For Quick Alerts
  ALLOW NOTIFICATIONS  
  For Daily Alerts

  ಅನಂತ್ ನಾಗ್, ಹಂಸಲೇಖಗೆ 'ಪದ್ಮಶ್ರೀ ಪ್ರಶಸ್ತಿ' ನೀಡುವಂತೆ ಅಭಿಯಾನ

  |

  ಭಾರತದಲ್ಲಿ ನೀಡಲಾಗುವ ಅತ್ಯಂತ ಗೌರವವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಸರ್ಕಾರ 'ಪೀಪಲ್ಸ್ ಪದ್ಮ' ಹೆಸರಿನಡಿಯಲ್ಲಿ ಕರೆ ನೀಡಲಾಗಿದೆ. ಈ ಸಾಲಿನ ಪದ್ಮ ಪ್ರಶಸ್ತಿಗಾಗಿ ಕರ್ನಾಟಕದಿಂದ ಇಬ್ಬರು ಮಹಾನ್ ಕಲಾವಿದರ ಹೆಸರು ಚರ್ಚೆಯಲ್ಲಿದೆ.

  ಕಲಾ ಕ್ಷೇತ್ರದ ವಿಭಾಗದಲ್ಲಿ ಸಂಗೀತ ನಿರ್ದೇಶಕ, ಸಾಹಿತಿಯಾದ ನಾದಬ್ರಹ್ಮ ಹಂಸಲೇಖ ಮತ್ತು ಹಿರಿಯ ನಟ ಅನಂತ್ ನಾಗ್ ಅವರ ಹೆಸರು ಸೂಚಿಸುವಂತೆ ಅಭಿಯಾನವೊಂದು ಶುರುವಾಗಿದೆ. ಅನೇಕ ಕನ್ನಡ ಅಭಿಮಾನಿಗಳು ಈ ಇಬ್ಬರು ದಿಗ್ಗಜರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದ್ದಾರೆ.

  ಹಂಸಲೇಖ ಎನ್ನುವುದಕ್ಕಿಂತ ಅವರೊಂದು ಹಾಡುಗಳ 'ಹಂಸಲೋಕ'ಹಂಸಲೇಖ ಎನ್ನುವುದಕ್ಕಿಂತ ಅವರೊಂದು ಹಾಡುಗಳ 'ಹಂಸಲೋಕ'

  ಚಿತ್ರಕಥೆ, ಸಂಭಾಷಣೆ, ಸಂಗೀತ ನಿರ್ದೇಶಕ, ಗೀತೆರಚನೆಯಲ್ಲಿ ಹಂಸಲೇಖ ದೊಡ್ಡ ಹೆಸರು. ಕನ್ನಡ ಸಿನಿಮಾ ಸಾಹಿತ್ಯ ಲೋಕದಲ್ಲಿ ಬಹಳ ವಿಶೇಷ ಸ್ಥಾನಮಾನ ಹೊಂದಿದ್ದಾರೆ. ಪ್ರಾದೇಶಿಕ ಭಾಷೆಗೆ ತಿರುವನ್ನು ಕೊಟ್ಟ ದೇಸಿ ದೊರೆ. ಹೊಸ ಬಗೆಯಲ್ಲಿ ಭಾಷೆಯನ್ನು ಮನೆಗಳಿಗೆ ಮನಗಳಿಗೆ ಕೊಂಡೊಯ್ದ ಕವಿ.

  ಸಾಹಿತ್ಯ ಚೌಕಟ್ಟನ್ನು ಅವರದೇ ರೀತಿಯಲ್ಲಿ ಮುರಿದು ಹೊಸದೊಂದು ಬಗೆಯನ್ನು ಕಟ್ಟಿದ ವ್ಯಕ್ತಿ ಹಂಸಲೇಖ. ಇಂತಹ ಸಾಧಕನಿಗೆ ಪದ್ಮಶ್ರೀ ಪ್ರಶಸ್ತಿಯ ಹಿರಿಮೆ ಸಿಗಬೇಕು ಎನ್ನುವುದು ಕೋಟ್ಯಂತರ ಅಭಿಮಾನಿಗಳ ಆಸೆ. ಸುಮಾರು 500ಕ್ಕೂ ಅಧಿಕ ಸಿನಿಮಾಗಳಿಗೆ ಕಂಪೋಸ್ ಮಾಡಿ ಸಾಹಿತ್ಯ ರಚಿಸಿದ್ದಾರೆ.

