For Quick Alerts
  ALLOW NOTIFICATIONS  
  For Daily Alerts

  ಈ ವಾರದ ಮತ್ತೊಂದು ವಯಸ್ಕರ ಚಿತ್ರ ಆಶೀರ್ವಾದ

  By Rajendra
  |

  ಪ್ರೇಕ್ಷಕರ ಆಶೀರ್ವಾದಕ್ಕಾಗಿ ಕಾಯುತ್ತಿರುವ ಮತ್ತೊಂದು ಕನ್ನಡ ಚಿತ್ರ ಆಶೀರ್ವಾದ. ಈ ಚಿತ್ರವೂ ಈ ವಾರ (ಆ.2) ತೆರೆಗೆ ಅಪ್ಪಳಿಸುತ್ತಿದೆ. ಈ ವಾರದ ವಿಶೇಷ ಎಂದರೆ, ಮೂರು ಚಿತ್ರಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮೂರು ಚಿತ್ರಗಳು ವಯಸ್ಕರ ಸರ್ಟಿಫಿಕೇಟ್ ಪಡೆದ ಚಿತ್ರಗಳು ಎಂಬುದು ವಿಶೇಷ.

  ಬ್ಯೂಟಿ ಕ್ವೀನ್ ವೀಣಾ ಮಲಿಕ್ ಅಭಿನಯದ ಸಿಲ್ಕ್ ಸಖತ್ ಹಾಟ್, ಸಿಂಧು ಲೋಕನಾಥ್ ಹಾಗೂ ಶ್ವೇತಾ ಪಂಡಿತ್ ಜೋಡಿಯ ಕೇಸ್ ನಂ.18/9 ಚಿತ್ರಗಳು ಸಖತ್ ಕಾಂಪಿಟೇಷನ್ ನೀಡುತ್ತಿವೆ. ಇನ್ನು ಆಶೀರ್ವಾದ ಚಿತ್ರದ ವಿಚಾರಕ್ಕೆ ಬಂದರೆ ಈ ಚಿತ್ರದ ಟ್ಯಾಗ್ ಲೈನ್ 'ಶುದ್ಧರಿಗೆ ನಮನ' ಎಂಬುದು.

  ಈ ಚಿತ್ರದ ನಿರ್ದೇಶಕರು ವಿಷ್ಣು ಪ್ರಿಯನ್. ಕ್ಲಾಪ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ಜನಪ್ರಿಯ ನಿರ್ದೇಶಕ, ನಟ ಉಪೇಂದ್ರ ಅವರೇ ಇವರಿಗೆ ಸ್ಫೂರ್ತಿಯಂತೆ. ಚಿತ್ರದಲ್ಲಿ ಭಾವನಾತ್ಮಕ ಅಂಶಗಳು ಹಾಗೂ ಮನಸ್ಫೋಟಕ ಅಂಶಗಳು ಇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

  ಹಾರ್ಡ್ ವಾರೆ ವೃತ್ತಿಯಲ್ಲಿ ತೊಡಗಿಕೊಂಡಿರುವ ಸೂರ್ಯ ಮೋಹನ್ ಅವರು ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರು. ವಿ ಮನೋಹರ್ ಚಿತ್ರದ ಸಂಗೀತ ನಿರ್ದೇಶಕರು. ನವೀನ್ ಸುವರ್ಣ ಛಾಯಾಗ್ರಾಹಕರು. ಹೈಟ್ ಮಂಜು ನೃತ್ಯ, ಕೌರವ ವೆಂಕಟೇಶ್ ಅವರ ಸಾಹಸ ಈ ಚಿತ್ರಕ್ಕಿದೆ.

  ಕೆ ಆರ್ ಮೂವೀಸ್ ಅವರ ಪ್ರೇಮ ಪ್ರೀತಿ ಪ್ರಣಯ ಒಳಗೊಂಡಿರುವ ಈ 'ಆಶೀರ್ವಾದ' ಚಿತ್ರದಲ್ಲಿ ದಿಶಾ ಪೂವಯ್ಯ ನಾಯಕಿ. ಮಮತಾ ರಾವತ್ ಅವರು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada film Aashirvada slated for release on 2nd August. The film has directed by Vishnu Priyan. The film is produced by Surya Mohan, is the hero of the movie with lady lead Disha Poovaiah. Mamata Rawat sizzling in item number in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X