twitter
    For Quick Alerts
    ALLOW NOTIFICATIONS  
    For Daily Alerts

    ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾದ ಕನ್ನಡ ಸಿನಿಮಾ ನಿರ್ದೇಶಕ ಎಸ್ ನಾರಾಯಣ್

    |

    ಸಿನಿಮಾ ಮಂದಿಗೂ ಚಿತ್ರರಂಗಕ್ಕೂ ಒಂದಲ್ಲ ಒಂದು ರೀತಿ ನಂಟು ಇದ್ದೇ ಇರುತ್ತೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ರಾಜಕೀಯದ ಜೊತೆ ಸಿನಿಮಾ ತಾರೆಯರು ನಂಟು ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ಸ್ಯಾಂಡಲ್‌ವುಡ್ ತಾರೆಯರು ಸಿನಿಮಾ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿರುವ ಉದಾಹರಣೆಗಳು ಕಣ್ಮುಂದೆ ಇದೆ. ಈಗ ಕನ್ನಡ ನಿರ್ದೇಶಕ ಎಸ್. ನಾರಾಯಣ ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಮೋಹಕತಾರೆ ರಮ್ಯಾ, ತಾರಾ, ಜಯಮಾಲಾ, ಶೃತಿ ಸೇರಿದಂತೆ ಹಲವು ಮಂದಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಸೇವೆ ಸಲ್ಲಿಸುತ್ತಿದ್ದಾರೆ. ಈಗ 50 ಸಿನಿಮಾಗಳ ನಿರ್ದೇಶನದ ಹೊಸ್ತಿಲಲ್ಲಿ ಇರುವ ನಿರ್ದೇಶಕ ಎಸ್‌. ನಾರಾಯಣ್ ಕೂಡ ರಾಜಕೀಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂಬಂಧ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

    ಎಸ್‌ ನಾರಾಯಣ್‌ಗೆ ಕಾಂಗ್ರೆಸ್ ಸೇರುವ ಅಭಿಲಾಷೆ

    ಎಸ್‌ ನಾರಾಯಣ್‌ಗೆ ಕಾಂಗ್ರೆಸ್ ಸೇರುವ ಅಭಿಲಾಷೆ

    ಎಸ್. ನಾರಾಯಣ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದರು. ಆದರೂ, ಆಗಾಗ ರಾಜಕೀಯ ಮುಖಂಡರ ಜೊತೆ ಕಾಣಿಸಿಕೊಂಡಿದ್ದೂ ಇದೆ. ಈಗ ಎಸ್‌ ನಾರಾಯಣ್ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ತಂಡ ಹೇಳಿಕೊಂಡಿದೆ. ಅಲ್ಲದೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಫೋಟೊವನ್ನೂ ಶೇರ್ ಮಾಡಿಕೊಂಡಿದೆ. "ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಂದ ಪ್ರೇರಿತರಾದ ನಟ, ನಿರ್ದೇಶಕ ಶ್ರೀ ಎಸ್. ನಾರಾಯಣ್ ಅವರು ಇಂದು ನನ್ನನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಅಭಿಲಾಷೆ ವ್ಯಕ್ತಪಡಿಸಿದರು. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿದೆ." ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಲಾಗಿದೆ.

    ಕಾಂಗ್ರೆಸ್‌ಗೆ ನಿರ್ದೇಶಕ ಎಸ್‌ ನಾರಾಯಣ್

    ಕಾಂಗ್ರೆಸ್‌ಗೆ ನಿರ್ದೇಶಕ ಎಸ್‌ ನಾರಾಯಣ್

    ನಿರ್ದೇಶಕ ಎಸ್‌ ನಾರಾಯಣ್ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ ಫೋಟೊಗಳು ಹರಿದಾಡಿವೆ. ಡಿಕೆಶಿ ಬಳಿ ಕಾಂಗ್ರೆಸ್ ಸೇರುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಪ್ರತಿಕ್ರಿಯೆಗೆ ನಿರ್ದೇಶಕ ಎಸ್ ನಾರಾಯಣ್ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫಿಲ್ಮಿಬೀಟ್ ಮುಂದಾಗಿತ್ತು. ಅದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

    ಎಚ್‌ಡಿಕೆ ಜೊತೆ ಆತ್ಮೀಯರಾಗಿದ್ದ ಎಸ್‌ ನಾರಾಯಣ್

    ಎಚ್‌ಡಿಕೆ ಜೊತೆ ಆತ್ಮೀಯರಾಗಿದ್ದ ಎಸ್‌ ನಾರಾಯಣ್

    ನಿರ್ದೇಶಕ ಎಸ್ ನಾರಾಯಣ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರೂ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಆತ್ಮೀಯರಾಗಿದ್ದರು. ಎಚ್‌ಡಿಕೆ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಎಸ್‌ ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಇನ್ನೊಂದು ಕಡೆ ಎಸ್ ನಾರಾಯಣ್ ನಿರ್ದೇಶಿಸಿದ ಸಿನಿಮಾಗಳನ್ನು ಎಚ್‌ಡಿಕೆ ವಿತರಣೆ ಮಾಡಿದ್ದು ಇದೆ. ಹೀಗಾಗಿ ಹಲವು ವರ್ಷಗಳ ಕಾಲ ಮಾಜಿ ಸಿಎಂ ಜೊತೆ ಒತ್ತಮ ಒಡನಾಟ ಹೊಂದಿದ್ದರು. ಇವರಿಬ್ಬರ ಸಿನಿಮಾ 'ಚಂದ್ರ ಚಕೋರಿ' 500 ದಿನಗಳನ್ನು ಪೂರೈಸಿ ದಾಖಲೆ ಬರೆದಿತ್ತು. ಈಗ ದಿಢೀರನೇ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಆಸೆ ವ್ಯಕ್ತಪಡಿಸಿದ್ದು ಅಚ್ಚರಿಗೆ ಕಾರಣವಾಗಿದೆ.

    50 ಸಿನಿಮಾ ನಿರ್ದೇಶಿಸಿದ ಎಸ್ ನಾರಾಯಣ್

    50 ಸಿನಿಮಾ ನಿರ್ದೇಶಿಸಿದ ಎಸ್ ನಾರಾಯಣ್

    ಎಸ್‌ ನಾರಾಯಣ್ ಕೇವಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಷ್ಟೇ ಅಲ್ಲ. ಹಲವು ಸಿನಿಮಾಗಳಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ನಟಿಸಿ ಗೆದ್ದಿದ್ದಾರೆ. ಇತ್ತೀಚೆಗೆ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. ಸುಮಾರು 49 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, 50ನೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಾಗಿ ಸಿನಿಮಾ ಜೊತೆನೇ ರಾಜಕೀಯಕ್ಕೂ ಕಾಲಿಟ್ಟಿದ್ದು, ಮುಂದಿನ ಹೆಜ್ಜೆ ಬಗ್ಗೆ ಎಸ್‌ ನಾರಾಯಣ್ ಏನು ಹೇಳುತ್ತಾರೋ ಅನ್ನುವ ಕುತೂಹಲವಿದೆ.

    English summary
    Kannada director S Narayan planning to join congress met D K Shivakumar. Congress president DK Shivakumar himself said in his social media and shared photo.
    Sunday, January 30, 2022, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X