ಸಂಜನಾಗೂ ಮುಂಚೆ ಈ ಸ್ಟಾರ್ ನಟಿ 'ಗಂಡ ಹೆಂಡತಿ' ಮಾಡಬೇಕಿತ್ತಂತೆ.!
ಹನ್ನೆರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಗಂಡ ಹೆಂಡತಿ' ಚಿತ್ರಕ್ಕೆ ಸಂಬಂಧಪಟ್ಟಂತೆ ಈಗ ನಟಿ ಸಂಜನಾ ಮತ್ತು ನಿರ್ದೇಶಕ ರವಿ ಶ್ರೀವತ್ಸ ನಡುವೆ ಮೀಟೂ ವಿವಾದ ನಡೆಯುತ್ತಿದೆ.
ಈ ಸಿನಿಮಾ ಮಾಡಬೇಕಾದರೇ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಸಂಜನಾ ನಿರ್ದೇಶಕರ ಮೇಲೆ ಆರೋಪ ಮಾಡಿದ್ದಾರೆ. ಈ ಆರೋಪವನ್ನ ತಳ್ಳಿ ಹಾಕಿರುವ ಶ್ರೀವತ್ಸ ಸಂಜನಾಗೆ ಹತ್ತು ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ.
ಈ ನಡುವೆ 'ಗಂಡ ಹೆಂಡತಿ' ಸಿನಿಮಾ ಬಗ್ಗೆ ಕುತೂಹಲಕಾರಿ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ. ಸಂಜನಾಗೂ ಮುಂಚೆ 'ಗಂಡ ಹೆಂಡತಿ' ಸಿನಿಮಾವನ್ನ ಕನ್ನಡದ ಸ್ಟಾರ್ ನಟಿಯೊಬ್ಬರು ಮಾಡಬೇಕಿತ್ತಂತೆ. ಆದ್ರೆ, ಆ ನಟಿ ಅಫರ್ ತಳ್ಳಿ ಹಾಕಿದ ಹಿನ್ನೆಲೆ ಸಂಜನಾಗೆ ಚಾನ್ಸ್ ಸಿಕ್ಕಿತ್ತಂತೆ. ಸಂಜನಾ ಈ ಸಿನಿಮಾಗೆ ಆಯ್ಕೆಯಾದ ಬಗೆಯನ್ನ ಶ್ರೀವತ್ಸ ವಿವರಿಸಿದ್ದಾರೆ. ಮುಂದೆ ಓದಿ.....

ಶ್ರೀವತ್ಸ ಆಫರ್ ಮಾಡಿದ್ದು ರಕ್ಷಿತಾಗೆ....
'ಗಂಡ ಹೆಂಡತಿ' ಸಿನಿಮಾ ಮೊದಲು ಆಫರ್ ಹೋಗಿದ್ದು ಕ್ರೇಜಿಕ್ವೀನ್ ರಕ್ಷಿತಾಗೆ. ಆದ್ರೆ, ರಕ್ಷಿತಾ ಅವರು ಈ ಚಿತ್ರವನ್ನ ಒಪ್ಪಿಕೊಂಡಿಲ್ಲ. ಹಾಗಾಗಿ, ಹೊಸರಬರನ್ನ ಹಾಕ್ಕೊಂಡು ಈ ಚಿತ್ರವನ್ನ ಮಾಡಲು ಮುಂದಾದರು. ಆಗಲೇ ನಾಯಕಿ ಪಾತ್ರಕ್ಕಾಗಿ ಹುಡುಕಾಟ ಶುರುವಾಗಿದ್ದು ಎಂದು ಶ್ರೀವತ್ಸ ಹೇಳಿಕೊಂಡಿದ್ದಾರೆ.

ರಕ್ಷಿತಾ ರಿಜೆಕ್ಟ್ ಮಾಡಿದ್ದೇಕೆ.?
ರಕ್ಷಿತಾ ಅವರಿಗೆ ಮರ್ಡರ್ ರೀಮೇಕ್ ಮಾಡುವಂತೆ ಕೇಳಿದಾಗ ಇಂತಹ ಸಿನಿಮಾಗೆ ನನ್ನನ್ನು ಕರೆಯುತ್ತಿದ್ದೀರಾ ಅಂತ ಕೇಳಿದ್ರು. ಅದಕ್ಕೆ ನಾನು ಕಲಾವಿದರು ಅಂದ್ಮೇಲೆ ಎಲ್ಲಾ ರೀತಿಯ ಪಾತ್ರಗಳನ್ನ ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ ಎಂದೆ. ಅದಕ್ಕೆ ರಕ್ಷಿತಾ ಅವರು, ಇಲ್ಲ ನಾನು ಮದುವೆ ಆಗ್ತೀದ್ದೀನಿ, ಈ ಸಿನಿಮಾ ಮಾಡೋಕೆ ಆಗಲ್ಲ ಅಂದ್ರು. ಅವರ ನಿರ್ಧಾರಕ್ಕೆ ನಾನು ತಲೆಬಾಗಿ ಅದನ್ನ ಕೈಬಿಟ್ಟೆ ಎಂದು ರವಿ ಶ್ರೀವತ್ಸ ಬಿಚ್ಚಿಟ್ಟರು.

