ಹರಿಕೃಷ್ಣ- ವಾಣಿ: 'ಸುಮಧುರ' ದಾಂಪತ್ಯದಲ್ಲಿ ಇದೇನಿದು ಅಪಸ್ವರ?

By ಫಿಲ್ಮಿ ಬೀಟ್ ಡೆಸ್ಕ್

ಒಬ್ಬರು ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು. ನೂರಾರು ಸಿನಿಮಾಗಳಿಗೆ ಸಂಗೀತ ನೀಡಿ ಗಾನಪ್ರಿಯರ ಹೃದಯ ಗೆದ್ದವರು. ಇನ್ನೊಬ್ಬರು ಖ್ಯಾತ ಗಾಯಕಿ. ಅವರದೆ ಶೈಲಿಯ ಧ್ವನಿ ಮೂಲಕ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದವರು. ವೃತ್ತಿಯ ವಿಚಾರದಲ್ಲಿ ಇಬ್ಬರು ತಮ್ಮದೇ ಹಾದಿಯಲ್ಲಿ ಹೆಸರು ಗಳಿಸಿದವರು ಖಾಸಗಿ ಬದುಕಿನಲ್ಲಿ ಸಂಸಾರ ನೌಕೆಯನ್ನು ಮುನ್ನಡೆಸುತ್ತಿರುವವರು. ಕನ್ನಡ ಮನೋರಂಜನಾ ಸಂಗೀತ ಲೋಕದ ಸ್ಟಾರ್ ದಂಪತಿ ಇವರುಗಳು.

ಅಂದಹಾಗೆ, ಇವರು ಮತ್ಯಾರು ಅಲ್ಲ, ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮತ್ತು ಅವರ ಪತ್ನಿ ವಾಣಿ ಹರಿಕೃಷ್ಣ.

ಇವರ ಬಗ್ಗೆ ಯಾಕಿಷ್ಟು ಪೀಠಿಕೆ ಅಂತ ಅಂದುಕೊಳ್ಳುತ್ತಿದ್ದೀರಾ? 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಸುಮಧುರವಾದ ಗೀತೆಗಳನ್ನು ಜನರಿಗೆ ನೀಡುತ್ತಿದ್ದ ಈ ದಂಪತಿ ಬದುಕಿನಲ್ಲೀಗ ಅದೇ ಸಂಗೀತ ಹೊಸ ತಾಕಲಾಟವನ್ನು ಸೃಷ್ಟಿಸಿದೆ.

ಇಂತಹದೊಂದು ಗಾಳಿ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿರುವಾಗಲೇ, ಪುಷ್ಠಿ ನೀಡುವಂತೆ ಹರಿಕೃಷ್ಣ ಅವರ ಪತ್ನಿ ಗಾಯಕಿ ವಾಣಿ ಹರಿಕೃಷ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ.

 ಬದುಕೇ ಬೇಡ ಅನ್ನಿಸಿಬಿಡುತ್ತದೆ

ಬದುಕೇ ಬೇಡ ಅನ್ನಿಸಿಬಿಡುತ್ತದೆ

"ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ " ಕುರುಕ್ಷೇತ್ರ" ಹಾಗೂ " ರಾಂಧವ" ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ" ಎಂದು ವಾಣಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ್ರೆ ವಾಣಿ ನೊಂದು, ಬೇಸತ್ತು ಬರೆದ ಹಾಗಿದೆ ಈ ಅಕ್ಷರಗಳು. ವಾಣಿ ಹರಿಕೃಷ್ಣ ಯಾವತ್ತು ಎಲ್ಲಿಯೂ ಬೇಸರವನ್ನು ಹೊರ ಹಾಕಿದವರಲ್ಲ. ಅಸಮಾಧಾನವನ್ನು ವ್ಯಕ್ತಪಡಿಸಿದವರಲ್ಲ. ದಿಢೀರನೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ತೋಡಿಕೊಂಡಿದ್ದು ಯಾಕೆ ಎಂಬ ಅನುಮಾನ ಮೂಡಿಸಿದೆ. ವಿಶೇಷ ಅಂದರೆ, ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವವರು ವಾಣಿ ಅವರ ಪತಿ ಹರಿಕೃಷ್ಣ ಹಾಗೂ ರಾಂಧವ ಚಿತ್ರದ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಹಾಯಕರಾಗಿದ್ದ ಶಶಾಂಕ್ ಶೇಷಗಿರಿ.

ನಡೆದಿದ್ದೇನು?

ನಡೆದಿದ್ದೇನು?

