»   » ಸೂರಿ, ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನ

ಸೂರಿ, ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನ

Posted By:
Subscribe to Filmibeat Kannada

ಕನ್ನಡದ ಖ್ಯಾತ ನಿರ್ದೇಶಕರಾದ ಸೂರಿ ಮತ್ತು ಯೋಗರಾಜ್ ಭಟ್ ಅವರ ಜೊತೆಗೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನ ಹೊಂದಿದ್ದಾರೆ. 34 ವರ್ಷದ ಶಿವ ಲಿವರ್ ಡ್ಯಾಮೇಜ್ ಮತ್ತು ಹಾರ್ಟ್ ಅಟ್ಯಾಕ್ ನಿಂದ ವಿಧಿವಶರಾಗಿದ್ದಾರೆ.

ನಿರ್ದೇಶಕ ದುನಿಯಾ ಸೂರಿ ಅವರ ಇಂತಿ ನಿನ್ನ ಪ್ರೀತಿಯ, ಜಂಗ್ಲಿ, ಜಾಕಿ, ಅಣ್ಣ ಬಾಂಡ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಶಿವ ಕೆಲಸ ಮಾಡಿದ್ದರು. ಮೂಲತಃ ಬೆಳಗಾವಿಯವರಾದ ಶಿವ ಕೆಲ ವರ್ಷಗಳ ಹಿಂದೆ ತಾವೇ 'ಚಾರ್ಲಿ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಅವರು 'ಮಾಲ್ಗುಡಿ ಸ್ಟೇಷನ್' ಎಂಬ ಹೊಸ ಸಿನಿಮಾವನ್ನು ಸದ್ಯ ನಿರ್ದೇಶನ ಮಾಡುತ್ತಿದ್ದರು.

kannada director shiva passes away

ಕಳೆದ ಎರಡು ದಿನಗಳ ಹಿಂದೆಯಷ್ಟೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವ ಇಂದು ಬೆಳ್ಳಗೆ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಿ ಹೆಸರು ಮಾಡಬೇಕು ಎಂಬ ಶಿವ ಅವರ ಕನಸು ಕನಸಾಗಿಯೇ ಉಳಿದಿದೆ.

English summary
'Charlie' kannada movie director Shiva passes away Today (Feb 3)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada