ಮತ್ತೆ ಒಂದಾದ 'ಗಣೇಶ್ ಮೆಡಿಕಲ್ಸ್' ಟೀಂ
'ಗಣೇಶ್ ಮೆಡಿಕಸ್ಸ್' ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಸಿನಿಮಾ ಟೈಟಲ್ ಗಳಲ್ಲಿ ಇದೂ ಒಂದು. ಅಂದುಕೊಂಡಂತೆ ಆಗಿದ್ರೆ ಗಣೇಶ್ ಮೆಡಿಕಲ್ಸ್ ಸಿನಿಮಾ ಪ್ರಾರಂಭವಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಈ ಸಿನಿಮಾ ಪ್ರಾರಂಭದಲ್ಲೆ ನಿಂತುಹೋಗಿದೆ. ಹಾಗಂತ ಚಿತ್ರತಂಡ ಸುಮ್ಮನಿಲ್ಲ ಮತ್ತೊಂದು ಹೊಸ ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.
'ಗಣೇಶ್ ಮೆಡಿಕಲ್ಸ್' ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಿರ್ಮಾಪಕ ಪ್ರಸನ್ನ ಸಾರಥ್ಯದಲ್ಲಿ ಮೂಡಿ ಬರಬೇಕಿದ್ದ ಸಿನಿಮಾ. 'ಗಣೇಶ್ ಮೆಡಿಕಲ್ಸ್' ನಲ್ಲಿ ನಾಯಕನಾಗಿ ಸತೀಶ್ ನೀನಾಸಂ ಕಾಣಿಸಿಕೊಳ್ಳಬೇಕಿತ್ತು. ಆದ್ರೆ ಆ ಸಿನಿಮಾ ಅಲ್ಲಿಗೆ ನಿಂತುಹೋಗಿದೆ.
ಸದ್ಯ ಈ ಮೂವರು ಸೇರಿಕೊಂಡು ಮತ್ತೊಂದು ಸಿನಿಮಾ ಮೂಲಕ ಒಟ್ಟಿಗೆ ಬರ್ತಿದ್ದಾರೆ. ವಿಜಯ್ ಪ್ರಸಾದ್ ಮತ್ತು ಸತೀಶ್ ಚಿತ್ರದ ಟೈಟಲ್ ಇನ್ನು ರಿವೀಲ್ ಆಗಿಲ್ಲ. ಆದ್ರೆ ಚಿತ್ರದ ಮುಹೂರ್ತ ಇದೇ ತಿಂಗಳು 28ರಂದು ನಡೆಯಲಿದೆಯಂತೆ.
Recommended Video

ನೀರ್ ದೋಸೆ ಚಿತ್ರದಲ್ಲಿ ಮೋಡಿ ಮಾಡಿದ್ದ ವಿಜಯ್ ಪ್ರಸಾದ್ ಮತ್ತು ಪ್ರಸನ್ನ ಜೋಡಿ ಈಗ ಮತ್ತೆ ಕಮಾಲ್ ಮಾಡುತ್ತ ಎನ್ನುವುದು ಅಭಿಮಾನಿಗಳ ಕುತೂಹಲ. ವಿಜಯ್ ಪ್ರಸಾದ್ ಮತ್ತು ಸತೀಶ್ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಹಾಗಾಗಿ ಇಬ್ಬರ ಕಾಂಬಿನೇಶನ್ ಹಾಗಿರಲಿದೆ ಎನ್ನುವುದು ಚಿತ್ರರಸಿಕರ ಕುತೂಹಲ.
ಅಂದ್ಹಾಗೆ ವಿಜಯ್ ಪ್ರಸಾದ್ ಸದ್ಯ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸತೀಶ್ ಕೂಡ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇಬ್ಬರ ಕಮಿಟ್ ಮೆಂಟ್ ಮುಗಿದ ಮೇಲೆ ಹೊಸ ಸಿನಿಮಾ ಪ್ರಾರಂಭವಾಗಲಿದೆ.
ಗಣೇಶ ಮೆಡಿಕಲ್ಸ್ ಕೈ ಬಿಟ್ಟಿರುವ ಚಿತ್ರತಂಡ ಸದ್ಯ ಚಿತ್ರಕ್ಕೆ ಯಾವ ಟೈಟಲ್ ಇಡಲಿದೆ ಎನ್ನುವುದು ಸದ್ಯದ ಕುತೂಹಲ. ಯಾಕಂದ್ರೆ ವಿಜಯ್ ಪ್ರಸಾದ್ ಸಿನಿಮಾ ಅಂದ್ಮೇಲೆ ಟೈಟಲ್ ಮೂಲಕವೆ ಚಿತ್ರಾಭಿಮಾನಿಗಳನ್ನು ಆಕರ್ಷಣೆ ಮಾಡುತ್ತಾರೆ. ಹಾಗಾಗಿ ಹೊಸ ಸಿನಿಮಾದ ಟೈಟಲ್ ಕೂಡ ಕುತೂಹಲ ಮೂಡಿಸಿದೆ.


Click it and Unblock the Notifications











