ಕನ್ನಡದ ಸ್ಟಾರ್ ನಿರ್ದೇಶಕರು ಮೆಚ್ಚಿದ 'ವೆನಿಲ್ಲಾ' ಸಿನಿಮಾ
'ವೆನಿಲ್ಲಾ' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಸುಮಧುರವಾದ ಹಾಡುಗಳ ಮೂಲಕ ಸಿನಿಮಾ ಕುತೂಹಲ ಹುಟ್ಟಿಸಿದೆ. ಈಗ ಕನ್ನಡದ ಸ್ಟಾರ್ ನಿರ್ದೇಶಕರು ಈ ಸಿನಿಮಾವನ್ನು ಮೆಚ್ಚಿ ಶುಭ ಹಾರೈಸಿದ್ದಾರೆ.
ನಿರ್ದೇಶಕರಾದ ಗಿರಿರಾಜ್, ಶಿವಮಣಿ, ಸಂತೋಷ್ ಆನಂದ್ ರಾಮ್, ಪಿ ಸಿ ಶೇಖರ್ ಸೇರಿದಂತೆ ಅನೇಕರು 'ವೆನಿಲ್ಲಾ' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ಕಥಾ ವಿಷಯ ಮತ್ತು ನಿರ್ದೇಶಕ ಜಯತೀರ್ಥ ಅವರನ್ನು ಇತರ ನಿರ್ದೇಶಕರು ಹೊಗಳಿದ್ದಾರೆ. ಇನ್ನು ಈ ಸ್ಟಾರ್ ನಿರ್ದೇಶಕರು ಸಹ 'ವೆನಿಲ್ಲಾ' ಸಿನಿಮಾ ನೋಡಲು ಕಾಯುತ್ತಿದ್ದಾರಂತೆ.
ನಿರ್ದೇಶಕರ ಜೊತೆಗೆ ನಟ ಪ್ರೇಮ್, ನೀನಾಸಂ ಸತೀಶ್ ಹಾಗೂ Rapper ಚಂದನ್ ಶೆಟ್ಟಿ ಕೂಡ ಸಿನಿಮಾಗೆ ವಿಶ್ ಮಾಡಿದ್ದಾರೆ. ಈ ಹಿಂದೆ ಶಿವಣ್ಣ ಸಹ ಚಿತ್ರದ ಟ್ರೇಲರ್ ಅನ್ನು ಇಷ್ಟ ಪಟ್ಟಿದ್ದರು. ಇನ್ನು 'ವೆನಿಲ್ಲಾ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಇದು ಜಯತೀರ್ಥ ನಿರ್ದೇಶನದ ಐದನೇ ಸಿನಿಮಾವಾಗಿದೆ. 'ವೆನಿಲ್ಲಾ' ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಉಳಿದಂತೆ, ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದಾರೆ. ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ಅವರು ನಿರ್ಮಿಸಿರುವ 'ವೆನಿಲ್ಲಾ' ಚಿತ್ರವನ್ನ ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