ಕುರುಕ್ಷೇತ್ರ ಸಿನಿಮಾದಲ್ಲಿ ವಾಣಿ ಬಳಿ ಒಂದು ಹಾಡನ್ನು ಹಾಡಿಸಲಾಗಿತ್ತು. ಇದು ವಾಣಿ ಅವರ ಮನಸ್ಸಿಗೆ ತುಂಬಾ ಹತ್ತಿರವಾದ ಹಾಡಾಗಿತ್ತು. ದೊಡ್ಡ ಸಿನಿಮಾ ಒಂದಕ್ಕೆ ಹಾಡಿದ್ದೀನಿ ಎನ್ನುವ ಸಂತಸದಲ್ಲಿದ್ದ ವಾಣಿಯವರಿಗೆ ಹಾಡು ರಿಲೀಸ್ ಆದ್ಮೇಲೆ ದೊಡ್ಡ ಶಾಕ್ ನೀಡಿದೆ. ಯಾಕೆ ಎಂದರೆ ಆ ಹಾಡಿನಲ್ಲಿದ್ದ ಧ್ವನಿ ವಾಣಿಯವರದ್ದಾಗಿರಲಿಲ್ಲ. ವಾಣಿ ಅವರ ಬಳಿ ಹಾಡಿಸಿದ ಹಾಡನ್ನು ಅನುರಾಧ ಭಾಟ್ ಬಳಿ ಹಾಡಿಸಿದ್ದಾರೆ. ವಾಣಿ ಅವರು ಹಾಡಿದ ಹಾಡು ನಂತರ ಅನುರಾಧ ಪಾಲಾಗಿದ್ದೇಕೆ? ಪತಿಯೇ ಸಂಗೀತ ನಿರ್ದೇಶಕರಾಗಿರುವಾಗ ಯಾಕೆ ಕೊನೆ ಕ್ಷಣದಲ್ಲಿ ಪತ್ನಿ ಕಂಠದಲ್ಲಿ ಹಾಡಿದ್ದ ಹಾಡನ್ನು ಬದಲಿಸಿದರು? ಇದು ಎದ್ದಿರುವ ಪ್ರಶ್ನೆ.

ರಾಂಧವ ಚಿತ್ರದಕ್ಕೆ ಹಾಡಿದ ಹಾಡು ಮಾಯ

ರಾಂಧವ ಚಿತ್ರದಕ್ಕೆ ಹಾಡಿದ ಹಾಡು ಮಾಯ

ಕುರುಕ್ಷೇತ್ರ ಸಿನಿಮಾ ಮಾತ್ರವಲ್ಲ. ಸದ್ಯ ರಿಲೀಸ್ ಗೆ ರೆಡಿಯಾಗಿರುವ 'ರಾಂಧವ' ಚಿತ್ರದಲ್ಲು ಹೀಗೆ ಆಗಿದೆ. ಹರಿಕೃಷ್ಣ ಅವರ ಜೊತೆಯೆ ಕೆಲಸ ಮಾಡಿರುವ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡಿಗೆ ವಾಣಿ ಅವರು ಕಂಠದಾನ ಮಾಡಿದ್ದರು. ಆದ್ರೆ ವಾಣಿ ಅವರ ಧ್ವನಿ ಆ ಹಾಡಿನಲ್ಲೂ ಮಾಯವಾಗಿದ್ದು ನೋಡಿ ಮತ್ತಷ್ಟು ಆಘಾತಕ್ಕೊಳಗಾಗಿದ್ದಾರೆ.

ಸಂಗೀತ ಕುಟುಂಬದ ಮಗಳು ವಾಣಿ

ಸಂಗೀತ ಕುಟುಂಬದ ಮಗಳು ವಾಣಿ

ವಾಣಿ ನಿನ್ನೆ ಮೊನ್ನೆಯಿಂದ ಹಾಡಲಿಕ್ಕೆ ಪ್ರಾರಂಭಿಸಿದವರಲ್ಲ. ಸುಮಾರು ವರ್ಷಗಳಿಂದ ಹಾಡುತ್ತಿದ್ದಾರೆ. ದೊಡ್ಡ ಸಂಗೀತ ಕುಟುಂಬದಿಂದ ಬಂದವರು. ಹಿರಿಯ ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್ ಮೊಮ್ಮಗಳು. 'ಮಧುವನ ಕರೆದರೆ...' ಹಾಡು ವಾಣಿ ಅವರಗೆ ಪ್ರಖ್ಯಾತಿ ತಂದುಕೊಟ್ಟಿತ್ತು. ಆದರೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ವೇದಿಕೆಗಳು, ಅವಕಾಶಗಳು ಸಿಕ್ಕಿಲ್ಲ ಎನ್ನುವ ಬೇಸರ ವಾಣಿ ಅವರಿಗಿದೆ. ಹೀಗಿರುವಾಗ ಪತಿ ಸಂಗೀತ ನಿರ್ದೇಶನ ನೀಡಿದ ಸಿನೆಮಾದಲ್ಲಿಯೇ ಕೊನೆಯ ಕ್ಷಣದ ಬದಲಾವಣೆಯನ್ನು ಅವರು ಸಹಜವಾಗಿಯೇ ಸಹಿಸಿಕೊಳ್ಳಲು ತಯಾರಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿರುವ ಅಂಶ.

