For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ನಿಧನ

  |

  ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ವಿಧಿವಶರಾಗಿದ್ದಾರೆ. H1N1 ರೋಗದಿಂದ ಬಳಲುತ್ತಿದ್ದ ಅವರು ನಿನ್ನೆ ನಿಧನ ಹೊಂದಿದ್ದಾರೆ.

  ಶಂಕರಲಿಂಗ ಸುಗ್ನಳ್ಳಿ ನಿರ್ದೇಶಕ, ನಿರ್ಮಾಪಕ ಅಷ್ಟೇ ಅಲ್ಲದೆ ಕ್ಯಾಮರಾ ಮ್ಯಾನ್ ಕೂಡ ಆಗಿದ್ದರು. ಅದ್ನಾಡಿ ಅಳಿಯ, ಶರಣ ಬಸವ, ವಿಜಯಕಂಕಣ, ಏಳು ಕೋಟಿ ಮಾರ್ತಾಂಡ ಬೈರವ, ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್, ಪ್ರೇಮ ದೇವತೆ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

  ನಟಿ ರಾಗಿಣಿ ದ್ವಿವೇದಿಯಂತಹ ಸ್ಟಾರ್ ಅನ್ನು 'ಹೋಲಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಇದೆ.

  H1N1 ರೋಗದಿಂದ ಬಳಲುತ್ತಿದ್ದ ಅವರು ಕಳೆದ ಒಂದುವರೆ ತಿಂಗಳಿನಿಂದ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, H1N1 ಸೋಂಕು ಮೈ ತುಂಬ ಹರಡಿ ಶ್ವಾಸಕೋಶ ತಲುಪಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಅವರ ಚಿತ್ರರಂಗ ಮಿತ್ರರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

  English summary
  Kannada director Shankaralinga Sugnalli passes away yesterday (November 16th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X