  ವರ್ಸಟೈಲ್ ನಟ
  ಕನ್ನಡ ಚಿತ್ರರಂಗ ಪ್ರತಿಭಾನ್ವಿತ ಕಲಾವಿದ ಅನಂತ ನಾಗ್. ತಮ್ಮ ವಿಶಿಷ್ಟ ಅಭಿನಯ ಹಾಗೂ ವ್ಯಕ್ತಿತ್ವದ ಮೂಲಕ ಜಂಟಲ್‌ಮ್ಯಾನ್ ಎನಿಸಿಕೊಂಡಿರುವ ನಟ. ಸ್ಯಾಂಡಲ್‌ವುಡ್ ಇಂಡಸ್ಟ್ರಿಗೆ ಅನಂತ್ ನಾಗ್ ಗೌರವದ ಪ್ರತೀಕ. ಸುಮಾರು ನಾಲ್ಕೂವರೆ ದಶಕದಿಂದ ಭಾರತೀಯ ಸಿನಿಮಾ ಲೋಕದಲ್ಲಿ ತೊಡಗಿಕೊಂಡಿರುವ ಅನಂತ್ ನಾಗ್ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಇವರಿಬ್ಬರು ನೀಡಿರುವ ಅಪಾರವಾದ ಕೊಡುಗೆಯನ್ನು ಗೌರವಿಸುವ ಸಂದರ್ಭ ಬಂದಿದೆ. 'ಪೀಪಲ್ಸ್ ಪದ್ಮ'ದಲ್ಲಿ ಅನಂತ್ ನಾಗ್ ಮತ್ತು ಹಂಸಲೇಖ ಹೆಸರು ಸೂಚಿಸುವ ಮೂಲಕ ಕನ್ನಡ ಕಲಾ ಸಾಧಕರಿಗೆ ಗೌರವಿಸಬೇಕಿದೆ.

  ಪಿಎಂ ಮೋದಿಯಿಂದ ಆಹ್ವಾನ
  ಬೇರು ಮಟ್ಟದಲ್ಲಿ ಅಸಾಧಾರಣ ಕಾರ್ಯ ಮಾಡಿದ ಮತ್ತು ಹೆಚ್ಚು ಪ್ರಚಾರಕ್ಕೆ ಬಾರದ ಜನರನ್ನು ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೋರಿದ್ದಾರೆ.

  ಮುಂದಿನ ಜೀವನ ನೆನೆಸಿಕೊಂಡ್ರೆ ಭಯ ಆಗ್ತಿದೆ! | Darshan | Aruna Kumari | Umapathy | Filmibeat Kannada

  ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು, "ಭಾರತದಲ್ಲಿ ಹಲವು ಪ್ರತಿಭಾವಂತ ಜನರಿದ್ದಾರೆ, ಅವರು ಬೇರುಮಟ್ಟದಲ್ಲಿ ಅಸಾಧಾರಣ ಕಾರ್ಯ ಮಾಡುತ್ತಿದ್ದಾರೆ. ಹಲವು ಬಾರಿ ನಾವು ಅವರ ಬಗ್ಗೆ ನೋಡುವುದಿಲ್ಲ ಅಥವಾ ಕೇಳುವುದಿಲ್ಲ. ನಿಮಗೆ ಹೆಚ್ಚು ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ತಿಳಿದಿದೆಯೇ? ನೀವು ಅವರನ್ನು #PeoplesPadma ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶನ ಸೆಪ್ಟೆಂಬರ್ 15ರವರೆಗೆ ತೆರೆದಿರುತ್ತದೆ." ಎಂದು ಆಹ್ವಾನಿಸಿದ್ದಾರೆ.

  English summary
  Kannada Fans nominated Hamsalekha and Anant Nag names to Padma Awards. government of India requested to mention names under ‘People’s Padma’ initiative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X