ಇದು ಸಂಸಾರದ ನಾಲ್ಕು ಗೋಡೆಗಳ ನಡುವೆ ಕಿತ್ತಾಟಕ್ಕೆ ಕಾರಣವಾಗುವ ವಿಚಾರವಾಗಿತ್ತಷ್ಟೆ. ಆದರೆ ವಾಣಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲು ಹಂಚಿಕೊಳ್ಳುವ ಮೂಲಕ ಸ್ಟಾರ್ ದಂಪತಿ ಬದುಕಿನಲ್ಲಿ ಬಿರುಗಾಳಿ ಏನಾದರು ಎದ್ದಿದೆಯಾ ಎಂಬ ಸಹಜ ಅನುಮಾನಕ್ಕೆ ಕಾರಣವಾಗಿದೆ.

ವಾಣಿ ಏನಂತಾರೆ?

ವಾಣಿ ಏನಂತಾರೆ?

ಈ ಬಗ್ಗೆ ವಾಣಿ ಹರಿಕೃಷ್ಣ ಅವರನ್ನು ಸಂಪರ್ಕಿಸಿದಾಗ, ಕಣ್ಣೀರಿಡುತ್ತಲೇ ತಮಗೆ ಆದ ಅನ್ಯಾಯವನ್ನು 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡರು. "ಕುರುಕ್ಷೇತ್ರ ಸಿನಿಮಾದಲ್ಲಿ ತುಂಬಾ ಆಸೆಯಿಂದ ಒಂದು ಹಾಡನ್ನು ಹಾಡಿದ್ದೆ. ಅದು ಭಕ್ತಿ ಪ್ರಧಾನವಾದ ಹಾಡು. ಎರೆಡೆರಡು ಸಾರಿ ಹಾಡನ್ನು ನನ್ನ ಬಳಿ ಹಾಡಿಸಲಾಗಿತ್ತು. ರಿಲೀಸ್ ಆದ್ಮೇಲೆ ನೋಡಿದ್ರೆ ಅಲ್ಲಿ ನಾನು ಹಾಡಿದ್ದು ಇರಲ್ಲಿಲ್ಲ. ಇದನ್ನ ನೋಡಿ ನನಗೆ ತುಂಬ ಬೇಸರ ಆಗಿದೆ. ನಾನು ಯಾರ ಜೊತೆಯು ಮಾತನಾಡುತ್ತಿಲ್ಲ. ಅಷ್ಟು ಬೇಸರ ಆಗಿದೆ. ಸಾಕಷ್ಟು ಸಿನಿಮಾಗಳಿಗೆ ಹೀಗೆ ಆಗಿದೆ. ಪತಿಯೆ ಸಂಗೀತ ನಿರ್ದೇಶಕರಾಗಿ ಅವರ ಸಿನಿಮಾಗಳಿಂದನೆ ಹೀಗೆ ಆಗುತ್ತಿದೆ ಅಂತ ಹೇಳಿಕೊಳ್ಳೋಕು ಆಗಲ್ಲ. ಆದ್ರೆ ಈ ಅನ್ಯಾಯವನ್ನು ಯಾರ ಬಳಿ ಹೇಳಿಕೊಳ್ಳಲಿ. ಇದು ತುಂಬ ಸಿಲ್ಲಿಯ ವಿಚಾರ ಅಂತ ಅನಿಸಬಹುದು. ಆದ್ರೆ ನನಗೆ ಇದೂ ತುಂಬಾ ಬೇಸರ ತಂದಿದೆ, ನನಗಾದ ಅನ್ಯಾಯ ಹೇಳಿಕೊಂಡಿದ್ದರಿಂದ ಮುಂದೆ ಏನಾಗುತ್ತೊ ಗೊತ್ತಿಲ್ಲ" ಎಂದರು. ಈ ಕುರಿತು ಪತಿ ಹರಿಕೃಷ್ಣ ಅವರನ್ನು ಸಂಪರ್ಕಿಸುವ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

More from Filmibeat

English summary
Kannada famous singer Vani Harikrishna has written injustice from the film Kurukshetra and Randhawa in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X