ಕಿರುತೆರೆಗೆ ಹೋಗುವ ಪ್ರಶ್ನೆಯೆ ಇಲ್ಲಾ: ನಟಿ ಪ್ರೇಮಾ
ಸ್ಯಾಂಡಲ್ ವುಡ್ ನಟಿ ಪ್ರೇಮಾ ಮತ್ತೆ ಬಣ್ಣ ಹಚ್ಚುವ ಬಗ್ಗೆ ಮಾತನಾಡಿದ್ದಾರೆ. ಯಾವುದೆ ಕಾರಣಕ್ಕೂ ನಟನೆಯಿಂದ ದೂರ ಸರಿಯುವ ಮಾತೆ ಇಲ್ಲ ಎಂದು ಹೇಳಿದ್ದಾರೆ. ಅನೇಕ ವರ್ಷಗಳ ಬಳಿಕ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾ ಮೂಲಕ ಮತ್ತೆ ವಾಪಸ್ ಆಗಿರುವ ಪ್ರೇಮಾ ಆನಂತರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ.
ಈ ಬಗ್ಗೆ ಮಾತನಾಡಿರುವ ಪ್ರೇಮಾ ಚಿತ್ರರಂಗದಲ್ಲಿಯೆ ಮುಂದುವರೆಯುವ ಬಗ್ಗೆ ಹೇಳಿದ್ದಾರೆ.
"ನಾನು ಚಿತ್ರರಂಗದಿಂದ ದೂರ ಉಳಿಯುವ ಮಾತೆ ಇಲ್ಲ, ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ. ಮುಂದೆ ಸಿಕ್ಕರೆ ಖಂಡಿತ ಮಾಡುವೆ" ಎಂದಿದ್ದಾರೆ. ಪ್ರೇಮಾ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪ್ರೇಮಾ ನಂತರ ಸುದ್ದಿಗಾರೊಂದಿಗೆ ಮಾತನಾಡಿದ್ದಾರೆ. "ಇತ್ತೀಚೆಗೆ ನನಗೆ ಒಪ್ಪುವ ಪಾತ್ರಗಳಿರುವ ಕಥೆಗಳು ಸಿಕ್ಕಿಲ್ಲ. ಹಲವಾರು ಚಿತ್ರಗಳ ಆಫರ್ ಬಂದಿವೆ ಆದ್ರೆ ಅವು ನನಗೆ ಇಷ್ಟ ಆಗಲಿಲ್ಲಾ, ಉತ್ತಮ ಪೋಷಕ ಪಾತ್ರ ಸಿಕ್ಕರು ನಾನು ಮಾಡುವೆ" ಎಂದು ಹೇಳಿದ್ದಾರೆ.
ಇನ್ನು ಕಿರುತೆರೆ ಎಂಟ್ರಿಯ ಬಗ್ಗೆಯೂ ಮಾತನಾಡಿದ್ದಾರೆ. "ಕಿರುತೆರೆಗೆ ಹೋಗವ ಆಲೋಚನೆ ನನಗೆ ಇಲ್ಲಾ, ಸದ್ಯಕ್ಕೆ ಕಿರುತೆರೆಗೆ ಹೋಗವ ಪ್ರಶ್ನೆಯೇ ಇಲ್ಲಾ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ಮಾಡುವೆ, ನಟನೆಯಿಂದ ದೂರ ಸರಿಯಲ್ಲ" ಎಂದು ಹೇಳುವ ಮೂಲಕ ಮತ್ತೆ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ್ಮೇಲೆ ಪ್ರೇಮಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಈಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.


Click it and Unblock the Notifications