For Quick Alerts
  ALLOW NOTIFICATIONS  
  For Daily Alerts

  ನ್ಯೂಯಾರ್ಕ್ ಭಾರತೀಯ ಸಿನಿಮೋತ್ಸವದಲ್ಲಿ 'ಬಳೆಕೆಂಪ' ಸ್ಪರ್ಧೆ

  By Harshitha
  |

  'ತಿಥಿ' ಸಿನಿಮಾ ಮಾಡಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡು, ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಕಥೆಗಾರ ಈರೇಗೌಡ ಇದೀಗ 'ಬಳೆಕೆಂಪ' ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ.

  ಸ್ಪೇನ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2018 ಸೇರಿದಂತೆ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಪಡೆದುಕೊಂಡಿರುವ 'ಬಳೆಕೆಂಪ' ಚಿತ್ರ ಇದೀಗ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಗೆ 'ಅತ್ಯುತ್ತಮ ಚಿತ್ರ' ಹಾಗೂ 'ಅತ್ಯುತ್ತಮ ನಿರ್ದೇಶಕ' ವಿಭಾಗದಲ್ಲಿ ನಾಮಿನೇಟ್ ಆಗಿದೆ.

  ತಾವು ಆಕ್ಷನ್ ಕಟ್ ಹೇಳಿರುವ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವುದಕ್ಕೆ ಈರೇಗೌಡ ಸಂತಸಗೊಂಡಿದ್ದಾರೆ.

  ಸ್ಪರ್ಧೆಗೆ ನಿಂತ ತಿಥಿ ಈರೇ ಗೌಡರ 'ಬಳೆಕೆಂಪ'ಸ್ಪರ್ಧೆಗೆ ನಿಂತ ತಿಥಿ ಈರೇ ಗೌಡರ 'ಬಳೆಕೆಂಪ'

  ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ 'ಬಳೆಕೆಂಪ' ಚಿತ್ರದ ಮೇ 9 ರಂದು ಪ್ರದರ್ಶನಗೊಳ್ಳಲಿದೆ. ಹೀಗಾಗಿ, ಮೇ 7 ರಂದೇ ನ್ಯೂಯಾರ್ಕ್ ಗೆ ಈರೇಗೌಡ ಪ್ರಯಾಣ ಬೆಳೆಸಲಿದ್ದಾರೆ.

  ಅಂದ್ಹಾಗೆ, 'ಬಳೆಕೆಂಪ' ಬಳೆಗಾರನ ಸುತ್ತ ನಡೆಯುವ ಕಥೆ. 'ಬಳೆಕೆಂಪ' ಚಿತ್ರದಲ್ಲಿ ಜ್ಞಾನೇಶ್, ಭಾಗ್ಯಶ್ರೀ, ಚಂದ್ರಶೇಖರ್.ಸಿ.ಎಸ್ ಮತ್ತು ನಾಗರಾಜು.ಬಿ ತಾರಾಗಣದಲ್ಲಿ ಇದ್ದಾರೆ.

  English summary
  Kannada Film 'Balekempa' has been nominated for New York Indian Film Festival 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X