For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ದಬಾಂಗ್-3 ನೋಡಿದವರಿಗೆ ಒಂದು ವಿಷ್ಯದಲ್ಲಿ ಭಾರಿ ನಿರಾಸೆ!

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟಿಸಿರುವ 'ದಬಾಂಗ್-3' ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ದಬಾಂಗ್ ರಿಲೀಸ್ ಆಗಿದ್ದು, ಎಲ್ಲಾ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

  ಆದರೆ, ಕನ್ನಡದಲ್ಲಿ ದಬಾಂಗ್-3 ನೋಡಲು ಚಿತ್ರಮಂದಿರಕ್ಕೆ ಹೋಗಿದ್ದವರಿಗೆ ಒಂದು ವಿಷ್ಯದಲ್ಲಿ ಭಾರಿ ನಿರಾಸೆಯಾಗಿದೆ. ಹೌದು, ದಬಾಂಗ್ ಸಿನಿಮಾದಲ್ಲಿ ಸ್ವತಃ ಸಲ್ಮಾನ್ ಖಾನ್ ಕನ್ನಡದಲ್ಲಿ ವಾಯ್ಸ್ ಡಬ್ ಮಾಡಿರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಚಿತ್ರದಲ್ಲಿ ಸಲ್ಲು ವಾಯ್ಸ್ ಇಲ್ಲದೆ ಇರುವುದು ಪ್ರೇಕ್ಷಕರಿಗೆ ಬೇಸರ ತರಿಸಿದೆ.

  ಈ ನಿರೀಕ್ಷೆಗೆ ಒಂದು ಕಾರಣ ಇದೆ. ದಬಾಂಗ್ 3 ಚಿತ್ರದ ಟ್ರೈಲರ್ ಬಂದಾಗ, ಅಲ್ಲಿ ಸಲ್ಮಾನ್ ಖಾನ್ ಡಬ್ ಮಾಡಿದ್ದರು. ''ಟೈಮು ನಂದೆ, ತಾರೀಖು ನಂದೆ...'' ಎಂದು ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದರು.

  ಇದನ್ನು ನೋಡಿದ್ದ ಪ್ರೇಕ್ಷಕರು ಬಹುಶಃ ಸಲ್ಮಾನ್ ಖಾನ್ ಅವರೇ ಕನ್ನಡದಲ್ಲಿ ವಾಯ್ಸ್ ಡಬ್ ಮಾಡಿರಬಹುದು ಎಂದು ಆಸೆಯಿಂದ ಚಿತ್ರಮಂದಿರಕ್ಕೆ ಹೋಗಿದ್ದರು. ಸಿನಿಮಾ ಬಿಡುಗಡೆಗೂ ಮುಂಚೆ ಎಲ್ಲಿಯೂ ಚಿತ್ರತಂಡ ಈ ಬಗ್ಗೆ ಬಿಟ್ಟುಕೊಟ್ಟಿರಲಿಲ್ಲ.

  ಸಲ್ಮಾನ್ ಖಾನ್ ಕನ್ನಡದಲ್ಲಿ ಡಬ್ ಮಾಡಿಲ್ಲ ಎನ್ನುವುದು ನಿರಾಸೆ ಮಾಡಿದರೂ, ಸಿನಿಮಾ ಕನ್ನಡದಲ್ಲಿ ನೋಡಲು ಚೆನ್ನಾಗಿದೆ. ಸಲ್ಲು ಅವರಿಗೆ ತಕ್ಕಂತೆ ಕನ್ನಡದಲ್ಲಿ ವಾಯ್ಸ್ ಡಬ್ ಮಾಡಿದ್ದು, 100 % ಪ್ರಯತ್ನ ಪಟ್ಟಿದ್ದಾರೆ.

  kannada-fans-are-unhappy-on-salman-khan-dabangg-3

  ಸಲ್ಲು ಬಾಯಲ್ಲಿ ಕನ್ನಡ ಕೇಳಲಿಲ್ಲವಾದರೂ, ಸಲ್ಮಾನ್ ಅವರೇ ಮಾತನಾಡಿರುವಷ್ಟು ಫೀಲ್ ಸಿಗುತ್ತೆ. ಇನ್ನುಳಿದಂತೆ ದಬಾಂಗ್ 3 ಸಿನಿಮಾಗೆ ಮೆಚ್ಚುಗೆ ಸಿಕ್ಕಿದ್ದು, ಸುದೀಪ್ ಕೂಡ ಅಬ್ಬರಿಸಿದ್ದಾರೆ.

  ಪ್ರಭುದೇವ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಸುದೀಪ್, ಸೋನಾಕ್ಷಿ, ಸೈಯಿ ಮಂಜ್ರೆಕರ್, ಅರ್ಬಾಜ್ ಖಾನ್ ಸೇರಿದಂತೆ ಹಲವರು ನಟಿಸಿದ್ದಾರೆ. ಸ್ವತಃ ಸಲ್ಲು ಮತ್ತು ಅವರ ಸಹೋದರ ಅರ್ಬಾಜ್ ಖಾನ್ ಬಂಡವಾಳ ಹಾಕಿದ್ದಾರೆ.

  English summary
  Bollywood star Salman khan and Kiccha Sudeep starrer dabangg 3 released all over world. the movie get positive response from audience. but, kannada fans are unhappy on salman khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X