ತರುಣ್ ಸುಧೀರ್ ಅವರ ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಗೆ ಸಿಕ್ಕರು ಮಹಾನಟಿ..!
ಜೀ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಮಹಾನಟಿ ಎಂಬ ಹೊಸ ರಿಯಾಲಿಟಿ ಶೋ ಮೂಡಿ ಬಂದಿತ್ತು. ಇದರಲ್ಲಿ ನಟಿಯಾಗಲು ಬಯಸಿದ್ದ ಹಲವು ಬಾಲೆಯರು ಭಾಗವಿಸಿದ್ದರು.
ಮಹಾನಟಿ ರಿಯಾಲಿಟಿ ಶೋ ಅದ್ಭುತವಾಗಿ ಮೂಡಿ ಬಂದಿತ್ತು. ಇದರಲ್ಲಿ ಭಾಗವಹಿಸಿದ್ದವರು ಕೆಲ ಧಾರಾವಾಹಿಗಳಲ್ಲಿ ಗೆಸ್ಟ್ ರೋಲ್ ಕೂಡ ಮಾಡಿದ್ದರು.ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ಜಡ್ಜ್ ಗಳಾಗಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಕೊನೆಯದಾಗಿ ಐವರನ್ನು ಟಾಪ್ 5 ಸ್ಫರ್ಧಿಗಳು ಆಯ್ಕೆ ಆಗಿದ್ದರು.

ಮಹಾನಟಿ ಸ್ಪರ್ಧಿಗಳ ಕಿರುಚಿತ್ರಗಳು
ಗಗನ, ಪ್ರಿಯಾಂಕ, ಶ್ವೇತಾ ಭಟ್, ಆರಾಧನ ಭಟ್, ಹಾಗೂ ಧನುಶ್ರೀ ಅವರು ಟಾಪ್ 5 ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಈ ಮಹಾನಟಿಯರಿಗೆ ಕಿರುಚಿತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಜಯತೀರ್ಥ ನಿರ್ದೇಶನದ ಅನುರಾಗ ಕಿರುಚಿತ್ರದಲ್ಲಿ ಪ್ರಿಯಾಂಕ ಆಚಾರ್, ಮಂಸೋರೆ ನಿರ್ದೇಶನದ ಸ್ತ್ರೀ ಕಿರುಚಿತ್ರದಲ್ಲಿ ಕಾರವಾರದ ಶ್ವೇತಾ ಭಟ್, ಹರಿ ಸಂತೋಷ್ ನಿರ್ದೇಶನದ ಪಂಚಮಿ ಕಿರುಚಿತ್ರದಲ್ಲಿ ಧನ್ಯಶ್ರೀ ಹಾಗೂ ಶಶಾಂಕ್ ನಿರ್ದೇಶನದ ಮಾಯದ ಮಳೆಯಲ್ಲಿ ಆರಾಧನಾ ಭಟ್ ಮತ್ತು ಪನ್ನಗಾಭರಣ ನಿರ್ದೇಶನದ ಕಿರುಚಿತ್ರದಲ್ಲಿ ಗಗನ ಅವರು ನಟಿಸಿದ್ದರು. ಅಲ್ಲದೇ, ನೂರು ಜನ್ಮಕೂ ಧಾರಾವಾಹಿಯಲ್ಲಿ ಚಂದನಾ ಗೌಡ ಹಾಗೂ ನಾ ನಿನ್ನ ಬಿಡಲಾರೆ ಸೀರಿಯಲ್ ನಲ್ಲಿ ನಟಿಸುತ್ತಿರುವ ಸೋನಿ ಮುಲೇವಾ ಅವರು ಕೂಡ ಮಹಾನಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು
ವಿನ್ನರ್ ಪ್ರಿಯಾಂಕ ಈಗ ನಾಯಕಿ
ಇದೀಗ ಇದರಲ್ಲಿ ವಿನ್ನರ್ ಆಗಿದ್ದ ನಟಿ ಪ್ರಿಯಾಂಕ ಆಚಾರ್ ಅವರಿಗೆ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒದಗಿ ಬಂದಿದೆ. ಸ್ಟಾರ್ ಡೈರೆಕ್ಟರ್ ತರುನ್ ಸುಧೀರ್ ಅವರು ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದ್ದು, ಹೊಸ ಹೀರೋಯಿನ್ ಪರಿಚಯಿಸಲಾಗಿದೆ. ಪ್ರಿಯಾಂಕಾ ಆಚಾರ್ ಅವರು ಮೂಲತಃ ಮೈಸೂರಿನವರು. ನಟಿಯಾಗುವ ಆಸೆಯಿಂದ ಮಹಾನಟಿ ರಿಯಾಲಿಟಿ ಶೋನಲ್ಲಿ ಪ್ರಿಯಾಂಕ ಅವರು ಸ್ಪರ್ಧಿಸಿದ್ದರು. ಈಗ ಅವರ ಕನಸು ನನಸಾಗುವ ಕಾಲ ಬಂದಿದೆ.
ಆಡಿದ ಮಾತನ್ನು ಉಳಿಸಿಕೊಂಡ ತರುಣ್ ಸುಧೀರ್
ಇನ್ನು ಪ್ರಿಯಾಂಕ ಅವರ ತಂದೆ ಡಿ ಬಾಸ್ ದರ್ಶನ್ ಅವರ ಕ್ಲಾಸ್ ಮೇಟ್ ಮಗಳು ಎಂಬುದು ವಿಶೇಷ. ತರುಣ್ ಅವರು ರಿಯಾಲಿಟಿ ಶೋ ನಡೆಯುವಾಗಲೇ ತಮ್ಮ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಪ್ರಿಯಾಂಕ ಅವರಿಗೆ ನಟಿಸುವ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ, ಇದೀಗ ನೋಡಿದರೆ, ಪ್ರಿಯಾಂಕ ಅವರನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿದ್ದಾರೆ.
ರಾಣಾ ಜೋಡಿಯಾದ ಪ್ರಿಯಾಂಕ
ಚಾಮರಾಜನಗರದ ಮೂಲದ ಪ್ರೇಮ ಕಥೆಗೆ ಪ್ರಿಯಾಂಕ ಅವರು ನಾಯಕಿಯಾಗಿದ್ದಾರೆ. ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ಟ್ಯಾಗ್ ಲೈನ್ ಇರುವ ಹೆಸರಿಡದ ಚಿತ್ರಕ್ಕೆ ಪ್ರಿಯಾಂಕ ಅವರು ನಾಯಕಿಯಾಗಿದ್ದಾರೆ. ಇವರಿಗೆ ಜೋಡಿ ಆಗಿ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ತರುಣ್ ಮತ್ತು ಅಟ್ಲಾಂಟಾ ನಾಗೇಂದ್ರ ಎಂಬುವವರು ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಇರಲಿದೆ. ಅಲ್ಲದೇ ಈ ಚಿತ್ರವೂ ಮೂರು ಭಾಷೆಗಳಲ್ಲಿ ಮೂಡಿ ಬರಲಿದೆ. ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. ಈ ಮೂಲಕ ಸೂಪರ್ ಡೂಪರ್ ಸಿನಿಮಾಗೆ ನಾಯಕಿಯಾಗಿರುವ ಪ್ರಿಯಾಂಕ ಆಚಾರ್ ಅವರನ್ನು ಯಶಸ್ಸು ಹಿಂಬಾಲಿಸಲಿ ಎಂದು ಶುಭ ಹಾರೈಸೋಣ.


Click it and Unblock the Notifications










