twitter
    For Quick Alerts
    ALLOW NOTIFICATIONS  
    For Daily Alerts

    8 ವರ್ಷದ ಬಾಲಕಿಯ ಸಾವಿಗೆ ನ್ಯಾಯ ಕೇಳುತ್ತಿದೆ ಕನ್ನಡ ಚಿತ್ರರಂಗ

    By Pavithra
    |

    ಜಮ್ಮು ಕಾಶ್ಮೀರದಲ್ಲಿ 8ವರ್ಷದ ಬಾಲಕಿಯ ಮೇಲೆ ಆರು ಮಂದಿ ವ್ಯಕ್ತಿಗಳು ಸೇರಿ ಡ್ರಗ್ಸ್ ನೀಡಿ ಮೂರು ದಿನಗಳ ಕಾಲ ಲೈಂಗಿಕವಾಗಿ ಕಿರುಕುಳ ನೀಡಿ, ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದಾರೆ. ಬಾಲಕಿಯನ್ನ ಕಿಡ್ನಾಪ್ ಮಾಡಿ ದೇವಿಸ್ಥಾನ್ ಎಂಬ ದೇವಾಲಯದಲ್ಲಿಟ್ಟು ಅತ್ಯಾಚಾರವೆಸಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಗುವಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ಆರಂಭ ಆಗಿದೆ.

    ಸ್ಯಾಂಡಲ್ ವುಡ್ ನ ಕಲಾವಿದರು ಈ ಬಗ್ಗೆ ಟ್ವೀಟ್ ಮಾಡಿ ಜಸ್ಟಿಸ್ ಫಾರ್ ಆಸಿಫಾ ಎಂದು ಟ್ವೀಟ್ ಮಾಡುತ್ತಿದ್ದಾರೆ. ನಟಿ ಅಮೂಲ್ಯ ಬಾಲಕಿಯ ಎರಡು ಪೋಟೋಗಳನ್ನ ಹಾಕಿ ಈ ಪ್ರತಿ ಬಾರಿ ಈ ಮಗುವಿನ ಪೋಟೋ ನೋಡಿದಾಗ ಏಂಜೆಲ್ ಎನ್ನಿಸುತ್ತಿತ್ತು, ಆದರೆ ಅವಳು ಕೊನೆಯ ಉಸಿರೆಳೆಯುವಾಗ ಎಷ್ಟು ಕಷ್ಟವಾಗುರುತ್ತೆ ಎಂದಿದ್ದಾರೆ.

    ಇನ್ನು ನಟಿ ರಕ್ಷಿತಾ ಕೂಡ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದು. "ನಿಜಕ್ಕೂ ಇದು ಬೇಸರದ ಸಂಗತಿ, ನಮ್ಮ ದೇಶದಲ್ಲಿ ಇನ್ನೂ ಇಂತಹ ಘಟನೆಗಳು ನಡೆಯುತ್ತಿದೆ. 8ವರ್ಷದ ಬಾಲಕಿ ಮೇಲೆ ನಾಲ್ಕು ದಿನಗಳು ಅತ್ಯಾಚಾರವಾಗಿದೆ ಆದರೂ ಅವರಿಗೆ ಸರ್ಕಾರ ಏನು ಮಾಡುತ್ತಿಲ್ಲ ಬಾಲಕಿಯ ಕುಟುಂಬಕ್ಕೆ ನ್ಯಾಯ ಬೇಕಾಗಿದೆ. ಮಗುವಿನ ಸಾವಿನ ನ್ಯಾಯಕ್ಕಾಗಿ ನಾವೆಲ್ಲರೂ ಒಂದಾಗಬೇಕಿದೆ" ಎಂದಿದ್ದಾರೆ.

    Kannada film actresses tweeted for justice

    ನಟಿ ರಾಗಿಣಿ ಚೇಂಜ್ ಓ ಆರ್ ಜಿ ಪಿಟಿಷನ್ ನಲ್ಲಿ ಸೈನ್ ಮಾಡಿದ್ದು "ನಾವೆಲ್ಲರೂ ಒಂದೇ ಎಂದು ತೋರಿಸಲು ಸಮಯವಾಗಿದೆ. ಇಂತಹ ಪ್ರಮುಖ ಅಪರಾಧ ಮಾಡುವ ಜನರಿಗೆ ಮರಣದಂಡನೆ ಆಗಬೇಕು ಎಂದಿದ್ದಾರೆ"

    ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಮಗುವಿನ ಪೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ ಇದು ತುಂಬಾ ಭಯಂಕರವಾದ ವಿಚಾರ ಸಾವಿಗೆ ನ್ಯಾಯ ಬೇಕಾಗಿದೆ ಎಂದಿದ್ದಾರೆ.

    English summary
    Kathua Rape Case: Kannada Actresses Rakshitha Prem, Ragini Dwivedi, Amulya, Sharmila Mandre have taken social media platform to demand #Justice.
    Thursday, April 19, 2018, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X