'ಸಲಗ' ಚಿತ್ರಕ್ಕೆ ಮತ್ತೋರ್ವ ಪೊಲೀಸ್ ಅಧಿಕಾರಿಯ ಎಂಟ್ರಿ

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಚಿತ್ರಗಳಲ್ಲಿ ಸಲಗ ಚಿತ್ರ ಕೂಡ ಒಂದು. ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಸಲಗ ಕೂಡ ಸದ್ದು ಮಾಡುತ್ತ ಅದ್ಧೂರಿಯಾಗಿ ಚಿತ್ರೀಕರಣ ಮಾಡುತ್ತಿದೆ. ಸಲಗ ಕನ್ನಡ ಚಿತ್ರರಂಗದ ಬ್ಲ್ಯಾಕ್ ಕೋಬ್ರ ದುನಿಯ ವಿಜಯ್ ನಿರ್ದೇಶನದಲ್ಲಿ ಮೊದಲ ಬಾರಿಗೆ ಮೂಡಿ ಬರುತ್ತಿರುವ ಸಿನಿಮಾ.

ಈಗಾಗಲೆ ಭರ್ಜರಿ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡಕ್ಕೆ ಮತ್ತೋರ್ವ ಖ್ಯಾತ ನಟನ ಎಂಟ್ರಿ ಆಗಿದೆ. ಅಂದ್ಹಾಗೆ ಅವರು ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಪೋಲೀಸ್ ಅಧಿಕಾರಿ ಮತ್ಯಾರು ಅಲ್ಲ. ಸ್ಯಾಂಡಲ್ ವುಡ್ ನ ಖ್ಯಾತ ನಟ ಅಚ್ಯುತ್ ಕುಮಾರ್.

ವಿಭಿನ್ನ ಪಾತ್ರದ ಮೂಲಕವೆ ಕನ್ನಡಾಭಿಮಾನಿಗಳ ಮನ ಗೆದ್ದಿರುವ ಅಚ್ಯುತ್ ಸಲಗ ಚಿತ್ರದಲ್ಲಿ ಖಾಕಿ ತೊಟ್ಟು ಖದರ್ ತೋರಿಸಲಿದ್ದಾರೆ. ಈಗಾಗಲೆ ಡಾಲಿ ಧನಂಜಯ್ ಸಲಗ ಚಿತ್ರದಲ್ಲಿ ಖಡಕ್ ಪೊಲೀಸ್ ಆಧಿಕಾರಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ ಧನಂಜಯ್ ಪಾತ್ರ ಖ್ಯಾತ ಐಪಿಎಸ್ ಅಧಿಕಾರಿ ಅಣ್ಣಮಲೈ ಅವರಿಂದ ಸ್ಫೂರ್ತಿ ಪಡೆದ ಪಾತ್ರವಂತೆ.

Kannada Famous Actor Achyuth Kumar Is Playing Police Officer Role In Salaga Film

ಸದ್ಯ ಧನಂಜಯ್ ಜೊತೆಗೆಯಾಗಿದ್ದಾರೆ ನಟ ಅಚ್ಯುತ್ ಕುಮಾರ್. ಅಚ್ಯುತ್ ಇಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರಾ ಅಥವಾ ಉತ್ತಮ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಾರಾ ಎನ್ನುವ ಬಗ್ಗೆ ಚಿತ್ರತಡ ಬಹಿರಂಗ ಪಡಿಸಿಲ್ಲ. ಆದ್ರೆ ಅಚ್ಯುತ್ ಎಂಟ್ರಿ ಚಿತ್ರಕ್ಕೆ ಮತ್ತಷ್ಟು ಬಲ ಬಂದತಾಗಿದೆ. ದುನಿಯ ವಿಜಿ ಇಲ್ಲಿ ನಾಯಕನಾಗಿ ಮಿಂಚುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದ್ಹಾಗೆ ಚಿತ್ರಕ್ಕೆ ಟಗರು ಖ್ಯಾತಿಯ ನಿರ್ಮಾಪಕ ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ವಿಜಿಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಟಗರು ಖ್ಯಾತಿಯ ಸುಧಿ, ತ್ರಿವೇಣಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada Famous actor Achyuth Kumar playing police officer role in Salaga film. This film is directed by Duniya vijay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X