ಟಿವಿ ಧಾರಾವಾಹಿಗಳ ಡಬ್ಬಿಂಗ್ ಗೆ ಅಡ್ಡಬಂದ ಒಕ್ಕೂಟ
ಸಿನಿಮಾ ಡಬ್ಬಿಂಗ್ ನಂತರ ಈಗ ಧಾರಾವಾಹಿಗಳನ್ನೂ ಡಬ್ಬಿಂಗ್ ಮಾಡುವ ಪ್ರಯತ್ನಗಳು ಆರಂಭವಾಗಿದ್ದು, ಕೆಲವು ಧಾರಾವಾಹಿಗಳು, ವೆಬ್ ಸೀರೀಸ್‌ಗಳು ಕನ್ನಡದಲ್ಲಿ ಪ್ರಸಾರವಾಗಲಿವೆ ಎಂದು ಜಾಹೀರಾತುಗಳನ್ನು ಸಹ ನೀಡಲಾಗಿತ್ತು.
ಆದರೆ ಅಚಾನಕ್ಕಾಗಿ ಆ ಜಾಹೀರಾತುಗಳು ಕಣ್ಮರೆಯಾಗಿದ್ದು, ಡಬ್ಬಿಂಗ್ ಅನ್ನು ಹಿರಿತೆರೆಯಿಂದ ಕಿರಿತೆರೆಗೆ ದಾಟಿಸುವ ಪ್ರಯತ್ನವನ್ನು ಕನ್ನಡ ಟೆಲಿವಿಷನ್ ಅಸೋಸಿಯೇಶನ್ ತಡೆದಿದೆ.
ಸ್ಟಾರ್ ಸುವರ್ಣ ಟೀವಿಯು ಹಾಸ್ಟೇಜ್, ಮಹಾಭಾರತ ಮತ್ತು ನಜರ್ ಹಿಂದಿ ಧಾರವಾಹಿಗಳನ್ನು ಏಪ್ರಿಲ್ 6ನೇ ತಾರೀಖಿನ ಬಳಿಕ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುವ ಬಗ್ಗೆ ಜಾಹೀರಾತುಗಳನ್ನು(Promo) ನೀಡುತಿತ್ತು ಆದರೀಗ ಪ್ರೋಮೋ ನಿಂತು ಹೋಗಿದೆ.

ಏಕಾ-ಏಕಿ ಪ್ರೋಮೋ ನಿಂತು ಹೋಗಿದೆ
ಮಹಾಭಾರತದಂತಹ ಪೌರಾಣಿಕ ಧಾರವಾಹಿಯು ಕನ್ನಡದಲ್ಲಿ ಬರುತ್ತಿರುವುದು ಕೋಟ್ಯಾಂತರ ಕನ್ನಡಿಗರಲ್ಲಿ ಉತ್ಸಾಹವನ್ನು ಹೆಚ್ಚಿಸಿತ್ತು. ಅದಕ್ಕೆ ತಕ್ಕಂತೆ ಸ್ಟಾರ್ ಸುವರ್ಣ ಟೀವಿ ಚಾನೆಲ್ ಕೂಡ ಏಪ್ರಿಲ್ ಒಂದರಿಂದ ಸಾಕಷ್ಟು ಪ್ರಚಾರವನ್ನು ನೀಡಿತ್ತು. ಆದರೆ ಈಗ ಏಕಾ-ಏಕಿ ಪ್ರೋಮೋ ನಿಂತು ಹೋಗಿದೆ.

ನಿಂತು ಹೋಗಿದೆ ಜಾಹೀರಾತು ಪ್ರೋಮೋ
ಆದರೆ ಏಪ್ರಿಲ್ 4ರ ಶನಿವಾರ ಮಧ್ಯಾಹ್ನದವರೆಗೆ ಬರುತ್ತಿದ್ದ ಡಬ್ಬಿಂಗ್ ಧಾರಾವಾಹಿಗಳ ಪ್ರಚಾರವು ಇದ್ದಕ್ಕಿದ್ದಂತೆ ನಿಂತು ಹೋಯಿತು. ಟೀವಿ ಹತೋಟಿ ಕೂಟಗಳು ಈ ಮೂರೂ ಧಾರವಾಹಿಗಳನ್ನು ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗದಂತೆ ತಡೆದಿದೆ ಎನ್ನಲಾಗಿದೆ.

ಪರ-ವಿರೋಧ ಪ್ರತಿಕ್ರಿಯೆಗಳು ಬಂದಿದ್ದವು
ಕನ್ನಡದ ವೀಕ್ಷಕರೂ ಮಹಾಭಾರತವನ್ನು ತಮ್ಮ ಭಾಷೆಯಲ್ಲಿಯೇ ನೋಡವ ಅವಕಾಶ ಇದೆ ಎಂದು ಪ್ರಚಾರ ಮಾಡಲಾಗಿತ್ತು. ಇದಕ್ಕೆ ಕೆಲವರು ಸಂತಸ ವ್ಯಕ್ತಪಡಿಸಿದ್ದರೆ, ಕೆಲವು ಅಸಾಧಾನವನ್ನೂ ವ್ಯಕ್ತಪಡಿಸಿದ್ದರು. ಆದರೀಗ ಕನ್ನಡ ಡಬ್ಬಿಂಗ್ ಧಾರವಾಹಿಯನ್ನು ನಿಲ್ಲಿಸುವ ಸಾಧ್ಯತೆ ಇದೆ.

ಡಬ್ಬಿಂಗ್ ಬೆಂಬಲಿಸಿ ಟ್ವಿಟ್ಟರ್ ಅಭಿಯಾನ
ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡುವುದನ್ನು ತಡೆದಿದ್ದರ ವಿರುದ್ಧವಾಗಿ ಟ್ವಿಟ್ಟರ್‌ನಲ್ಲಿ ಅಭಿಯಾನವನ್ನೂ ಸಹ ಕೆಲವರು ಪ್ರಾರಂಭಿಸಿದ್ದು, #ಡಬ್ಬಿಂಗ್ ಇದು ಕನ್ನಡ ಪರ, #ಡಬ್ಬಿಂಗ್ ನಮ್ಮ ಹಕ್ಕು, ಹ್ಯಾಷ್ ಟ್ಯಾಗ್ ಮೂಲಕ ಧಾರಾವಾಹಿಗಳ ಕನ್ನಡ ಡಬ್ಬಿಂಗ್ ಅನ್ನು ಬೆಂಬಲಿಸುತ್ತಿವೆ.


Click it and Unblock the Notifications











