ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ: ನಿರ್ದೇಶಕ ಸುನಿ ಸಂತಸ
ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಮಂಗಳವಾರ ಬಾಂಗ್ಲಾದೇಶದ ವಿರುದ್ಧ ಗೆದ್ದು ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ವಿಶ್ವಕಪ್ ಟ್ರೋಫಿ ಗೆಲ್ಲಲು ಇನ್ನೆರಡು ಮೆಟ್ಟಿಲು ಬಾಕಿ ಇದೆ.
ಬಾಂಗ್ಲಾದೇಶದ ವಿರುದ್ಧ ಭಾರತ ಗೆದ್ದ ಪರಿಣಾಮ ನಿರ್ದೇಶಕ ಸಿಂಪಲ್ ಸುನಿ ಸಂತಸ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಮೇಲೆ ಭಾರಿ ಆಸಕ್ತಿ ಹೊಂದಿರುವ ಸುನಿ, ಭಾರತದ ಸೆಮಿ ಫೈನಲ್ ಪ್ರವೇಶಿಸಿದ್ದಕ್ಕೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

''ಬುಮ್ರಾ ಯಾರ್ಕರ್
ಚಾಹಲ್ ಸ್ಪಿನ್ನರ್
ಪಾಂಡ್ಯ ಬೌನ್ಸರ್
ನಾವ್ ಸೆಮಿಫೈನಲ್ ಗೆ
ಬಾಂಗ್ಲಾ ಮನೆಗೆ'' ಎಂದು ನಿರ್ದೇಶಕ ಸುನಿ ಖುಷಿ ಹಂಚಿಕೊಂಡಿದ್ದಾರೆ.
ವಿಶ್ವಕಪ್: ಬಾಂಗ್ಲಾ ಸೆದೆಬಡಿದು ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ
ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿಯಿದ್ದು ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಪ್ರಾಮುಖ್ಯತೆ ವಹಿಸಲಿದೆ. ಅದಾದ ಬಳಿಕ ಭಾರತ ಸೆಮಿಫೈನಲ್ ಪಂದ್ಯವಾಡಲಿದೆ.
ಇನ್ನು ಬಾಂಗ್ಲಾದೇಶ ವಿರುದ್ದ ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 314/9 ಗಳಿಸಿತ್ತು. (ರೋಹಿತ್ ಶರ್ಮಾ 104, ಕೆ.ಎಲ್ ರಾಹುಲ್ 77, ವಿರಾಟ್ ಕೊಹ್ಲಿ 26, ರಿಷಭ್ ಪಂತ್ 48, ಎಂ.ಎಸ್ ಧೋನಿ 35)
ಬಾಂಗ್ಲಾದೇಶ: 48 ಓವರ್‌ಗಳಲ್ಲಿ 286 ರನ್ ಗಳಿಸಿ ಎಲ್ಲ ವಿಕೆಟ್ ಗಳಿಸಿ ಸೋಲು ಕಂಡಿದೆ.


Click it and Unblock the Notifications











