»   » ಸಾಮಾಜಿಕ ಜಾಲತಾಣದ ಕ್ವೀನ್ ಪ್ರಿಯಾ ಕನ್ನಡ ಸಿನಿಮಾ ಮಾಡ್ತಾರಂತೆ!

ಸಾಮಾಜಿಕ ಜಾಲತಾಣದ ಕ್ವೀನ್ ಪ್ರಿಯಾ ಕನ್ನಡ ಸಿನಿಮಾ ಮಾಡ್ತಾರಂತೆ!

Posted By:
Subscribe to Filmibeat Kannada

ತನ್ನ ಒಂದೇ ಒಂದು ಕಣ್ಣೋಟದಿಂದ ನ್ಯಾಷನಲ್ ಕ್ರಶ್ ಆದ ಚಲುವೆ ಪ್ರಿಯಾ ಪ್ರಕಾಶ್ ವಾರಿಯರ್. ಹುಡುಗಿರ ಹುಬ್ಬಿಗೆ ಅಷ್ಟೊಂದು ಡಿಮ್ಯಾಂಡ್ ಇದೇ ಅಂತ ತೋರಿಸಿಕೊಟ್ಟ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣದ ಕ್ವೀನ್ ಆದರು.

ಸದ್ಯ ಮಲ್ಲು ಬೆಡಗಿ ಪ್ರಿಯಾಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಿಂದ ಸಿನಿಮಾ ಆಫರ್ ಗಳು ಬರುತ್ತಿದೆ. ಅನೇಕ ನಿರ್ಮಾಪಕರು ಪ್ರಿಯಾ ಕಾಲ್ ಶೀಟ್ ಗಾಗಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಇದರ ಜೊತೆಗೆ ಕನ್ನಡದ ಯುವ ನಿರ್ದೇಶಕರೊಬ್ಬರು ಸ್ಯಾಂಡಲ್ ವುಡ್ ಗೆ ಪ್ರಿಯಾ ಅವನ್ನು ಕರೆದುಕೊಂಡು ಬರುವ ಪ್ಲಾನ್ ಮಾಡಿದ್ದಾರೆ. ಮುಂದೆ ಓದಿ..

ನಿರ್ದೇಶಕ ಯೋಗಿ

ಕನ್ನಡದ ಯುವ ನಿರ್ದೇಶಕ, ಚಿತ್ರರಂಗದಲ್ಲಿ ಎಂಟು ವರ್ಷಗಳಿಂದ ತೊಡಗಿಸಿಕೊಂಡಿರುವ ಯೋಗಿ ತಮ್ಮ ಮೊದಲ ಸಿನಿಮಾಗೆ ಪ್ರಿಯಾ ವಾರಿಯರ್ ಅವರನ್ನು ಕರೆ ತರುವ ತಯಾರಿ ನಡೆಸಿದ್ದಾರೆ.

ಯೋಗಿ ಲವ್ಸ್ ಸುಪ್ರಿಯಾ

ನಿರ್ದೇಶಕ ಯೋಗಿ 'ಯೋಗಿ ಲವ್ಸ್ ಸುಪ್ರಿಯಾ' ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ನಾಯಕಿ ಪಾತ್ರಕ್ಕೆ ಪ್ರಿಯಾ ಅವರನ್ನು ಸಂಪರ್ಕ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನೆಯನ್ನು ಯೋಗಿ ಅವರೇ ಮಾಡಲಿದ್ದಾರೆ.

ಪ್ರಿಯಾ ಪಾತ್ರ ಏನು?

ಚಿತ್ರದ ನಾಯಕಿಯ ಪಾತ್ರ ಒಬ್ಬ ಮಿಡಲ್ ಕ್ಲಾಸ್ ಕುಟುಂಬದ ಮುಗ್ಧ ಹುಡುಗಿಯ ಪಾತ್ರವಾಗಿದೆಯಂತೆ. ಹೊರಗಡೆ ಪ್ರಪಂಚದ ಬಗ್ಗೆ ಏನು ತಿಳಿಯದ ಒಂದು ಹುಡುಗಿಯ ಪಾತ್ರಕ್ಕೆ ಪ್ರಿಯಾ ತುಂಬ ಚೆನ್ನಾಗಿ ಸೂಟ್ ಆಗುತ್ತಾರೆ ಎನ್ನುವುದು ನಿರ್ದೇಶಕರ ಅಭಿಪ್ರಾಯ ಆಗಿದೆ.

ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.

ಸಂಪರ್ಕ ಮಾಡೋಕ್ಕೆ ತುಂಬ ಕಷ್ಟ ಆಯ್ತು

ಪ್ರಿಯಾ ವಾರಿಯರ್ ಆಯ್ಕೆಯ ಬಗ್ಗೆ ಮಾತನಾಡಿದ ನಿರ್ದೇಶನ ಯೋಗಿ ''ನಾವು ಅವರ ವಿಡಿಯೋ ನೋಡಿ ಮೊದಲು ಅದನ್ನು ಶಾರ್ಟ್ ಮೂವಿ ಅಂತ ಅಂದುಕೊಂಡಿದ್ವಿ. ಆಮೇಲೆ ಗೊತ್ತಾಯಿತು ಅದು ಮಲೆಯಾಳಂ ಸಿನಿಮಾದ ಬೀಟ್ ಅಂತ. ಒಬ್ಬ ನಿರ್ದೇಶಕನಿಗೆ ಮುಖ್ಯವಾಗಿ ನಟಿಯ ಒಳ್ಳೆಯ ಎಕ್ಸ್‌ಪ್ರೆಷನ್ ಬೇಕು. ಪ್ರಿಯಾ ಅವರ ವಿಡಿಯೋ ತುಂಬ ಇಷ್ಟ ಆಗಿ ಕೊಚ್ಚಿಯಲ್ಲಿ ಇರುವ ಸ್ನೇಹಿತರ ಮೂಲಕ ಸಂಪರ್ಕ ಮಾಡಿದ್ವಿ. ಅವರು ನಂಬರ್ ಚೆಂಚ್ ಮಾಡಿದ್ದರು. ಸೋ, ಅವರನ್ನು ಭೇಟಿ ಮಾಡಲು ತುಂಬ ಕಷ್ಟ ಆಯ್ತು.'' ಎಂದು ಯೋಗಿ ಹೇಳಿದ್ದಾರೆ.

ಕಣ್ಣು ಹೊಡೆದ ಹುಡುಗಿ ಬಗ್ಗೆ ಸಾಧು ಕೋಕಿಲ ಕೊಟ್ಟ ಹೇಳಿಕೆ !

ಒನ್ ಲೈನ್ ಸ್ಟೋರಿ ಹೇಳಿದ್ದೇವೆ

''ಒನ್ ಲೈನ್ ಸ್ಟೋರಿಯನ್ನು ಪ್ರಿಯಾ ಅವರಿಗೆ ಹೇಳಿದ್ದೇವೆ. ಅವರಿಗೆ ಇಷ್ಟ ಆಗಿದೆ. ಆದರೆ ಮುಂದಿನ ವಾರ ಮತ್ತೆ ಅವರ ಜೊತೆಗೆ ಮಾತುಕತೆ ಇದೆ. ಅವರು ಒಪ್ಪಿದರೆ ಮುಂದಿನ ತಿಂಗಳಿಂದ ಶೂಟಿಂಗ್ ಶುರು ಆಗುತ್ತದೆ.'' ಎಂದು ತಮ್ಮ ಸಂತಸವನ್ನು ಯೋಗಿ ಹಂಚಿಕೊಂಡಿದ್ದಾರೆ.

ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಗೆ ತುಂಬಿ ತುಳುಕುತ್ತಿವೆ ಅವಕಾಶಗಳು.!

ಸಿಕ್ಕಾಪಟ್ಟೆ ಅವಕಾಶಗಳು

ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ಕನ್ನಡ ಮಾತ್ರವಲ್ಲದೆ ಕಾಲಿವುಡ್, ಟಾಲಿವುಡ್, ಬಾಲಿವುಡ್ ನಿಂದ ಕೂಡ ದೊಡ್ಡ ದೊಡ್ಡ ಅವಕಾಶಗಳು ಬರುತ್ತಿದೆ. ಆದರೆ ಸದ್ಯಕ್ಕೆ ಅವರು ಯಾವುದೇ ಚಿತ್ರಗಳನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

English summary
Kannada director Yogi is planning to cast actress Priya Prakash Varrier for his 'Yogi Loves Supreeya' kannada movie. Malayalam young actress Prakash Varrier is the new internet sensation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada