For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್-3 ಬಗ್ಗೆ ಪ್ರಶಾಂತ್ ನೀಲ್ ಸುಳಿವು: ಅದ್ರಲ್ಲಿ ನಾನು ಇರ್ತೀನಿ ಅಂತಿದ್ದಾರೆ ದೇವರಕೊಂಡ

  |
  KGF 3 ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೊ | FILMIBEAT KANNADA

  'ಕೆಜಿಎಫ್' ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಸಿನಿಮಾ. ಇಡೀ ದೇಶವೆ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ. ಕೆಜಿಎಫ್ ಅಂತಹ ಅದ್ಭುತ ಸಿನಿಮಾವನ್ನು ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ನೀಡಿದ ಕೀರ್ತಿ ನಿರ್ದೇಶಕ ಪ್ರಶಾಂತ್ ನೀಲ್ ಗೆ ಸಲ್ಲುತ್ತೆ.

  ಸಿನಿಮಾ ನಿರ್ಮಾಣಕ್ಕೆ ಇಳಿದ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ಸಿನಿಮಾ ನಿರ್ಮಾಣಕ್ಕೆ ಇಳಿದ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್

  ಕೆಜಿಎಫ್-1 ರಿಲೀಸ್ ಆಗಿ ಈಗಾಗಲೆ ಒಂದು ವರ್ಷ ಕಳೆದಿದೆ. ಪ್ರಶಾಂತ್ ಸದ್ಯ ಪಾರ್ಟ್-2ನಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಪ್-2 ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಗಲೆ ಪ್ರಶಾಂತ್ ನೀಲ್ ಮತ್ತೊಂದು ಭರ್ಜರಿ ಸುದ್ದಿ ನೀಡಿದ್ದಾರೆ. ಹೌದು, ಕೆಜಿಎಫ್-3 ಬಗ್ಗೆ ಸುಳಿವು ನೀಡಿದ್ದಾರೆ.

  ಕೆಜಿಎಫ್-3 ಬಗ್ಗೆ ಪ್ರಶಾಂತ್ ಹೇಳಿದ್ದೇನು?

  ಕೆಜಿಎಫ್-3 ಬಗ್ಗೆ ಪ್ರಶಾಂತ್ ಹೇಳಿದ್ದೇನು?

  ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದರ ನಡುವೆ ಪ್ರಶಾಂತ್ ನೀಲ್ ಕೆಜಿಎಪ್-3 ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಶೇಷ ಅಂದರೆ ಮಗನ ಹೇರ್ ಸ್ಟೈಲ್ ನಲ್ಲಿ 3 ಅಂತ ಬರೆದು ಫೋಟ್ ಶೇರ್ ಮಾಡಿದ್ದಾರೆ. ಜೊತೆಗೆ "ಈ ಪೋಟೋ ಪೋಸ್ಟ್ ಮಾಡಿದ ನಂತರ ನನಗೆ ಮೋಸ್ಟ್ ವಾಂಟೆಡ್ ಪ್ರಶ್ನೆ ಅಂದರೆ ಕೆಜಿಎಫ್-3 ಸಿದ್ಧವಾಗುತ್ತಿದೆಯಾ? ದುರಾಸೆ ಜಾಸ್ತಿ. ಇದಕ್ಕೆ ಪ್ರಶಾಂತ್ ನೀಲ್ ಮಾತ್ರ ಉತ್ತರಿಸಲು ಸಾದ್ಯ" ಎಂದು ಹೇಳಿ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

  #SSMB27 ಟ್ರೆಂಡಿಂಗ್: 2020ಕ್ಕೆ ಸೆಟ್ಟೇರಲಿದೆ ಪ್ರಶಾಂತ್ ನೀಲ್ ಮತ್ತು ಮಹೇಶ್ ಬಾಬು ಸಿನಿಮಾ?#SSMB27 ಟ್ರೆಂಡಿಂಗ್: 2020ಕ್ಕೆ ಸೆಟ್ಟೇರಲಿದೆ ಪ್ರಶಾಂತ್ ನೀಲ್ ಮತ್ತು ಮಹೇಶ್ ಬಾಬು ಸಿನಿಮಾ?

  ವಿಜಯ್ ದೇವರಕೊಂಡ ಹೇಳಿದ್ದೇನು?

  ವಿಜಯ್ ದೇವರಕೊಂಡ ಹೇಳಿದ್ದೇನು?

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿರುವ ವಿಜಯ್ ದೇವರಕೊಂಡ ಇತ್ತೀಚಿಗೆ ಕೆಜಿಎಫ್-3 ಬಗ್ಗೆ ಮಾತನಾಡಿದ್ದಾರೆ. ಅಂದ್ಹಾಗೆ ಕಾರ್ಯಕ್ರಮವೊಂದರಲ್ಲಿ ವಿಜಯ್ ಗೆ ಯಶ್ ಅವರಿಂದ ಏನನ್ನು ಕದಿಯಲು ಬಯಸುತ್ತೀರಾ ಎಂದು ನಿರೂಪಕ ಕೇಳಿದಾಗ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕದಿಯುತ್ತೀನಿ. ಕೆಜಿಎಫ್-3 ಬಗ್ಗೆ ಪ್ಲಾನ್ ಮಾಡುತ್ತೀವಿ ಎಂದು ಹೇಳಿದ್ದಾರೆ. ಕೆಜಿಎಫ್-3 ಬಗ್ಗೆ ಈಗಾಗಲೆ ವಿಜಯ್ ದೇವರಕೊಂಡ ಕೂಡ ಕಣ್ಣಿಟ್ಟಿದ್ದಾರೆ. ಪ್ರಶಾಂತ್ ನೀಲ್ ಕೆಜಿಎಫ್-3 ನಿರ್ದೇಶನ ಮಾಡಿದ್ರೆ ವಿಜಯ್ ನಾಯಕನಾದರು ಅಚ್ಚರಿ ಇಲ್ಲ.

  ಮೊದಲು ಕೆಜಿಎಫ್-2 ಬರಲಿ

  ಮೊದಲು ಕೆಜಿಎಫ್-2 ಬರಲಿ

  ಪ್ರಶಾಂತ್ ನೀಲ್ ಈ ಫೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎಂದು ಅನೇಕರು ಪ್ರಶ್ನಿಸುತ್ತಿದ್ದರು. ಈಗ ಪ್ರಶಾಂತ್ ಮತ್ತೆ ಕೆಜಿಎಫ್-3 ನಲ್ಲಿ ಬ್ಯುಸಿಯಾಗಲಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಇದಕ್ಕೆ ಅಭಿಮಾನಿಗಳು ಮೊದಲು ಕಜಿಎಫ್-3 ಬರ್ತಿದಿಯಾ ಎಂದು ಅಚ್ಚರಿ ಪಟ್ಟಿರೆ ಇನ್ನ ಕೆಲವರು ಕೆಜಿಎಫ್-2 ಸಿನಿಮಾ ಮೊದಲು ರಿಲೀಸ್ ಮಾಡಿ ನಂತರ ಪಾರ್ಟ್-3 ಬಗ್ಗೆ ಯೋಚಿಸಿ ಎನ್ನುತ್ತಿದ್ದಾರೆ.

  ಕೇಕ್ ನಲ್ಲೂ ಯಶ್ ದಾಖಲೆ: ರಾಕಿ ಬರ್ತ್ ಡೇ ಗೆ ವಿಶ್ವದ ಅತಿ ದೊಡ್ಡ ಕೇಕ್ಕೇಕ್ ನಲ್ಲೂ ಯಶ್ ದಾಖಲೆ: ರಾಕಿ ಬರ್ತ್ ಡೇ ಗೆ ವಿಶ್ವದ ಅತಿ ದೊಡ್ಡ ಕೇಕ್

  ಜನವರಿ 8ಕ್ಕೆ ಕೆಜಿಎಫ್-2 ಟೀಸರ್

  ಜನವರಿ 8ಕ್ಕೆ ಕೆಜಿಎಫ್-2 ಟೀಸರ್

  ಡಿಸೆಂಬರ್ ನಲ್ಲಿ ಕೆಜಿಎಫ್-2 ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿದ್ದ ಚಿತ್ರತಂಡ ಜವರಿಯಲ್ಲಿ ಟೀಸರ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಜನವರಿ 8 ಯಶ್ ಹುಟ್ಟುಹಬ್ಬ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಚಿತ್ರದಿಂದ ಟೀಸರ್ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.

  English summary
  Kannada Famous director prashanth Neel hint to at making KGF-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X