒಂದು ಪಕ್ಷಕ್ಕೆ ಸೀಮಿತವಾಗಿ ಫಿಲ್ಮ್ ಚೇಂಬರ್ ನಿಲ್ಲಬಾರದು. "ಫಿಲ್ಮ್ ಚೇಂಬರ್ ನೂರಾರು ಹೋರಾಟ ಮಾಡಬಹುದು. ಮೂರು ವರ್ಷದಿಂದ ಸಬ್ಸಿಡಿ ಕೊಡುತ್ತಿಲ್ಲ. ಎಷ್ಟೋ ಜನ ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡರು. ಬಡ್ಡಿ ಮೇಲೆ ಬಡ್ಡಿ ಬೆಳೆದಿದೆ ಅಂತ ಖಾಯಿಲೆಗೀಡಾಗಿದ್ದಾರೆ. ಕಿಡ್ನಿ ಕಳೆದುಕೊಂಡಿದ್ದಾರೆ. ಹಾರ್ಟ್ ಪ್ರಾಬ್ಲಮ್ ಇದೆ. ಅದಕ್ಕೆ ಯಾಕೆ ಹೋರಾಟ ಮಾಡುತ್ತಿಲ್ಲ. ಚಿತ್ರರಂಗದೊಳಗೆ ನೂರಾರು ಸಮಸ್ಯೆಗಳು ಇದ್ದಾಗ, ಅದಕ್ಕೆಯಾಕೆ ಪಾದಯಾತ್ರೆ ಮಾಡುತ್ತಿಲ್ಲ. ಒಂದು ಪಕ್ಷ ಕರೆ ನೀಡಿದಾಗಲೇ ಯಾಕೆ ಪಾದಯಾತ್ರೆ ಮಾಡಬೇಕು. ಇನ್ನೊಂದು ತಿಂಗಳು ಬಿಟ್ಟು ಮಾಡಬಹುದಿತ್ತು." ಎಂದು ನಿರ್ದೇಶಕಿ ರೂಪ ಅಯ್ಯರ್ ಕಿಡಿಕಾರಿದ್ದಾರೆ.

    ಎಲ್ಲಾ ಪಕ್ಷವನ್ನು ಕರೆದು ಪಾದಯಾತ್ರೆ ಮಾಡಿ

    ಎಲ್ಲಾ ಪಕ್ಷವನ್ನು ಕರೆದು ಪಾದಯಾತ್ರೆ ಮಾಡಿ

    "ಕುಡಿಯುವ ನೀರಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅದಕ್ಕೆ ಒಂದೇ ಪಕ್ಷವನ್ನು ಯಾಕೆ ಪತ್ರಿಕಾ ಗೋಷ್ಠಿಗೆ ಕರೆಯಬೇಕಿತ್ತು? ಎಲ್ಲಾ ಪಕ್ಷವನ್ನು ಕರೆಯಬೇಕಿತ್ತು. ಈ ಪಾದಯಾತ್ರೆ ಮಾಡುವುದಕ್ಕೆ ಹಣ ಬೇರೆ ಡ್ರಾ ಮಾಡಿಕೊಂಡಿದ್ದಾರೆ. ಚಿತ್ರರಂಗನೇ ಬೇಕಾದರೆ ಪ್ರತ್ಯೇಕವಾಗಿ ಪಾದಯಾತ್ರೆ ಮಾಡಲಿ. ಕುಡಿಯೋ ನೀರಿಗಾಗಿ ಪಾದಯಾತ್ರೆ ಮಾಡಲಿ, ಸಬ್ಸಿಡಿಗಾಗಿ ಒಂದು ಪಾದಯಾತ್ರೆ ಮಾಡಲಿ, ಚಿತ್ರನಗರಿ ಆಗೇ ಇಲ್ಲ. ಅದಕ್ಕೆ ಪಾದಯಾತ್ರೆ ಮಾಡಲಿ, ಕಾರ್ಮಿಕರಿಗಾಗಿ ಮನೆಗಳನ್ನು ಕೊಡಲಿ ಅಂತ ಪಾದಯಾತ್ರೆ ಮಾಡಲಿ. ಜನವರಿ 13ರಂದು ಇಸಿ ಮೀಟಿಂಗ್ ಇದೆ. ಅಲ್ಲಿ ನಾವೆಲ್ಲರೂ ಈ ಬಗ್ಗೆ ಪ್ರಶ್ನೆ ಎತ್ತುತ್ತೇವೆ. ಎಲ್ಲರೂ ನಮಗೆ ಉತ್ತರ ಕೊಡಲೇಬೇಕು. ಇವತ್ತು ಪ್ರತಿಭಟನೆ ನಡೆಯುತ್ತಿದೆ. ಇದು ಅವರು ಕ್ಷಮೆ ಕೇಳುವವರೆಗೂ ಮುಂದುವರೆಯುತ್ತದೆ." ರೂಪ ಅಯ್ಯರ್ ಆರೋಪ ಮಾಡಿದ್ದಾರೆ.

    ಫಿಲ್ಮ್ ಚೇಂಬರ್‌ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ

    ಫಿಲ್ಮ್ ಚೇಂಬರ್‌ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ

    " ನೀವು ಫಿಲ್ಮ್ ಚೇಂಬರ್ ಹೆಸರು ಬಳಸಿಕೊಂಡು ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗದ ಸಹಮತವಿದೆ ಅಂತ ಹೇಗೆ ಹೇಳ್ತೀರಾ? ಫಿಲ್ಮ್ ಚೇಂಬರ್‌ನಲ್ಲೇ ಪ್ರೆಸ್ ಮೀಟ್ ಮಾಡಿ ಅಂತ ಹೇಗೆ ಹೇಳ್ತೀರಾ? ನಿಯಮ ಉಲ್ಲಂಘನೆ ಮಾಡಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಇವರು ಸಹಕಾರ ಸಂಘಗಳು ಹೇಗಿರಬೇಕೋ, ಅದರ ನೀತಿ ನಿಯಮಗಳು ಹೇಗಿರಬೇಕೋ ಅದರಂತೆ ನಡೆದುಕೊಳ್ಳಬೇಕು. ಇವರು ರಾಜಕೀಯಕ್ಕೆ ಬರಬೇಕು ಅಂದರೆ, ವಾಣಿಜ್ಯ ಮಂಡಳಿ ಬಾಗಿಲು ಹಾಕಲಿ. ವಾಣಿಜ್ಯ ಮಂಡಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಅದಕ್ಕೆ ಅವರು ಸೇರಿಕೊಂಡು ಈ ಪಾದಯಾತ್ರೆಗೆ ಮುಂದಾಗಿದ್ದಾರೆ." ಎಂದು ರೂಪ ಅಯ್ಯರ್ ಗಂಭೀರ ಆರೋಪ ಮಾಡಿದ್ದಾರೆ.

    English summary
    Kannada Director Roopa Iyer opposed Film Chamber support to Mekedatu Padayatra. Members illegally misused Film Chamber name for Mekedatu Padayatra.
    Monday, January 10, 2022, 14:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X