ಕೃಷ್ಣ- ಮಿಲನ ನಾಗರಾಜ್ ಮಗು ಮುಖ ರಿವೀಲ್ , ಮಗು ಮುಖ ನೋಡಿ ಖುಷಿಪಟ್ಟ ಅಭಿಮಾನಿಗಳು
ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಮಿಲನಾ ನಾಗರಾಜ್ ಹಾಗೂ ಕೃಷ್ಣ ಜೋಡಿ ಕೂಡ ಒಂದು. ಇವರಿಬ್ಬರ ಪ್ರೀತಿಯ ಪ್ರತೀಕವಾಗಿ ಮುದ್ದಾದ ಮಗು ಕೂಡಾ ಇದೀಗ ಅಮ್ಮನ ಮಡಿಲು ಸೇರಿದೆ. ಹೌದು ಡಾರ್ಲಿಂಗ್ ಕೃಷ್ಣ ಹಾಗೆಯೇ ಮಿಲನಾ ನಾಗರಾಜ್ ದಂಪತಿ ಗೆ ಈಗಾಗಲೇ ಮುದ್ದಾದ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳ ಖುಷಿ ಇಮ್ಮಡಿಗೊಳಿಸಿದೆ. ಮಿಲನ ನಾಗರಾಜ್ ಇದೀಗ ಆರಾಮವಾಗಿದ್ದು ಮನೆಗೆ ಮಹಾಲಕ್ಷ್ಮೀ ಅದ್ದೂರಿಯಾಗಿ ವೆಲ್ ಕಂ ಮಾಡಲಾಗಿದೆ. ಇನ್ನು ಮಿಲನ ನಾಗರಾಜ್ ಪತಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ವಿಡಿಯೋ ನೋಡಿದ ಅಭಿಮಾನಿಗಳು ಬಹಳ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ. ವಿಡಿಯೋ ಕೆಳಗಡೆ ವೆಲ್ ಕಂ ಟು ಅವರ್ ಲಿಟಲ್ ವರ್ಲ್ಡ್ "ಪರಿ" ಎಂದು ಬರೆದುಕೊಂಡಿದ್ದಾರೆ.ಮಗಳು ಹುಟ್ಟುವ ವೇಳೆ ಕೃಷ್ಣ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ.ಬಹಳ ಖುಷಿಯಿಂದ ಹೆಂಡತಿ ಮಗುವನ್ನು ಬಾಚಿ ತಬ್ಬಿಕೊಂಡಿದ್ದಾರೆ. ಹಾಗೆಯೇ ಮಿಲನ ಅವರನ್ನು ಅಷ್ಟೇ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ನೋಡಿದ ನೆಟ್ಟಿಗರು ಬಹಳ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ಕೆಲಸಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನು ಕೃಷ್ಣ ಹಾಗೂ ವಿಲನ ಅವರು ಮನೆಗೆ ಬಂದಾಗ ಮಿಲನ ಬಳಿಗೆ ಅವರು ಸಾಕಿದ ನಾಯಿ ಓಡಿಕೊಂಡು ಬಂದು ಮುದ್ದಾಡಿದೆ. ಅದು ಬಂದ ಕೂಡಲೇ ಮಿಲನ ಅವರ ಮೊಗದಲ್ಲಿ ಬಹಳಷ್ಟು ಖುಷಿ ಕೂಡ ವ್ಯಕ್ತವಾಗಿದೆ.

ಮಿಲನ ಮೊದಲು ತನ್ನಗೆ ಇಷ್ಟವಾದ ಪ್ರಾಣಿಯನ್ನು ಮುದ್ದಿಸಿ ಅದರ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ. ಮನೆಗೆ ಮಿಲನ ಅವರನ್ನು ಕರೆದುಕೊಂಡು ಬರುವ ವೇಳೆ ಮನೆಗೆ ಹಿರಿಯರು ಆರತಿ ಎತ್ತಿ ಮನೆ ಒಳಗೆ ಕರೆದುಕೊಂಡು ಬರುತ್ತಾರೆ. ಹಾಗೆಯೇ ಮನೆ ಒಳಗೆ ಬಹಳ ಅದ್ದೂರಿಯಾಗಿ ವೆಲ್ ಕಂ ಮಾಡಲಾಗುತ್ತದೆ. ವೆಲ್ ಕಂ ಬೇಬಿ ಪರಿ ಎಂದು ಬರೆದು ಹಾರ್ಟ್ ಶೇಪ್ ಅನ್ನು ಹಾಕಲಾಗಿದೆ. ಹಾಗೆಯೇ ಮಗುವನ್ನು ನೋಡಿ ಅವರ ಮನೆಯ ನಾಯಿ ಕೂಡ ಬಹಳ ಖುಷಿ ಪಟ್ಟಿದೆ. ಮಗುವನ್ನು ನೋಡಿ ಮನೆ ಮಂದಿಯ ಖುಷಿ ಇನ್ನೂ ದುಪ್ಪಟ್ಟಾಗಿದೆ.
