ಕಾಪು ಮಾರಿಯಮ್ಮ ದೇವಿ ದರ್ಶನ ಪಡೆದ ಬಹುಭಾಷಾ ನಟ ಪ್ರಕಾಶ್ ರಾಜ್
ಕಡಲನಗರಿ ಉಡುಪಿಯಲ್ಲಿ ಕೃಷ್ಣನ ದೇವಾಲಯ ಬಿಟ್ಟರೆ ಬಹಳ ಪ್ರಸಿದ್ದಿ ಪಡೆದ ಸುಪ್ರಸಿದ್ದ ದೇವಾಲಯ ಎಂದರೆ ಕಾಪು ಮಾರಿಯಮ್ಮ ದೇವಾಲಯ. ಕಾಪು ಮಾರಿಯಮ್ಮ ದೇವಾಲಯಕ್ಕೆ ಹಲವಾರು ಭಕ್ತರು ಆಗಮಿಸುತ್ತಾರೆ. ದೇವಿಯಲ್ಲಿ ಉಡುಪಿ ಜನರಿಗೆ ಬಹಳ ನಂಬಿಕೆ ಇದೆ. ಈ ದೇವಾಲಯದಲ್ಲಿ ವರುಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಇನ್ನು ದೇವಾಲಯಕ್ಕೆ ಊರಿನವರು ಅಲ್ಲದೇ ಬೇರೆ ಭಾಗದ ಭಕ್ತರು, ಸಿನಿಮಾ ಕಲಾವಿದರು, ರಾಜಕೀಯ ಮುಖಂಡರು ಭೇಟಿ ನೀಡುತ್ತಾರೆ.
ಕಾಪು ಮಾರಿಗುಡಿ ದೇವಾಲಯಕ್ಕೆ ಚಿತ್ರ ನಟ ಪ್ರಕಾಶ್ ರಾಜ್ ಭೇಟಿ ನೀಡಿದ್ದರು. ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಸನ್ನಿಧಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಹಾಗೆಯೇ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ಈಗಾಗಲೇ ಹೊಸ ಮಾರಿಗುಡಿ ನಿರ್ಮಾಣದ ಕಾರ್ಯ ಬಹಳ ಭರದಿಂದ ಸಾಗುತ್ತಿದೆ. ಮಾರಿಯಮ್ಮ ದೇವಾಲಯ ನವೀಕರಣ ಮಾಡಲು ಅನೇಕ ಜನರ ಪರಿಶ್ರಮ ಕೂಡ ಇದೆ. ಹೊಸ ಮಾರಿ ಗುಡಿ ನಿರ್ಮಾಣ ಆಗುತ್ತಿದ್ದು ಪ್ರಕಾಶ್ ರಾಜ್ ಕಾಮಗಾರಿ ವೀಕ್ಷಣೆಯನ್ನು ಮಾಡಿದರು. ಹಾಗೆಯೇ ಇಳಕಲ್ಲಿನ ಕಲಾತ್ಮಕ ಶೈಲಿಯ ಕೆತ್ತನೆಗಳ ಬಗ್ಗೆ ಮಾಹಿತಿ ಪಡೆದರು. ಕೆತ್ತನೆ ಶೈಲಿ ನೋಡಿ ಬಹಳ ಖುಷಿ ಪಟ್ಟರು. ಹಾಗೆಯೇ ವಿಶಿಷ್ಟವಾಗಿ ಮೂಡಿಬರುತ್ತಿರುವ ದೇಗುಲದ ಕಲಾ ಪ್ರಕಾರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಕಾಪು ದೇವಿಯ ದರ್ಶನ ಪಡೆದ ನಟ
ಕಾಪು ದೇವಾಲಯಕ್ಕೆ ಪ್ರಕಾಶ್ ರಾಜ್ ಆಗಾಗ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದರು. ಸಿನಿಮಾಗಳಲ್ಲಿ ಮಾತ್ರವಲ್ಲದೇ ರಾಜಕೀಯರಂಗದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಾರೆ. ಹಿಂದೂ ವಿರೋಧಿ ಎನ್ನುವವರು ಇದ್ದಾರೆ. ಅವರನ್ನು ದೇವಾಲಯದಲ್ಲಿ ನೋಡಿ ಕೆಲವರು ಅಚ್ಚರಿಪಟ್ಟಿದ್ದಾರೆ. ಫೋಟೊಗಳನ್ನು ನೋಡಿ ಕೆಲವರು ಟೀಕಿಸುತ್ತಿದ್ದಾರೆ.

ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳದ ನಟ
ಟೀಕೆಗಳಿಗೆ ಪ್ರಕಾಶ್ ರಾಜ್ ತಲೆಕೆಡಿಸಿಕೊಳ್ಳುವವರಲ್ಲ. ದೇವಾಲಯದ ಆಡಳಿತ ಮಂಡಳಿ ಸಾಥ್ ನೀಡಿತು. ಹಾಗೆಯೇ ದೇವಾಲಯದ ನಿರ್ಮಾಣದ ಬಗ್ಗೆ ವಿಸ್ತೃತ ಮಾಹಿತಿ ಕೂಡ ನೀಡಿದರು. ಹಾಗೆಯೇ ಕಾಪು ಮಾರಿಯಮ್ಮ ದೇವರ ಪ್ರಸಾದವನ್ನು ನೀಡಿ ಗೌರವಿಸಿದರು . ಈ ವೇಳೆ ಸಂದರ್ಭ ದೇವಳದ ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರೀ, ಗುತ್ತಿಗೆದಾರ ಪ್ರಶಾಂತ್ ಶೆಟ್ಟಿ, ಕುಂದಾಪುರ ಮತ್ತು ಸ್ವಚ್ಛತಾ ಸಮಿತಿಯ ಮುಖ್ಯ ಸಂಚಾಲಕ ಅನಿತ್ ಶೆಟ್ಟಿ ಕಾಪು ಉಪಸ್ಥಿತರಿದ್ದರು.
ಬಹುಭಾಷಾ ನಟ
ರಾಜಕೀಯವಾಗಿ ಪ್ರಕಾಶ್ ರಾಜ್ ಅವರನ್ನು ವಿರೋಧಿಸುವವರು ಇದ್ದಾರೆ. ಈ ಬಹುಭಾಷಾ ನಟನ ಹೇಳಿಕೆಗಳನ್ನು ಟೀಕಿಸುವವರು ಇದ್ದಾರೆ. ಆದರೆ ಅವರ ನಟನೆಗೆ ಮಾತ್ರ ದೊಡ್ಡ ಅಭಿಮಾನಿ ಬಳಗವಿದೆ. ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲೂ ನಟಿಸಿ ಗೆದ್ದಿದ್ದಾರೆ.


Click it and Unblock the Notifications