ಆಗಲೇ ನಿರ್ಧರಿಸಿದ್ದು ಹೊಸ ನಟಿ ಬೇಕು ಅಂತ
ರಕ್ಷಿತಾ ಅವರು ಈ ಸಿನಿಮಾವನ್ನ ರಿಜೆಕ್ಟ್ ಮಾಡಿದಾಗ, ಬಹುಶಃ ಹಳೆ ನಾಯಕಿಯರು ಯಾರೂ ಈ ಪಾತ್ರವನ್ನ ಮಾಡಲಿ ಧೈರ್ಯ ಮಾಡಲ್ಲ. ಸೋ ಹೊಸಬರನ್ನ ಹಾಕ್ಕೊಂಡು ಸಿನಿಮಾ ಮಾಡೋಣ ಅಂತ ನಿರ್ಮಾಪಕರು ಮತ್ತು ನಿರ್ದೇಶಕರು ತಯಾರಾದರು. ಆಗ ಆಡಿಷನ್ ಮಾಡಿ ಆಯ್ಕೆ ಮಾಡಿಕೊಂಡಿದ್ದೇ ಸಂಜನಾ.

35 ಹುಡುಗಿಯರ ಆಡಿಷನ್ ಆಗಿತ್ತು
ಹೊಸ ನಾಯಕಿಯರ ಹುಡುಕಾಟದಲ್ಲಿ ಆಡಿಷನ್ ಮಾಡಲಾಯಿತು. ಆದ್ರೆ, ಎಲ್ಲವನ್ನ ಒಪ್ಪಿಕೊಳ್ಳುವ ನಟಿಯರು ಮರ್ಡರ್ ಸಿನಿಮಾ ಅಂದಾಕ್ಷಣ ನಾನು ಮಾಡಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದರಂತೆ. ನಿರ್ದೇಶಕರು ಹೇಳುವ ಪ್ರಕಾರ ಸುಮಾರು 35 ಹುಡುಗಿಯರನ್ನ ಆಡಿಷನ್ ಮಾಡಿದ್ದರಂತೆ. ಅವರು ಯಾರೂ ಈ ಚಿತ್ರದಲ್ಲಿ ಅಭಿನಯಿಸಲು ಧೈರ್ಯ ಮಾಡಿಲ್ಲ ಅಂತಾರೆ.

ಆಗ ಸಿಕ್ಕಿದವರೇ ಸಂಜನಾ
ಇಂತಹ ಸಮಯದಲ್ಲಿ 'ಗಂಡ ಹೆಂಡತಿ' ಚಿತ್ರಕ್ಕೆ ಸಿಕ್ಕಿದ್ದೇ ಸಂಜನಾ. ಸಂಜನಾ ಅವರಿಗೆ ಮರ್ಡರ್ ಸಿನಿಮಾ ತೋರಿಸಿದ್ದೇವೆ. ಇದೇ ರೀತಿ ಚಿತ್ರವನ್ನ ನಾವು ಮಾಡಲಿದ್ದೇವೆ ಎಂದು ಮೊದಲೇ ಹೇಳಲಾಗಿತ್ತು. ಚಿತ್ರಕತೆಯಲ್ಲಿ ನಮ್ಮ ಸಂಸ್ಕೃತಿ ಗೆ ತಕ್ಕಂತೆ ಕೆಲವು ಬದಲಾವಣೆ ಮಾಡಿಕೊಳ್ಳಲಾಯಿತು. ಇದು ಬೆತ್ತಲೆ ಸಿನಿಮಾ ಅಲ್ಲ ಎಂದು ಗಂಡ ಹೆಂಡತಿ ಚಿತ್ರದ ಬಗ್ಗೆ ಹೇಳಿದ್ದಾರೆ.


Click it and Unblock the Notifications