ಮಗುವಿನ ಜೊತೆ ಕಾಲ ಕಳೆದ ಮನೆಮಂದಿ
ಮಗುವಿನ ಜೊತೆ ಸಮಯವನ್ನು ಮನೆ ಮಂದಿಎಲ್ಲರೂ ಕಳೆಯುತ್ತಿದ್ದಾರೆ. ಇದೆಲ್ಲವನ್ನೂ ನೋಡಿದ ಕೃಷ್ಣ ಸಂತೋಷ ಇನ್ನೂ ದುಪ್ಪಟ್ಟಾಗಿದೆ. ಬಳಿಕ ಕೃಷ್ಣ ಹಾಗೂ ಮಿಲನ ಮಗುವನ್ನು ಎತ್ತಿಕೊಂಡು ಕೇಕ್ ಕಟ್ ಮಾಡುತ್ತಾರೆ. ಕೃಷ್ಣ ಮೊದಲಿಗೆ ಮಿಲನ ಅವರಿಗೆ ತಿನ್ನಿಸಿ ಅದಾದ ಬಳಿಕ ಅವರ ಮನೆಯ ಮಗುವ ಹಾಗೆ ಸಾಕಿದ ಮುದ್ದಾದ ನಾಯಿ ಮರಿಗೆ ಕೇಕ್ ತಿನ್ನಿಸಿ ಖುಷಿಪತ್ತಿದ್ದಾರೆ. ಬಳಿಕ ಕೃಷ್ಣ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ. ಇದೆಲ್ಲವನ್ನೂ ನೋಡಿದ ಅಭಿಮಾನಿಗಳ ಖುಷಿ ಕೂಡ ಬಹಳ ಹೆಚ್ಚಾಗಿದೆ.
ಮುದ್ದಾದ ಮಗುವಿಗೆ ಹರಿಸಿದ ಫ್ಯಾನ್ಸ್
ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ಮಗು ಮುಖ ರಿವಿಲ್ ಆಗಿದೆ. ಮಗು ಮುಖ ನೋಡಿ ಅನೇಕ ಜನರು ಹಾರೈಸುತ್ತಿದ್ದಾರೇ. ಬಹಳ ಖುಷಿಪಡುತ್ತಾ ಇದ್ದಾರೆ. ಇನ್ನು ಮಗುವನ್ನು ನೋಡಿದ ಅವರ ಮನೆಯ ರೋಮಿಯೋ ಬಹಳ ಖುಷಿ ಪಟ್ಟು ಮುದ್ದಾಡುತ್ತಿರುವುದನ್ನು ನೋಡಿದ ಅನೇಕ ಜನರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಅನ್ ಕಂಡಿಶ್ನಲ್ ಲವ್ ಎಂದು ಬರೆದುಕೊಂಡಿದ್ದಾರೆ. ರೋಮಿಯೋ ಗೆ ಮಿಲನ ನಾಗರಾಜ್ ಎಂದರೆ ಬಹಳ ಪ್ರೀತಿ ಆಕೆಯ ಜೊತೆ ಹೆಚ್ಚಾಗಿ ರೋಮಿಯೋ ಕಾಲ ಕಳೆಯುತ್ತಿದ್ದ. ಮಿಲನ ಹಾಗೂ ಮಗು ಮನೆಗೆ ಎಂಟ್ರಿ ಕೊಡುತ್ತಿದ್ದ ವೇಳೆ ರೋಮಿಯೋ ಖುಷಿ ದುಪ್ಪಟ್ಟಾಗಿದೆ


Click it and Unblock the Notifications











